ಅರ್ಜುನ್ ರೆಡ್ಡಿಯಂತಹ ಡಾರ್ಕ್ ಸಿನಿಮಾ ನಿರ್ದೇಶಿಸಿರೋ ಸಂದೀಪ್ ರೆಡ್ಡಿ ವಂಗ ಶೀಘ್ರದಲ್ಲೇ ಮಹೇಶ್ ಬಾಬುಗೆ ಡೈರೆಕ್ಷನ್ ಮಾಡಲಿದ್ದಾರೆ. ಮಹೇಶ್ ಬಾಬು ಕೂಡ ಕಬೀರ್ ಸಿಂಗ್ ನಿರ್ದೇಶಕನ ಸ್ಕ್ರಿಪ್ಟ್ ಕೇಳಿ ಫಿದಾ ಆಗಿದ್ದಾರೆ. ಹೀಗಾಗಿ ಅತೀ ಶೀಘ್ರದಲ್ಲೇ ಸಂದೀಪ್ ರೆಡ್ಡಿ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬುಗೆ ಆ್ಯಕ್ಷನ್ ಕಟ್ ಎನ್ನಲಿದ್ದಾರೆ.
ಮಹೇಶ್ ಬಾಬು ಹಾಗೂ ಸಂದೀಪ್ ರೆಡ್ಡಿ ವಂಗ ಜೊತೆಯಾಗಿರೋದು ಸಿನಿಮಾಗಾಗಿ ಅಲ್ಲ. ಕಮರ್ಷಿಲ್ ಜಾಹೀರಾತಿಗಾಗಿ ಈ ಜೋಡಿ ಒಟ್ಟಿಗೆ ಕೆಲಸ ಮಾಡಲಿದೆ. ಇದೇ ಮೊದಲ ಬಾರಿಗೆ ಪ್ರಿನ್ಸ್ ಇದುವರೆಗೂ ತನ್ನ ಸಿನಿಮಾ ನಿರ್ದೇಶಿಸದೇ ಇರೋ ನಿರ್ದೇಶಕನ ಜಾಹೀರಾತಿನಲ್ಲೆ ಕೆಲಸ ಮಾಡುತ್ತಿದ್ದಾರೆ. ಸಂದೀಪ್ ರೆಡ್ಡಿ ಸ್ಕ್ರಿಪ್ಟ್ ಕೇಳಿ ಮಹೇಶ್ ಹಿಂದೆ ಮುಂದೆ ನೋಡದೇ ಸಂದೀಪ್ಗೆ ಜೈ ಎಂದಿದ್ದಾರೆ ಎನ್ನುತ್ತಿವೆ ಟಾಲಿವುಡ್ ಮೂಲಗಳು.
ಸಂದೀಪ್ ರೆಡ್ಡಿ ವಂಗ ಸದ್ಯ ಬಾಲಿವುಡ್ ಸಿನಿಮಾ ಎನಿಮಲ್ಗೆ ನಿರ್ದೇಶನದತ್ತ ಹೆಚ್ಚು ಗಮನ ಹರಿಸಿದ್ದಾರೆ. ಇದೇ ಕಥೆಯನ್ನ ಮಹೇಶ್ ಬಾಬುಗೂ ಹೇಳಿದ್ದರು. ಆದ್ರೆ, ಭರತ್ ಅನೇ ನೇನು, ಮಹರ್ಷಿಯಂತಹ ಸಿನಿಮಾ ನೀಡಿರೋ ಪ್ರಿನ್ಸ್ ಫ್ಯಾನ್ಸ್ ಡಾರ್ಕ್ ಕಥೆಯನ್ನ ಒಪ್ಪೋದಿಲ್ಲ. ಹೀಗಾಗಿ ಎನಿಮಲ್ ಪ್ರಾಜೆಕ್ಟ್ ಅನ್ನ ಕೈ ಬಿಟ್ಟರು ಎನ್ನಲಾಗಿದೆ. ಈಗ ಅದೇ ಚಿತ್ರದಲ್ಲಿ ರಣ್ಬೀರ್ ಕಪೂರ್ ನಟಿಸುತ್ತಿದ್ದಾರೆ.
ಇತ್ತ ಮಹೇಶ್ ಬಾಬು ಕೂಡ ಸರ್ಕಾರು ವಾರಿ ಪಾಠ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಹೇಶ್ ಜೊತೆ ಕೀರ್ತಿ ಸುರೇಶ್ ಪ್ರಮುಖ ಮಾತ್ರದಲ್ಲಿ ನಟಿಸುತ್ತಿದ್ದು, ವಿಜಯ್ ದೇವರಕೊಂಡ ನಟಿಸಿದ ಗೀತಾ ಗೋವಿಂದಂ ಸಿನಿಮಾದ ನಿರ್ದೇಶಕ ಪರಶುರಾಮ್ ಸಿನಿಮಾ ಸಾರಥ್ಯವಹಿಸಿದ್ದಾರೆ