ಸ್ಯಾಂಡಲ್ವುಡ್ನ ಕ್ಯೂಟ್ ನಟಿ ಅಮೂಲ್ಯ ವಿವಾಹದ ಬಳಿಕ ತೆರೆಮರೆಗೆ ಸರಿದ್ದಾರೆ. ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳದೇ ಹೋದ್ರೂ, ಸಿನಿಮಾರಂಗದೊಂದಿಗಿನ ನಂಟನ್ನು ಇನ್ನೂ ಕಡಿತ ಮಾಡಿಕೊಂಡಿಲ್ಲ. ಸದಾ ಚಿತ್ರರಂಗದೊಂದಿಗೆ ಸಂಪರ್ಕದಲ್ಲಿದ್ದಾರೆ. ಕೊರೊನಾ ಸಂಕಷ್ಟ ಕಾಲದಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದು, ಅಮೂಲ್ಯ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ.
2017ಮೇ 12 ರಂದು ಅಮೂಲ್ಯ ಹಾಗೂ ಜಗದೀಶ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಂದು (ಮೇ 12) ವಿವಾಹವಾಗಿ ನಾಲ್ಕು ವರ್ಷಗಳನ್ನು ಪೂರೈಸಿದ್ದು, 5ನೇ ವರ್ಷಕ್ಕೆ ಕಾಲಿಟ್ಟಿದೆ. ಆದ್ರೆ, ಈ ಬಾರಿ ಕೊರೊನಾ ಹಾವಳಿಯಿಂದಾಗಿ ವಿವಾಹ ವಾರ್ಷಿಕೋತ್ಸವವನ್ನ ಸರಳವಾಗಿ ಆಚರಿಸಲು ತೀರ್ಮಾನಿಸಿದ್ದಾರೆ.
ಕಳೆದ ವರ್ಷ ಕೊರೊನಾ ಆರಂಭ ಆಗಿದ್ರೂ, ಅಮೂಲ್ಯ ಹಾಗೂ ಜಗದೀಶ್ ಸುಮಾರು 50 ಗರ್ಭಿಣಿಯರಿಗೆ ಸೀಮಂತ ಮಾಡಿಸಿದ್ದರು. ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗರ್ಭಿಣಿಯರಿಗೆ ಸೀಮಂತ ಕಾರ್ಯ ನಡೆದಿತ್ತು. ಅಲ್ಲದೆ, ಉಚಿತ ಮಾಸ್ಕ್ ಅನ್ನೂ ವಿತರಣೆ ಮಾಡಿದ್ದರು.
ಅಮೂಲ್ಯ ಹಾಗೂ ಪತಿ ಸದಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಿನಿಮಾದಿಂದ ದೂರವಿದ್ದರೂ, ಸಮಾಜಕ್ಕೆ ಹತ್ತಿರವಾಗುವ ಕೆಲಸವನ್ನು ಅಮೂಲ್ಯ ಮಾಡುತ್ತಿದ್ದಾರೆ. ಹೀಗಾಗಿ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿರೋ ಅಮೂಲ್ಯ ದಂಪತಿ ಹೀಗೆ ಸಾದಾ ಖುಷಿ ಖುಷಿಯಾಗಿರಲಿ ಅನ್ನೋದೇ ಅಭಿಮಾನಿಗಳ ಹಾರೈಕೆ.