ಈದ್ ಹಬ್ಬಕ್ಕೆ ಒಂದಾದ್ರೂ ಸಲ್ಮಾನ್ ಖಾನ್ ಸಿನಿಮಾ ಬಿಡುಗಡೆಯಾಗುತ್ತೆ. ಈ ಬಾರಿ ಕೂಡ ರಾಧೆ ಸಿನಿಮಾ ಬಿಡುಗಡೆ ಮಾಡೋಕೆ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿತ್ತು. ಆದ್ರೆ, ಕೊರೊನಾ ಎರಡನೇ ಅಲೆಯಿಂದ ದೇಶಾದ್ಯಂತ ಥಿಯೇಟರ್ಗಳನ್ನು ಬಂದ್ ಮಾಡಲಾಗಿದೆ. ಹೀಗಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡೋಕೆ ಸಲ್ಮಾನ್ ಖಾನ್ ನಿರ್ಧರಿಸಿದ್ದರು. ಅದ್ರಂತೆ ಮೇ 13 ರಂದು ಜೀ 5 ಒಟಿಟಿಯಲ್ಲಿ ರಾಧೆ ಬಿಡುಗಡೆಯಾಗಿ, ಮೊದಲ ದಿನವೇ ದಾಖಲೆ ಬರೆದಿದೆ.
ಸಲ್ಮಾನ್ ಖಾನ್ ರಾಧೆ ಸಿನಿಮಾವನ್ನು ಏಕಕಾಲಕ್ಕೆ ಡಿಟಿಹೆಚ್ನಲ್ಲಿ ಪೇ ಪರ್ ವ್ಯೂ ಮಾದರಿಯಲ್ಲಿ ಹಾಗೂ ಒಟಿಟಿ ಎರಡೂ ವೇದಿಕೆಗಳಲ್ಲೂ ಬಿಡುಗಡೆ ಮಾಡಿದ್ದರು. ಸಲ್ಮಾನ್ ಖಾನ್ ಅವ್ರೇ ಸಿನಿಮಾದ ನಿರ್ಮಾಪಕರೂ ಆಗಿರೋದ್ರಿಂದ ಕಳೆದ ಹಲವು ದಿನಗಳಿಂದ ಒಟಿಟಿಯಲ್ಲಿ ರಿಲೀಸ್ ಬಗ್ಗೆ ಮಾತುಕತೆ ನಡೀತಾನೇ ಇತ್ತು. ಅದ್ರಂತೆ ಮೇ 13ರಂದು ಜೀ 5ನಲ್ಲಿ ಗ್ರ್ಯಾಂಡ್ ರಿಲೀಸ್ ಆಗಿದೆ.
ರಾಧೆ ಮೇ 13ರಂದು, ಅಂದ್ರೆ ಮೊದಲ ದಿನವೇ ಸಿನಿಮಾ ನೋಡಲು ಜನರು ಮುಗಿಬಿದ್ದಿದ್ರು. ಹೀಗಾಗಿ ಫಸ್ಟ್ ಡೇ ಜೀ 5 ಸರ್ವರ್ ಕ್ರ್ಯಾಶ್ ಆಗಿತ್ತು. ಹಾಗಿದ್ರೂ, ಸುಮಾರು 42 ಲಕ್ಷ ಮಂದಿ ಸಿನಿಮಾ ವೀಕ್ಷಿಸಿದ್ದಾರೆ. ಈ ಮೂಲಕ ಸಲ್ಮಾನ್ ಖಾನ್ ಒಟಿಟಿಯಲ್ಲೂ ಹೊಸ ದಾಖಲೆಯನ್ನು ಬರೆದಿದ್ದು, ಈ ಖುಷಿಯನ್ನು ಸಲ್ಮಾನ್ ಖಾನ್ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ಥಿಯೇಟರ್ನಲ್ಲಿ ಗ್ರ್ಯಾಂಡ್ ರಿಲೀಸ್ ಆಗ್ಬೇಕಿದ್ದ ಸಿನಿಮಾ ಲಾಕ್ಡೌನ್ನಲ್ಲಿ ಹಿನ್ನೆಲೆಯಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ರಾಧೆ ಕಳೆದ ವರ್ಷವೇ ಬಿಡುಗಡೆಯಾಗ್ಬೇಕಿತ್ತು. ಆಗ್ಲೂ ಒಟಿಟಿ ರಿಲೀಸ್ ಬಗ್ಗೆ ಸುದ್ದಿ ಹರಿದಾಡಿತ್ತು. ಆಗ ಥಿಯೇಟರ್ ಮಾಲೀಕರು ಸಲ್ಮಾನ್ ಖಾನ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು. ಹೀಗಾಗಿ ಈದ್ಗೆ ಥಿಯೇಟರ್ನಲ್ಲೇ ರಿಲೀಸ್ ಮಾಡೋದಾಗಿ ಸಲ್ಮಾನ್ ಖಾನ್ ಹೇಳಿದ್ರು. ಆದ್ರೆ, ಕೊರೊನಾ ಎರಡನೇ ಅಲೆ ಆರಂಭ ಆಗಿದ್ರಿಂದ ಒಟಿಟಿಯಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಿದೆ.