ಪ್ಯಾನ್ ಇಂಡಿಯಾದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ RRR. ರಾಜಮೌಳಿ ನಿರ್ದೇಶನದ ಈ ಸಿನಿಮಾ ಅಕ್ಟೋಬರ್ 13ರಂದು ದಸರಾ ಹಬ್ಬಕ್ಕೆ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಸದ್ಯಕ್ಕೀಗ ಇನ್ನೂ ಚಿತ್ರೀಕರಣದ ಹಂತದಲ್ಲೇ ಇರೋ ಸಿನಿಮಾದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಕ್ಲೈಮ್ಯಾಕ್ಸ್ ಆ್ಯಕ್ಷನ್ ಸೀನ್ಗಳನ್ನ ಶೂಟ್ ಮಾಡಲಾಗಿದೆ. ಇದೇ ವೇಳೆ ಮಾರ್ಚ್ 15 ರಂದು RRR ಸಿನಿಮಾದ ಪ್ರಮುಖ ಪಾತ್ರಗಳಲ್ಲೊಂದಾಗ ಸೀತಾ ಫಸ್ಟ್ ಲುಕ್ ಅನ್ನ ರಿವೀಲ್ ಮಾಡಲಿದೆ.
ಸ್ವತ: ಆಲಿಯಾ ಭಟ್ ಈ ವಿಷಯವನ್ನ ತನ್ನ ಅಭಿಮಾನಿಗಳಿಗೆ ತಿಳಿಸಿದ್ದಾರೆ. ರಾಮ್ ಚರಣ್ ತೇಜಾಗೆ ಜೋಡಿಯಾಗಿರೋ ಆಲಿಯಾ ಲುಕ್ ಹೇಗಿರುತ್ತೆ ಅನ್ನೋ ಕುತೂಹಲ ಸದ್ಯ ಎಲ್ಲರಲ್ಲೂ ಕಾಡುತ್ತಿದೆ. ಆಲಿಯಾ ಇದೇ ಮೊದಲ ಬಾರಿಗೆ ಸೌತ್ ಇಂಡಿಯನ್ ಫಿಲ್ಮ್ ಮೇಕರ್ಸ್ ಜೊತೆ ಕೆಲಸ ಮಾಡುತ್ತಿದ್ದು, ಆಲಿಯಾ ಕೂಡ ಥ್ರಿಲ್ ಆಗಿದ್ದಾರೆ.
ಆಂಧ್ರ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್ ಚರಣ್ ನಟಿಸುತ್ತಿದ್ದು, ಆಲಿಯಾ ಸೀತೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ಆಲಿಯಾ ಪಾತ್ರ ಬಹುತೇಕ ಮುಗಿದಿದೆ. ಇನ್ನು ಹಾಡಿನ ಚಿತ್ರೀಕರಣಕ್ಕೆ ಏಪ್ರಿಲ್ನಲ್ಲಿ RRR ಸೆಟ್ಟಿಗೆ ಸೇರಲಿದ್ದಾರೆ ಎನ್ನಲಾಗಿದೆ.
ರಾಜಮೌಳಿಯ RRR ಸಿನಿಮಾ ಕುತೂಹಲ ಕೆರಳಿಸೋಕೆ ಕಾರಣ ರಾಮ್ ಚರಣ್ ಹಾಗೂ ಜೂ.ಎನ್ಟಿರ್. ಇಬ್ಬರೂ ಒಟ್ಟಿಗೆ ನಟಿಸುತ್ತಿರೋ ಮೊದಲ ಸಿನಿಮಾವಿದು. ಹೀಗಾಗಿ ಇಬ್ಬರ ಅಭಿಮಾನಿಗಳೂ ಈ ಸಿನಿಮಾಗಾಗಿ ತುದಿಗಾಲಲ್ಲಿ ನಿಂತಿದ್ದಾರೆ.