ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ರಾಬರ್ಟ್ ಬಾಕ್ಸಾಫೀಸ್ನಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸಿದೆ. ಕೇವಲ 20 ದಿನಗಳಲ್ಲಿ ₹100 ಕೋಟಿ ಗಳಿಕೆ ಕಂಡು ಚರಿತ್ರೆ ಬರೆದಿದೆ. ಅಸಲಿಗೆ ದರ್ಶನ್ ಸಿನಿಮಾ ಈ ಮೈಲಿಗಲ್ಲು ತಲುಪಿದ್ದು ಹೇಗೆ? ಜನರೇ ಬಾರದ ವೇಳೆ ₹100 ಕೋಟಿ ಲೂಟಿ ಮಾಡಿದ್ದೇಗೆ? ಯಾವ್ಯಾವ ಏರಿಯಾದಲ್ಲಿ ಎಷ್ಟೆಷ್ಟು ಕಲೆಕ್ಷನ್ ಮಾಡಿದೆ ಅನ್ನೋ ಡಿಲೈಟ್ಸ್ ಇಲ್ಲಿದೆ.
ರಾಬರ್ಟ್ ₹100 ಕೋಟಿ ಕಲೆಕ್ಷನ್ ಆಗಿದ್ದೇಗೆ?
ರಾಬರ್ಟ್ ಕರ್ನಾಟಕದಲ್ಲಿ ಮೊದಲ ವಾರ 600ಕ್ಕೂ ಅಧಿಕ ಥಿಯೇಟರ್ಗಳಲ್ಲಿ ರಿಲೀಸ್ ಆಗಿತ್ತು. ಮೊದಲ ನಾಲ್ಕು ದಿನ ಬಹುತೇಕ ಥಿಯೇಟರ್ಗಳು ಹೌಸ್ಫುಲ್ ಆಗಿತ್ತು. ಹೀಗಾಗಿ ಆರಂಭದ ನಾಲ್ಕು ದಿನಗಳಲ್ಲೇ 50 ಕೋಟಿಯನ್ನ ಅನಾಯಾಸವಾಗಿ ಗಳಿಸಿತ್ತು. ಆದ್ರೆ, ಎರಡನೇ ವಾರದಿಂದ ಥಿಯೇಟರ್ಗಳ ಸಂಖ್ಯೆಯನ್ನ ಕಡಿಮೆ ಮಾಡಲಾಯ್ತು. ಹೀಗಾಗಿ ಒಂದೇ ಏರಿಯಾದಲ್ಲಿ ಇದ್ದ ಎರಡು-ಮೂರು ಚಿತ್ರಮಂದಿರಗಳಲ್ಲಿ ಕಡಿತಗೊಳಿಸಿ, ಒಂದರಲ್ಲಿ ಸಿನಿಮಾ ತೋರಿಸಿದ್ದರು. ಹೀಗಾಗಿ ಸುಮಾರು 50 ರಿಂದ 100 ಸ್ಕ್ರೀನ್ಗಳು ಕಡಿಮೆ ಆಯ್ತು. ಆದ್ರೂ ಚಿತ್ರಮಂದಿರ ತುಂಬಿದ ಪ್ರದರ್ಶನ ಕಂಡಿದ್ದರಿಂದ ಬಾಕ್ಸಾಫೀಸ್ನಲ್ಲಿ ಎಫೆಕ್ಟ್ ಆಗ್ಲಿಲ್ಲ.
ರಾಬರ್ಟ್ ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ?
20 ದಿನಗಳಲ್ಲಿ ರಾಬರ್ಟ್ ಅಸಲಿ ಕಲೆಕ್ಷನ್ ₹102.43 ಕೋಟಿ. ಇದು ಒಟ್ಟು ಗಳಿಕೆಯಾಗಿದ್ದು, ಚಿತ್ರತಂಡಕ್ಕೆ ಸಿಕ್ಕ ಶೇರ್ ಎಷ್ಟು ಅನ್ನೋದನ್ನ ಚಿತ್ರತಂಡ ರಿವೀಲ್ ಮಾಡಿಲ್ಲ. ಒಟ್ಟು ಗಳಿಕೆಯನ್ನೇ ಕ್ಷೇತ್ರವಾರು ನೋಡೋದಾದ್ರೆ, ಆ ಗಳಿಕೆ ಹೀಗಿದೆ.
Roberrt Boxoffice Collection
ಬೆಂಗಳೂರು, ಕೋಲಾರ, ತುಮಕೂರು(BKT)+ ಮಂಗಳೂರು ₹32 ಕೋಟಿ
ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ₹24.43 ಕೋಟಿ
ಚಿತ್ರದುರ್ಗ, ದಾವಣಗೆರೆ ₹15 ಕೋಟಿ
ಶಿವಮೊಗ್ಗ ₹9 ಕೋಟಿ
ಹೈದ್ರಾಬಾದ್ ಕರ್ನಾಟಕ ₹13 ಕೋಟಿ
ಬಾಂಬೆ ಕರ್ನಾಟಕ ₹9 ಕೋಟಿ
ಒಟ್ಟು ₹102.43 ಕೋಟಿ
₹100 ಕೋಟಿ ಕ್ಲಬ್ ಸೇರಿದ ದರ್ಶನ್ ಎರಡನೇ ಸಿನಿಮಾ
ದರ್ಶನ್ ಬಾಕ್ಸಾಫೀಸ್ ಸುಲ್ತಾನ್ ಅನ್ನೋದು ಮತ್ತೊಮ್ಮೆ ಸಾಭೀತಾಗಿದೆ. ರಾಬರ್ಟ್ ₹100 ಕೋಟಿ ಕ್ಲಬ್ ಸೇರಿದ ದರ್ಶನ್ 2ನೇ ಸಿನಿಮಾ. ಈ ಹಿಂದೆ ಐರಾವತನ 50ನೇ ಸಿನಿಮಾ ಕುರುಕ್ಷೇತ್ರ ಬಾಕ್ಸಾಫೀಸ್ನಲ್ಲಿ ₹100 ಕೋಟಿಯನ್ನ ಲೂಟಿ ಮಾಡಿತ್ತು.