ನಟಿ ಸಂಜನಾ ಗಲ್ರಾನಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಖುದ್ದು ಅವರೇ ಮಾತನಾಡಿದ ವಿಡಿಯೋ ಹರಿಬಿಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಪತಿಯ ಕುರಿತು ಗುಟ್ಟೊಂದನ್ನು ರಟ್ಟು ಮಾಡಿದ್ದಾರೆ.
ಇದೇ ಮೊದಲ ಬಾರಿಗೆ ಸಂಜನಾ ವೈದ್ಯರಾಗಿರುವ ತನ್ನ ಪತಿಯ ಬಗ್ಗೆ ಮಾತನಾಡಿದ್ದಾರೆ. ಡ್ರಗ್ಸ್ ಜಾಲದಲ್ಲಿ ಅರೆಸ್ಟ್ ಆಗಿ ಜೈಲುವಾಸಿಯಾಗಿದ್ದ ಸಂಜನಾ ಆಗಲೂ ಪತಿಯ ಕುರಿತು ಏನನ್ನೂ ಹೇಳಿರಲಿಲ್ಲ. ಇದೇ ಮೊದಲ ಬಾರಿಗೆ ತನ್ನ ಪತಿ, ಅವರ ಕೆಲಸ, ಅವರ ಜವಾಬ್ದಾರಿ ಎಲ್ಲವುದರ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ ಈ ನಟಿ.
ಸಂಜನಾ ಪತಿ ಡಾ ಅಜೀಜ್ ಪಾಷಾ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ವ್ಯಾಸ್ಕುಲಾರ್ ಸರ್ಜನ್ ಆಗಿ ಕೆಲಸ ಮಾಡುತ್ತಿದ್ದಾರೆ. ತನ್ನ ಪತಿ ಆತ ಎಂದು ಸಂಜನಾ ಎಂದೂ ಬಹಿರಂಗವಾಗಿ ಒಪ್ಪಿಕೊಂಡೇ ಇಲ್ಲ. ಇದೇ ಮೊದಲ ಬಾರಿಗೆ ತನಗೆ ಕೊರೊನಾ ಸೋಂಕು ತಗುಲಿರುವ ವಿಚಾರ ತಿಳಿಸುವ ವಿಡಿಯೋದಲ್ಲಿ ಪತಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ ಸಂಜನಾ.
ನನ್ನ ಗಂಡ ಓರ್ವ ಸರ್ಜನ್, ಆತ ಎರಡು ಹಂತದ ವ್ಯಾಕ್ಸಿನ್ ಪಡೆದಿದ್ದಾರೆ. ಆದರೂ ಅವರಿಗೆ ಸೋಂಕು ತಗುಲಿದೆ. ಅವರಿಗೆ ಸೋಂಕು ಇರುವುದು ತಿಳಿದು ನಾನು ಪರೀಕ್ಷೆ ಮಾಡಿಸಿಕೊಂಡೆ. ಆಗ ನನಗೂ ಸೋಂಕು ತಗುಲಿರುವುದು ಇಂದು ದೃಢಪಟ್ಟಿದೆ. ಅವರೊಬ್ಬ ಕೊರೊನಾ ವಾರಿಯರ್, ಜನರ ಜೀವ ಉಳಿಸುವ ವೈದ್ಯ. ಅವರನ್ನು ಮನೆಯಲ್ಲಿ ಇರಿ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಯಾರ್ಯಾರಿಗೆ ಸಾಧ್ಯವಿದೆಯೋ ಅವರೆಲ್ಲಾ ದಯವಿಟ್ಟು ಮನೆಯಲ್ಲಿ ಇರಿ ಎಂದು ಸಂಜನಾ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಇದೆಲ್ಲದರ ನಡುವೆ ಸಂಜನಾ ಪತಿಯ ಬಗ್ಗೆ ಕ್ಲಾರಿಟಿ ಸಿಕ್ಕಂತಾಗಿರುವುದು ವಿಶೇಷ.