KGF ಬಂದ್ಮೇಲೆ ರಾಕಿಂಗ್ ಸ್ಟಾರ್ ರೇಂಜ್ ಬದಲಾಗಿಬಿಟ್ಟಿದೆ. ರಾಕಿಂಗ್ ಸ್ಟಾರ್ ಆಗಿದ್ದವರು ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿದ್ದಾರೆ. ಅಲ್ಲದೆ KGF 2ಗಿರೋ ಕ್ರೇಜ್ ನೋಡಿದ್ರೆ, ಬಾಕ್ಸಾಫೀಸ್ನಲ್ಲಿ ದಾಖಲೆಗಳನ್ನ ಬರೆಯೋಕೆ ಯಶ್ ರೆಡಿಯಾಗಿದ್ದಾರೆ. ಈ ಮಧ್ಯೆ ಯಶ್ ನೀಡಿದ ಸಂದರ್ಶನವೊಂದು ರಾಕಿಬಾಯ್ ಅಭಿಮಾನಿಗಳನ್ನ ಥ್ರಿಲ್ ಕೊಟ್ಟಿದೆ.
ಇಬ್ಬರು ಮಹಾನ್ ನಟರೊಂದಿಗೆ ನಟಿಸ್ಬೇಕು ಅನ್ನೋ ಆಸೆ
ನ್ಯಾಷನಲ್ ಸ್ಟಾರ್ ಯಶ್ಗೆ ಇಬ್ಬರು ಮಹಾನ್ ನಟರೊಂದಿಗೆ ನಟಿಸ್ಬೇಕು ಅನ್ನೋ ಆಸೆ. ಅದ್ರಲ್ಲಿ ಒಬ್ಬರು ಕಮಲ್ ಹಾಸನ್. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಕಮಲ್ ಹಾಸನ್ ಅವರ ಸಿನಿಮಾಗಳನ್ನ ನೋಡ್ಕೊಂಡು ಬೆಳೆದಿದ್ದೇನೆ. ಅವ್ರೊಂದಿಗೆ ನಟಿಸೋದು ನನ್ನ ಕನಸು ಎನ್ನುವ ಅರ್ಥದಲ್ಲಿ ಯಶ್ ಹೇಳಿದ್ದರು.
ನವಾಜುದ್ದೀನ್ ಸಿದ್ದಿಕಿ ನನ್ನ ಫೇವರೆಟ್
ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ ನನ್ನ ಫೇವರೆಟ್. ರಾಷ್ಟ್ರಪ್ರಶಸ್ತಿ ಪಡೆದ ಈ ನಟನೊಂದಿಗೆ ನಟಿಸಬೇಕೆಂಬ ಆಸೆ ಅಂತ ಯಶ್ ಹೇಳಿದ್ದಾರೆ. ಬಹುಶ: ಮುಂದಿನ ಸಿನಿಮಾಗಳಲ್ಲಿ ಯಶ್ ನವಾಜುದ್ದೀನ್ ಸಿನಿಮಾಗಳಲ್ಲಿ ನಟಿಸಿದ್ರೂ ಅಚ್ಚರಿ ಪಡ್ಬೇಕಿಲ್ಲ.
ಮಫ್ತಿ ನಿರ್ದೇಶಕ ನರ್ತನ್ ಸಿನಿಮಾ ಯಾವಾಗ?
KGF 2 ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದೆ. ಈಗಾಗ್ಲೇ ಯಶ್ ಮುಂದಿನ ಸಿನಿಮಾ ಮಫ್ತಿ ನಿರ್ದೇಶಕ ನರ್ತನ್ ಜೊತೆ ಅನ್ನೋದು ಬಹುತೇಕ ಕನ್ಫರ್ಮ್ ಆಗಿದೆ. ಹೀಗಾಗಿ ಯಶ್ ಅಭಿಮಾನಿಗಳು ರಾಕಿಂಗ್ ಸ್ಟಾರ್ ಅದ್ಯಾವಾಗ ಸಿನಿಮಾ ಅನೌನ್ಸ್ ಮಾಡ್ತಾರೋ ಅಂತ ಕಾದು ಕೂತಿದ್ದಾರೆ.