ನಟ ಪವನ್ ಕಲ್ಯಾಣ್ ಹೊಸಾ ಚಿತ್ರ ವಕೀಲ್ ಸಾಬ್ ಟ್ರೇಲರ್ ಬಿಡುಗಡೆಯಾಗಿದೆ. ಆದ್ರೆ ಪವರ್ ಸ್ಟಾರ್ ಅಭಿಮಾನಿಗಳು ಟ್ರೇಲರ್ ನೋಡಿ ಖುಷಿ ಪಡೋ ಬದ್ಲು ನೂಕುನುಗ್ಗಲಲ್ಲಿ ಗಾಯಗೊಂಡಿದ್ದಾರೆ. ಇಂಥಾ ವಿಚಿತ್ರ ಸನ್ನಿವೇಶ ಆಂಧ್ರಪ್ರದೇಶದ ಸಂಗಮ್ ಶರತ್ ಥಿಯೇಟರ್ ನಲ್ಲಿ ನಡೆದಿದೆ. ಚಿತ್ರಮಂದಿರದಲ್ಲಿ ಬಿಡುಗಡೆಯಾದ ಟ್ರೇಲರ್ ನೋಡೋ ಭರಾಟೆಯಲ್ಲಿ ಇಷ್ಟೆಲ್ಲಾ ಅವಾಂತರ ನಡೆದಿದೆ.
ಅಂದ್ಹಾಗೆ ಸಂಗಮ್ ಶರತ್ ಥಿಯೇಟರ್ ನಲ್ಲಿ ವಕೀಲ್ ಸಾಬ್ ಟ್ರೇಲರ್ ಅದ್ಧೂರಿಯಾಗಿ ಬಿಡುಗಡೆಯಾಗುತ್ತದೆ ಎಂದು ತಿಳಿದಿತ್ತು. ಹಾಗಾಗಿ ನಿಗದಿತ ಸಮಯಕ್ಕಿಂತ ಮುಂಚೆಯೇ ಅಭಿಮಾನಿಗಳು ಥಿಯೇಟರ್ ಗೆ ಆಗಮಿಸಿ ಪವನ್ ಕಟೌಟ್ ಗೆ ಪೂಜೆ ಮಾಡಿದ್ರು. ಸಂಜೆ 4 ಗಂಟೆಗೆ ಟ್ರೇಲರ್ ಬಿಡುಗಡೆಯಾಗೋದು ನಿರ್ಧಾರವಾಗಿತ್ತು. ಆದ್ರೆ ಅಲ್ಲಿ ನಡೆದಿದ್ದೇ ಬೇರೆ.
ನೂಕುನುಗ್ಗಲು ಅದ್ಯಾವ ಪರಿ ಹೆಚ್ಚಿತು ಎಂದರೆ ಥಿಯೇಟರ್ ಕಿಟಕಿ ಗಾಜುಗಳೆಲ್ಲಾ ಪುಡಿ ಪುಡಿ ಆಗಿಬಿಟ್ಟಿತ್ತು. ವಿಶಾಖಪಟ್ಟಣದಲ್ಲಿ ನಡೆದ ಈ ದುರ್ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದಾರೆ. ಪವನ್ ಕಲ್ಯಾಣ್ ಅಭಿಮಾನಿಗಳ ಈ ಗಲಾಟೆ ದೊಡ್ಡಮಟ್ಟಿಗೆ ನಡೆದಿದೆ. ಹಿಂದಿಯ ಖ್ಯಾತ ಚಿತ್ರ ‘ಪಿಂಕ್’ ನ ತೆಲುಗು ರೀಮೇಕ್ ವಕೀಲ್ ಸಾಬ್. ಅಲ್ಲಿ ಅಮಿತಾಭ್ ಬಚ್ಚನ್ ನಿರ್ವಹಿಸಿದ್ದ ಪಾತ್ರವನ್ನು ತೆಲುಗಿನಲ್ಲಿ ಪವನ್ ಕಲ್ಯಾಣ್ ನಿರ್ವಹಿಸಿದ್ದಾರೆ.