ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಚಿತ್ರಮಂದಿರಗಳ ಮುಂದೆ ಕಟೌಟ್ ಎದ್ದು ನಿಂತಿದ್ದು, ಶಿವರಾತ್ರಿ ದಿನ ಅಭಿಮಾನಿಗಳಿಂದ ರಾಬರ್ಟ್ ಧ್ಯಾನ ಗ್ಯಾರಂಟಿ. ರಾಬರ್ಟ್ ನಂತ್ರ ವಾಟ್ ನೆಕ್ಸ್ಟ್ ಅನ್ನುವವರಿಗೆ ‘ಗೋಲ್ಡ್ ರಿಂಗ್’ ಅನ್ನೋ ಉತ್ತರ ಸಿಕ್ತಿದೆ. ಕನ್ಫ್ಯೂಷಿಯಸ್ ಆಗಬೇಡಿ. ರಾಬರ್ಟ್ ಆದ್ಮೇಲೆ ದರ್ಶನ್ ‘ಗೋಲ್ಡ್ ರಿಂಗ್’ ಅನ್ನೋ ಚಿತ್ರದಲ್ಲಿ ನಟಿಸ್ತಿದ್ದಾರೆ. ಈ ಸುದ್ದಿ ಕೇಳಿ ದರ್ಶನ್ ಅಭಿಮಾನಿಗಳು ಕೂಡ ಅಚ್ಚರಿಗೊಂಡಿದ್ದಾರೆ.
‘ರಾಜವೀರ ಮದಕರಿ’ ಸಿನಿಮಾ ಫಸ್ಟ್ ಶೆಡ್ಯೂಲ್ ಶೂಟಿಂಗ್ ಕಂಪ್ಲೀಟ್ ಆಗಿದೆ. ರಾಬರ್ಟ್ ಆದ್ಮೇಲೆ ಮದಕರಿ ನಾಯಕರ ಅವತಾರದಲ್ಲಿ ದರ್ಶನ್ ಬರ್ತಾರೆ ಅಂದುಕೊಂಡವರಿಗೆ ನಿರಾಸೆಯಾಗಿದೆ. ವಿಷಯ ಸಿಂಪಲ್. ಕೊರೋನಾ ಲಾಕ್ಡೌನ್ ನಂತ್ರ ಮದಕರಿ ನಾಯಕ ರೀತಿಯ ದೊಡ್ಡ ಸಿನಿಮಾ ಮಾಡಲು ಸಾಧ್ಯವಾಗ್ತಿಲ್ಲ ಅಂತಿದ್ದಾರೆ ನಿರ್ಮಾಪಕ ರಾಕ್ಲೈನ್ ವೆಂಕಟೇಶ್. ಅದೇ ಕಾರಣಕ್ಕೆ ಅವರ ಪುತ್ರ ಯತೀಶ್ ರಾಕ್ಲೈನ್ ಮದಕರಿಗೂ ಮೊದ್ಲು ಒಂದು ಸಣ್ಣ ಸಿನಿಮಾ ಮಾಡುವ ಪ್ಲಾನ್ ಮಾಡಿದ್ದಾರೆ. ಅದಕ್ಕೆ ದರ್ಶನ್ ಸಹ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಟೈಟಲ್, ಸ್ಟೋರಿ ಎಲ್ಲಾ ರೆಡಿಯಾಗಿದೆ. ರಾಬರ್ಟ್ ರಿಲೀಸ್ ಆದ್ಮೇಲೆ ಹೊಸ ಸಿನಿಮಾ ಸೆಟ್ಟೇರಲಿದೆ.
ದರ್ಶನ್ ಮುಂದಿನ ಸಿನಿಮಾ ರೊಮ್ಯಾಂಟಿಕ್ ಫ್ಯಾಮಿಲಿ ಎಂಟರ್ಟೈನರ್. ಅದೇ ಕಾರಣಕ್ಕೆ ಚಿತ್ರಕ್ಕೆ ‘ಗೋಲ್ಡ್ ರಿಂಗ್’ ಅನ್ನೋ ಟೈಟಲ್ ರಿಜಿಸ್ಟರ್ ಮಾಡಿಸಿದೆ ರಾಕ್ಲೈನ್ ಬ್ಯಾನರ್. ಕಥೆ ರೆಡಿ ಆಗಿದ್ರು, ಡೈರೆಕ್ಟರ್ ಸಿಕ್ಕಿಲ್ಲ. ಶೀಘ್ರದಲ್ಲೇ ‘ಗೋಲ್ಡ್ ರಿಂಗ್’ ಚಿತ್ರದ ಕಂಪ್ಲೀಟ್ ಮಾಹಿತಿ ಸಿಗಲಿದೆ. ಮೊದಲು ರಾಬರ್ಟ್ ಆರ್ಭಟ ನೋಡೋಣ ಅಷ್ಟರಲ್ಲಿ, ಗೋಲ್ಡ್ ರೇಟ್ ಕಮ್ಮಿಯಾಗಿ ಕೊಂಚ ದೊಡ್ಡ ರಿಂಗ್ ಅನ್ನೇ ಮಾಡಿಸ್ಬೋದು ಯತೀಶ್ ರಾಕ್ಲೈನ್.