ಶಿವರಾತ್ರಿ ಹಬ್ಬಕ್ಕೆ ನಾಳೆ ರಾತ್ರಿ ಎಲ್ಲರೂ ಜಾಗರಣೆ ಮಾಡ್ತಿದ್ರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ರಾಬರ್ಟ್ ಗಾಗಿ ಇವತ್ತು ರಾತ್ರಿನೇ ಜಾಗರಣೆ ಶುರು ಮಾಡ್ತಿದ್ದಾರೆ. ಅದ್ಯಾವಾಗ ಬೆಳಗ್ಗೆ 6 ಗಂಟೆ ಆಗುತ್ತೋ, ಅದ್ಯಾವಾಗ ತೆರೆಮೇಲೆ “ರಾಬರ್ಟ್” ದರ್ಶನ ಆಗುತ್ತೋ ಅಂತ ನಿದ್ದೆಬಿಟ್ಟು ಕಾಯ್ತಿದ್ದಾರೆ. ಕೆಲವರಂತೂ ಶಿವರಾತ್ರಿಗೆ ಶಿವನ ದರ್ಶನ ಮಾಡೋಕು ಮೊದ್ಲು ಥಿಯೇಟರ್ ಗಳಲ್ಲಿ ರಾಬರ್ಟ್ ದರ್ಶನಕ್ಕೆ ಕಾಯ್ತಿದ್ದಾರೆ. ಈಗಾಗಲೇ ಮೊದಲ ದಿನದ ಬಹುತೇಕ ಎಲ್ಲಾ ಶೋಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಅತ್ತ ಸೂರ್ಯ ಹುಟ್ಟೋ ಸಮಯಕ್ಕೆ ಇತ್ತ ರಾಬರ್ಟ್ ಆಟ ಶುರುವಾಗುತ್ತೆ. ಕನ್ನಡ, ತೆಲುಗು ಸೇರಿ ನಾಳೆ 2000 ಕ್ಕೂ ಅಧಿಕ ಶೋಗಳು ಕನ್ಫರ್ಮ್ ಆಗಿದೆ. ದರ್ಶನ್ ಕರಿಯರ್ ನಲ್ಲೇ ಮತ್ತ್ಯಾವುದೇ ಸಿನಿಮಾ ರಿಲೀಸ್ ಆಗದ ರೇಂಜ್ ನಲ್ಲಿ ರಾಬರ್ಟ್ ತೆರೆಗಪ್ಪಳಿಸುತ್ತಿದೆ.
ದೊಡ್ಡ ಕ್ಯಾನ್ವಾಸ್ ನಲ್ಲಿ ನಿರ್ಮಾಣವಾಗಿರೋ ಹೈವೋಲ್ಟೇಜ್ ಆ್ಯಕ್ಷನ್ ಸಿನಿಮಾ ರಾಬರ್ಟ್. ದರ್ಶನ್ ಅಂದ್ರೆ ಮಾಸ್, ಮಾಸ್ ಅಂದ್ರೆ ದರ್ಶನ್. ಇನ್ನು ದರ್ಶನ್ ಮಾಸ್ ಸಿನಿಮಾ ಅಂದ್ರೆ ಕೇಳ್ಬೇಕಾ..? ಈಗಾಗಲೇ ಪೋಸ್ಟರ್ಸ್, ಟ್ರೈಲರ್, ಸಾಂಗ್ಸ್ ನೋಡಿ ಫ್ಯಾನ್ಸ್ ಥ್ರಿಲ್ಲಾಗಿದ್ದು ಫಸ್ಟ್ ಡೇ ಫಸ್ಟ್ ಶೋ ನೋಡೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಜಗಪತಿ ಬಾಬು, ವಿನೋದ್ ಪ್ರಭಾಕರ್, ರವಿ ಕಿಶನ್, ರವಿಶಂಕರ್ ರಂತಹ ಸ್ಟಾರ್ ಕಲಾವಿದರು ರಾಬರ್ಟ್ ಚಿತ್ರದಲ್ಲಿದ್ದಾರೆ. ಹಾಗಾಗಿ ಸಹಜವಾಗಿಯೇ ರಾಬರ್ಟ್ ಸಿನಿಮಾ ಕುತೂಹಲ ಕೆರಳಿಸಿದೆ. ಈಗಾಗಲೇ ಅಭಿಮಾನಿಗಳು ಥಿಯೇಟರ್ ಮುಂದೆ ಕಟೌಟ್ ನಿಲ್ಲಿಸಿ, ಹೂವಿನ ಅಲಂಕಾರ ಮಾಡಿ ರಾಬರ್ಟ್ ಸ್ವಾಗತಕ್ಕೆ ಕಾಯ್ತಿದ್ದಾರೆ. ಇನ್ನು ನಾಳೆ ಥಿಯೇಟರ್ ಮುಂದೆ ಪಟಾಕಿ, ಜೈಕಾರ, ಶಿಳ್ಳೆ ಸದ್ದು ಜೋರಾಗಿರುತ್ತೆ. ಥಿಯೇಟರ್ ಒಳಗಂತೂ ಸಂಭ್ರಮ ಹೇಳೋದೇ ಬೇಡ.
ಕಳೆದೆರಡು ವರ್ಷಗಳಿಂದ “ರಾಬರ್ಟ್” ಆರ್ಭಟ ನೋಡೋಕೆ ಪ್ರೇಕ್ಷಕರು ಕಾಯ್ತಿದ್ರು. ಅಂತೂ ಇಂತೂ ಆ ಸಮಯ ಹತ್ತಿರ ಬಂದೇ ಬಿಡ್ತು. ಮೇಕಿಂಗ್ ನಿಂದಲೇ ಸಿನಿಮಾ ಬೇಜಾನ್ ಹೈಪ್ ಕ್ರಿಯೇಟ್ ಮಾಡಿದೆ. ಸಿನಿಮಾ ಬಗ್ಗೆ ಪಾಸಿಟಿವ್ ಟಾಕ್ ಬಂದ್ರಂತೂ, ಬಾಕ್ಸಾಫೀಸ್ ಶೇಕ್ ಆಗೋದು ಗ್ಯಾರೆಂಟಿ. ಈಗಾಗಲೇ ಪ್ರೀ ರಿಲೀಸ್ ಬ್ಯುಸಿನೆಸ್ ನಿಂದ್ಲೇ “ರಾಬರ್ಟ್” ದಾಖಲೆ ಬರೆದಿದ್ದು, ಸಿಲ್ವರ್ ಸ್ಕ್ರೀನ್ ಎಂಟ್ರಿ ಕೊಟ್ಟು ಹಳೇ ದಾಖಲೆಗಳನ್ನೆಲ್ಲಾ ಗಂಟು ಮೂಟೆ ಕಟ್ಟುವ ಸುಳಿಚು ಸಿಕ್ತಿದೆ. ನಾಳೆ ಡೈಲಿ ಚಕ್ಕರ್ ನಲ್ಲಿ “ರಾಬರ್ಟ್” ಲೈವ್ ರಿವ್ಯೂಗೆ ಕಾಯ್ತಾ ಇರಿ.