ಮದುವೆಗೂ ಸಿನಿಮಾಗೂ ಸಂಬಂಧವೇ ಇಲ್ಲ ಅಂತ ಮದುವೆ ನಂತ್ರ ಕೂಡ ಸಿನಿಮಾಗಳಲ್ಲಿ ನಟಿಸಿ ಸೈ ಅನ್ನಿಸಿಕೊಳ್ತಿರೋ ಚೆಲುವೆ ಸಮಂತಾ ಅಕ್ಕಿನೇನಿ. ಗ್ಲಾಮರಸ್ ಲುಕ್ ನಲ್ಲಿ ದರ್ಶನ ಕೊಟ್ಟು ಪದೇ ಪದೇ ಸುದ್ದಿ ಆಗ್ತಿರ್ತಾರೆ ಸ್ಯಾಮ್. ಕೆಲ ದಿನಗಳ ಹಿಂದೆ ಸಮಂತಾ ಪೋಸ್ಟ್ ಮಾಡಿದ್ದ ಬಿಕಿನಿ ಫೋಟೋ ಭಾರೀ ಚರ್ಚೆ ಹುಟ್ಟಾಕಿತ್ತು.ಇದೀಗ ಅಂತದ್ದೇ ಮತ್ತೊಂದು ಫೋಟೋ ಇಂಟರ್ ನೆಟ್ ಗೆ ಕಿಚ್ಚು ಹಚ್ಚಿದೆ. ಸ್ಯಾಮ್ ವೈಟ್ ಕಲರ್ ಬ್ಯಾಕ್ ಲೆಸ್ ಟಾಪ್ ನಲ್ಲಿ ಕಾಣಿಸಿಕೊಂಡಿರೋ ಫೋಟೋ ಕಳೆದೆರಡು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಬ್ಯಾಕ್ ಮಾತ್ರವಲ್ಲದೇ ಫ್ರಂಟ್ ಬ್ಯೂಟಿಯನ್ನು ತೋರಿಸುವಂತೆ ಅಕ್ಕಿನೇನಿ ಫ್ಯಾಮಿಲಿ ಸೊಸೆ ಕೊಟ್ಟಿರೋ ಪೋಸ್ ಅಭಿಮಾನಿಗಳ ಮನಗೆದ್ದಿದೆ. ಸೆಲೆಬ್ರಿಟಿಗಳು ಕೂಡ ಸ್ಯಾಮ್ ಗ್ಲಾಮ್ ಲುಕ್ಕಿಗೆ ಫಿದಾ ಆಗೋಗಿದ್ದಾರೆ.
ರಕುಲ್ ಪ್ರೀತ್ ಸಿಂಗ್ Ufffff ಅಂತ ಉದ್ಘಾರ ತೆಗೆದು ಬೆಂಕಿ ಇಮೋಜಿ ಹಾಕಿ ಕಾಮೆಂಟ್ ಮಾಡಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಸೊಸೆ ಉಪಾಸನಾ, ಮಗಳು ಸುಶ್ಮಿತಾ ಕೂಡ ಸಮಂತಾ ಹಾಟ್ ಪೋಸ್ ಗೆ ಮೆಚ್ಚಗೆ ವ್ಯಕ್ತಪಡಿಸಿದ್ದಾರೆ. ಸ್ಯಾಮ್ ಪೋಸ್ಟ್ ಗೆ ಸಾವಿರಾರು ಲೈಕ್ಸ್, ಕಾಮೆಂಟ್ಸ್ ಸಿಕ್ಕಿದೆ. ಮದುವೆ ನಂತ್ರ ರಂಗಸ್ಥಳಂ, ಮಜಿಲಿ, ಹೋ ಬೇಬಿ, ಯೂಟರ್ನ್, ಮಹಾನಟಿ ರೀತಿಯ ಹಿಟ್ ಸಿನಿಮಾಗಳಲ್ಲಿ ಸಮಂತಾ ನಟಿಸಿ ಗೆದ್ದಿದ್ದಾರೆ.
ಸಮಂತಾ ಅಕ್ಕಿನೇನಿ ಸದ್ಯ ‘ಶಾಕುಂತಲಂ’ ಅನ್ನೋ ಸಿನಿಮಾ ಒಪ್ಪಿಕೊಂಡಿದ್ದಾರೆ. ಮತ್ತೊಂದು ತಮಿಳು ಚಿತ್ರದಲ್ಲೂ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಲಾಕ್ಡೌನ್ ನಿಂದ ಚಿತ್ರೀಕರಣ ತಡವಾಗ್ತಿದ್ದು, ಶೀಘ್ರದಲ್ಲೇ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ.