ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಮ್ಮೆ ಬಾಕ್ಸಾಫೀಸ್ ಸುಲ್ತಾನ ಎಂದು ನಿರೂಪಿಸಿದ್ದಾರೆ. ರಾಬರ್ಟ್ ಫಸ್ಟ್ ಡೇ ಫಸ್ಟ್ ಶೋ ಇಂದ ಶುರುವಾದ ದಾಖಲೆಯ ಓಟ ಎರಡು ಶೋ ಮುಗಿಯುವುದರೊಳಗೆ ಯಶಸ್ಸಿನ ಜಯಭೇರಿ ಬಾರಿಸಿಬಿಟ್ಟಿದ್ದಾನೆ. ಕರ್ನಾಟಕದ ಉದ್ದಗಲಕ್ಕೂ ಬಿಡುಗಡೆಯಾದ ಎಲ್ಲಾ ಥಿಯೇಟರ್ ಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ ರಾಬರ್ಟ್.


650ಕ್ಕೂ ಹೆಚ್ಚು ಥಿಯೇಟರ್ ಗಳು ಮತ್ತು 100ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್ ಗಳು ಡಿ ಬಾಸ್ ಪವರ್ ಪ್ರದರ್ಶಿಸುತ್ತಿವೆ. ಇಂದು ಶಿವರಾತ್ರಿ ಬೇರೆ ಇರೋದ್ರಿಂದ ಎಂದಿನ ಫ್ರೈಡೆ ರಿಲೀಸ್ ಲೆಕ್ಕಾಚಾರ ಪಕ್ಕಕ್ಕಿಟ್ಟ ಚಿತ್ರತಂಡ ಗುರುವಾರವೇ ಸಿನಿಮಾ ರಿಲೀಸ್ ಮಾಡಿತು. ಇಂದಿನಿಂದ ಭಾನುವಾರದವರಗೆ ಇದೇ ಜೋಶ್ ಮುಂದುವರೆಯುವುದು ಖಂಡಿತಾ ಅನ್ನೋ ಅವರ ಲೆಕ್ಕಾಚಾರ ಸರಿಯಿದೆ ಎನ್ನುವುದನ್ನ ಮೊದಲ ದಿನದ ಪ್ರತಿಕ್ರಿಯೆಗಳೇ ಸೂಚಿಸುತ್ತಿವೆ.


ಬಿಗ್ ಸ್ಕ್ರೀನ್ ಮೇಲೆ ದರ್ಶನ್ ಖದರ್ ನೋಡಿದ ಅಭಿಮಾನಿಗಳು ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ. ತರುಣ್ ಸುಧೀರ್ ನಿರ್ದೇಶನ ಮತ್ತು ಅರ್ಜುನ್ ಜನ್ಯ ಸಂಗೀತ ಎರಡಕ್ಕೂ ರಾಬರ್ಟ್ ಯಶಸ್ಸಿನಲ್ಲಿ ಪಾಲಿದೆ. ಆದ್ರೆ ಅಂತಿಮವಾಗಿ ಇದು ಪಕ್ಕಾ ಡಿ ಬಾಸ್ ಚಿತ್ರ. ಕ್ಲಾಸ್, ಮಾಸ್, ಫ್ಯಾಮಿಲಿ ಆಡಿಯನ್ಸ್ ಎಲ್ಲರಿಗೂ ಇಷ್ಟವಾಗುವಂಥಾ ಸಿನಿಮಾ ರಾಬರ್ಟ್. ಸಂಬಂಧಗಳ ಸೆಂಟಿಮೆಂಟ್, ಫೈಟ್, ಸಸ್ಪೆನ್ಸ್, ರೊಮ್ಯಾನ್ಸ್, ಸೂಪರ್ ಲೊಕೇಶನ್ ಗಳು, ರಿಚ್ ಕ್ಯಾಮೆರಾ ಕೆಲಸ ಎಲ್ಲವೂ ತೆರೆ ಮೇಲೆ ಯಶಸ್ಸಿನ ದಾಖಲೆ ಬರೆದಿವೆ. ದಚ್ಚು ಯಶಸ್ಸಿನ ಕಿರೀಟಕ್ಕೆ ರಾಬರ್ಟ್ ಹೊಸಾ ಗರಿ ಸೇರಿಸಿದ್ದಾನೆ.