ಫೇಸ್ಬುಕ್, ಇನ್ಸ್ಟಾ, ಟ್ವಿಟ್ಟರ್ ಕೊನೆಗೆ ಕೂ ಆ್ಯಪ್ ಓಪನ್ ಮಾಡಿದ್ರು, ಆರ್ ಆರ್ ಆರ್ ಸಿನಿಮಾ ಪೋಸ್ಟರ್ ಕಣ್ಣಿಗೆ ರಾಚುತಿದೆ. ಅದು ಬರೀ ಆ ಸಿನಿಮಾ ಪೋಸ್ಟರ್ ಆಗಿದ್ರೆ ಯಾರು ಇಷ್ಟು ತಲೆ ಕೆಡಿಸಿಕೊಳ್ತಿರಲಿಲ್ಲ. ಆ ಪೋಸ್ಟರ್ ನಲ್ಲಿ ಮೋದಿ ಇಂದ ಹಿಡಿದು ಧೋನಿವರೆಗೂ ಎಲ್ಲರೂ ಕಾಣಿಸ್ತಿದ್ದಾರೆ. ರಾಮ್ ಚರಣ್ ತೇಜಾ, ಜ್ಯೂನಿಯರ್ ಎನ್ ಟಿಆರ್ ಬದಲು ಬೇರೆ ಸ್ಟಾರ್ ಗಳ ಮುಖವನ್ನ ಎಡಿಟ್ ಮಾಡಿ ಅಭಿಮಾನಿಗಳು ಶೇರ್ ಮಾಡ್ತಿದ್ದಾರೆ. ನಮ್ಮ ಕನ್ನಡ ಸಿನಿ ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಮುಖವನ್ನು ಆರ್ ಆರ್ ಆರ್ ಪೋಸ್ಟರ್ ಗೆ ಅಂಟಿಸಿ ಸಂಭ್ರಮಿಸುತ್ತಿದ್ದಾರೆ. ಸುದೀಪ್ , ಯಶ್ ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಪೋಸ್ಟರ್ ರೆಡಿ ಮಾಡಿ ಶೇರ್ ಮಾಡಿದ್ದಾರೆ. ಅದು ಸರಿ ಕಿಚ್ಚ- ಯಶ್ ಹೀಗೆ ಬೈಕ್ ಏರಿ ರೋಡಿಗೆ ಹೋದರೆ ಟ್ರಾಫಿಕ್ ಪೊಲೀಸರು ಅಡ್ಡ ಹಾಕೋದಿಲ್ವಾ ? ಖಂಡಿತ ಹಾಕ್ತಾರೆ.
ಸುದೀಪ್- ಯಶ್ ಫೋಟೋ ಸೇರಿಸಿ, ಪೋಸ್ಟರ್ ರೆಡಿ ಮಾಡಿದ್ದಾರೆ ಸರಿ. ಆದರೆ ಆ ಬೈಕ್ ನಲ್ಲಿ ನಂಬರ್ ಪ್ಲೇಟು ಇಲ್ಲ ಇಬ್ಬರೂ ಹೆಲ್ಮೆಟ್ ಅಂತೂ ಮೊದ್ದೇ ಹಾಕಿಲ್ಲ. ಹೆಲ್ಮೆಟ್ ಇಲ್ಲದೇ ನಂಬರ್ ಪ್ಲೇಟ್ ಹಾಕದೇ ಬೈಕ್ ಚಲಾಯಿಸೋದು ತಪ್ಪು. ಒಂದು ವೇಳೆ ಇವರಿಬ್ಬರು ಹೀಗೆ ರಿಯಲ್ ಆಗಿ ಬೈಕ್ ಏರಿ ಬಂದರೆ, ಅಭಿಮಾನಿಗಳಿಗೆ ಹಬ್ಬ. ಹಾಗಂತ ಇಂಥ ಬೈಕ್ ಏರಿ ಬರೋದು ತಪ್ಪು ಬಿಡಿ. ಟ್ರಾಫಿಕ್ ಪೊಲೀಸರ ಕಣ್ಣು ತಪ್ಪಿಸಿ ಓಡಾಡಬಹುದು.
ಆರ್ ಆರ್ ಆರ್ ಸಿನಿಮಾ 1929ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಅಂದಿನ ಕಾಲದಲ್ಲಿ ಹೆಲ್ಮೆಟ್ ಕಡ್ಡಾಯ ಇರಲಿಲ್ಲ. ಬೈಕ್ ಗಳಿಗೆ ನಂಬರ್ ಪ್ಲೇಟ್ ಮೊದಲೇ ಇರಲಿಲ್ಲ. ಹಾಗಾಗಿ ರಾಜಮೌಳಿ ಆ ರೀತಿ ಪೋಸ್ಟರ್ ಡಿಸೈನ್ ಮಾಡಿಸಿದ್ದಾರೆ. ಇದೇ ಪೋಸ್ಟರ್ ಬಳಸಿ ಸೈಬರಾಬಾದ್ ಪೊಲೀಸರು ದ್ವಿಚಕ್ರ ವಾಹನ ಸವಾರರಿಗೆ ಸಂಚಾರಿ ನಿಯಮದ ಪಾಠ ಮಾಡಿದ್ದಾರೆ. ಸುದೀಪ್, ಯಶ್ ಅಭಿಮಾನಿಗಳು ಪೋಸ್ಟರ್ ಮಾಡಿದಾಗ ಇದನ್ನ ಗಮನಿಸಬೇಕಾಗಿತ್ತು. ತಮಾಷೆ ಪಕ್ಕಕ್ಕಿಟ್ಟು ಹೇಳೋದಾದ್ರೆ, ಅದ್ಯಾವುದೋ ವಿಚಾರಕ್ಕೆ ಸುದೀಪ್ ಅಭಿಮಾನಿಗಳು ಯಶ್ ಮೇಲೆ ಗರಂ ಆಗಿದ್ದರು. ಸುದೀಪ್ ಕೂಡ ಕೊಂಚ ಬೇಸರಗೊಂಡಿದ್ದರು. ಅದನ್ನೆಲ್ಲಾ ಮರೆತು, ಕಿಚ್ಚ- ಯಶ್ ಇಬ್ಬರೂ ಒಟ್ಟಿಗೆ ಒಂದೇ ಚಿತ್ರದಲ್ಲಿ ನಟಿಸಿದ್ರೆ, ಇಂಡಿಯನ್ ಬಾಕ್ಸ್ ಆಫೀಸ್ ರೆಕಾರ್ಡ್ಸ್ ಉಡೀಸ್ ಆಗೋದ್ರಲ್ಲಿ ಅನುಮಾನವೇ ಇಲ್ಲ.