ಭಾರತದ ಅತಿದೊಡ್ಡ ಆ್ಯಕ್ಷನ್ ಸಿನಿಮಾ #RRR ಹೊಸ ರಿಲೀಸ್ ಡೇಟ್ ಘೋಷಣೆ ಆಗಿದೆ. ರಾಜಮೌಳಿ ನಿರ್ದೇಶನದಲ್ಲಿ ರಾಮ್ ಚರಣ್ ತೇಜಾ ಮತ್ತು ಜ್ಯೂನಿಯರ್ ಎನ್ ಟಿಆರ್ ಅಭಿನಯದ ಮೆಗಾ ಮಲ್ಟಿಸ್ಟಾರರ್ ಸಿನಿಮಾ ಇದು. ಜಕ್ಕಣ್ಣ ಈಗಾಗಲೇ ಸಣ್ಣ ಸಣ್ಣ ಝಲಕ್ ತೋರಿಸಿ ಸಿನಿಮಾ ಮೇಲೆ ಇನ್ನಿಲ್ಲದ ಕುತೂಹಲ ಕೆರಳುವಂತೆ ಮಾಡಿದ್ದಾರೆ. ₹400 ಕೋಟಿ ಬಜೆಟ್ ನಲ್ಲಿ ತೆಲುಗು, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಸಿನಿಮಾ ತೆರೆಗಪ್ಪಳಿಸ್ತಿದೆ. ಲಾಕ್ ಡೌನ್ ನಿಂದ ಪದೇ ಪದೇ ಸಿನಿಮಾ ರಿಲೀಸ್ ಪೋಸ್ಟ್ ಪೋನ್ ಆಗ್ತಾ ಬರ್ತಿದ್ದು, ಚಿತ್ರತಂಡ ಇದೀಗ ಹೊಸ ರಿಲೀಸ್ ಡೇಟ್ ಘೋಷಿಸಿದೆ. ಜನವರಿ 7ರಂದು #RRR ಸಿನಿಮಾ ವಿಶ್ವದಾದ್ಯಂತ ಗ್ರ್ಯಾಂಡ್ ರಿಲೀಸ್ ಆಗಲಿದೆ. ಆದರೆ ಮೌಳಿ ಸಿನಿಮಾ ರಿಲೀಸ್ ಡೇಟ್ ನೋಡಿ ರಕ್ಷಿತ್ ಶೆಟ್ಟಿ, ಆಲಿಯಾ ಭಟ್, ಪ್ರಭಾಸ್ ತಲೆಕೆಡಿಸಿಕೊಂಡಿದ್ದಾರೆ.
ಜನವರಿ 7 ತಾರೀಖಿನ ಹಿಂದೆ ಮುಂದೆ ರಕ್ಷಿತ್, ಡಾರ್ಲಿಂಗ್, ಆಲಿಯಾ ಸಿನಿಮಾಗಳು ರಿಲೀಸ್ ಆಗ್ತಿದೆ. ಅದ್ರಲ್ಲೂ ಜನವರಿ 7ರಂದೇ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ “ಗಂಗೂಬಾಯ್ ಕಾಥಿಯಾವಾಡಿ” ರಿಲೀಸ್ ಪ್ಲಾನ್ ನಡೀತಿದೆ. ವಿಶೇಷ ಏನಂದ್ರೆ, RRR ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರೋ ಆಲಿಯಾ ಭಟ್ ಆ ಚಿತ್ರದಲ್ಲಿ ಗಂಗೂಬಾಯಿ ಪಾತ್ರ ಮಾಡಿದ್ದಾರೆ. ಹಾಗಾಗಿ 2 ಆಲಿಯಾ ಭಟ್ ಸಿನಿಮಾಗಳ ನಡುವೆಯೇ ಪೈಪೋಟಿ ಏರ್ಪಡಲಿದೆ. ಇನ್ನು ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಚಿತ್ರವನ್ನು ಡಿಸೆಂಬರ್ 31ಕ್ಕೆ ರಿಲೀಸ್ ಮಾಡೋದಾಗಿ ಹೇಳಿದ್ದಾರೆ. ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾ. ಹಾಗಾಗಿ ಮರುವಾರವೇ #RRR ಸಿನಿಮಾ ಬಂದ್ರೆ, ಎಲ್ಲಾ ಥಿಯೇಟರ್ ಗಳು ಆ ಸಿನಿಮಾ ಪಾಲಾಗಲಿದೆ.
ಪ್ರಭಾಸ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಜನವರಿ 14ಕ್ಕೆ ತೆರೆಗೆ ಬರ್ತಿದೆ. ಒಂದು ವಾರ ಮೊದ್ಲು #RRR ಸಿನಿಮಾ ಥಿಯೇಟರ್ ಬರ್ತಿದ್ದು, ಪ್ರಭಾಸ್ ಚಿತ್ರಕ್ಕಾಗಿ ಮೌಳಿ ಜಾಗ ಮಾಡಿಕೊಡ್ತಾರಾ ನೋಡ್ಬೇಕು. #RRR ಸಿನಿಮಾ ರಿಲೀಸ್ ಆಗುವ ಮರು ವಾರ ತೆಲುಗಿನ ಸರ್ಕಾರುವಾರಿ ಪಾಟ, ಭೀಮ್ಲಾ ನಾಯಕ್ ಸಿನಿಮಾಗಳು ರಿಲೀಸ್ ಆಗ್ತಿದ್ದು, ಬಾಕ್ಸಾಫೀಸ್ ನಲ್ಲಿ ಬಿಗ್ ಕ್ಲ್ಯಾಶ್ ಗ್ಯಾರಂಟಿ. ಎಲ್ಲಾ ಸಿನಿಮಾಗಳ ರಿಲೀಸ್ ಡೇಟ್ಸ್ ಹೀಗೇ ಇರುತ್ತಾ ಇಲ್ಲಾ ಮುಂದಿನ ದಿನಗಳಲ್ಲಿ ಬದಲಾಗುತ್ತಾ ಅನ್ನೋದನ್ನು ಸದ್ಯಕ್ಕಂತೂ ಕುತೂಹಲ.