ಚಾಲೆಂಜಿಂಗ್ ಸ್ಟಾರ್ ದರ್ಶನ್ ಅದ್ಭುತ ಕಲಾವಿದ ಅನ್ನೋದ್ರಲ್ಲಿ ಎರಡು ಮಾತಿಲ್ಲ. ರಾಬರ್ಟ್ ಚಿತ್ರದ ಭಾರೀ ಯಶಸ್ಸು ಇದಕ್ಕೊಂದು ಸಾಕ್ಷಿ. ಆದ್ರೆ ತನ್ನ ವೃತ್ತಿಬದುಕಿನ ಇಷ್ಟು ವರ್ಷಗಳಲ್ಲಿ ಬಾಕ್ಸಾಫೀಸ್ ಸುಲ್ತಾನ ಮಾಸ್ ಚಿತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದು. ಪ್ರತೀ ಚಿತ್ರದಲ್ಲೂ ಒಂದಲ್ಲಾ ಒಂದು ವೈಶಿಷ್ಟಯತೆ ಇದ್ದೇ ಇತ್ತು ಅನ್ನೋ ಮಾತನ್ನ ಎಲ್ಲರೂ ಒಪ್ಪುತ್ತಾರೆ.


ಅಭಿಮಾನಿಗಳ ನೆಚ್ಚಿನ ದಾಸ ಇದುವರಗೆ ಅಭಿನಯಿಸಿದ ಪ್ರತೀ ಚಿತ್ರದಲ್ಲೂ ಒಂದಲ್ಲಾ ಒಂದು ಶಕ್ತಿಯನ್ನ, ಪ್ರಾವೀಣ್ಯತೆಯನ್ನು ಪ್ರದರ್ಶಿಸಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ಆ ಎಲ್ಲಾ ಚಿತ್ರಗಳ ಬಲ ಅಥವಾ ಶಕ್ತಿಗಳನ್ನು ಗುರುತಿಸಿ ಅವನ್ನೆಲ್ಲಾ ಒಟ್ಟಾಗಿಸಿ ರಾಬರ್ಟ್ ಆಗಿ ದರ್ಶನ್ ರನ್ನು ನಿರ್ದೇಶಿಸಿದ್ರಂತೆ. ಈ ವಿಚಾರವನ್ನು ಖುದ್ದು ತರುಣ್ ಸುಧೀರ್ ಹೇಳಿದ್ದಾರೆ.
ರಾಬರ್ಟ್ ನಲ್ಲಿ ಕಂಡ ದರ್ಶನ್ ರನ್ನು ಇದುವರಗೆ ತಾವು ನೋಡೇ ಇರ್ಲಿಲ್ಲ ಎಂದಿದ್ದಾರೆ ಅಭಿಮಾನಿಗಳು. ಇದಕ್ಕೆ ಕಾರಣ ತಾನು ಕಂಡುಕೊಂಡ ದರ್ಶನ್ ಫಾರ್ಮುಲಾ ಅಂತಾರೆ ಡೈರೆಕ್ಟರ್. ಉದಾಹರಣೆಗೆ ಸುಂಟರಗಾಳಿ ಚಿತ್ರದಲ್ಲಿ ದರ್ಶನ್ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ…ಅದೇ ರೀತಿ ನಮ್ಮ ಪ್ರೀತಿಯ ರಾಮು ಚಿತ್ರದಲ್ಲಿ ಅವರ ಅಭಿನಯದ ಮಟ್ಟವೇ ಬೇರೆ. ಹೀಗೆ ಪ್ರತೀ ಚಿತ್ರದಲ್ಲೂ ಒಂದೊಂದು ಅಂಶ ಎದ್ದು ಕಾಣುತ್ತದೆ. ಆ ಎಲ್ಲವನ್ನೂ ಒಟ್ಟಾಗಿಸಿದಾಗ ಮೂಡಿಬಂದಿದ್ದೇ ರಾಬರ್ಟ್.


ರಾಬರ್ಟ್ ನ್ನು ಕೇವಲ ಅಭಿಮಾನಿಗಳು ಮಾತ್ರವಲ್ಲ, ಚಿತ್ರರಂಗ ಕೂಡಾ ಖುಷಿಯಿಂದ ಎಂಜಾಯ್ ಮಾಡ್ತಾ ಇದ್ಯಂತೆ. ನಟಿ ಅಮೂಲ್ಯ ಸುಮಾರು 40 ಜನ ಕುಟುಂಬಸ್ಥರು ಮತ್ತು ಸ್ನೇಹಿತರನ್ನು ಕರೆದುಕೊಂಡು ರಾಬರ್ಟ್ ನೋಡೋಕೆ ಹೋಗಿದ್ರಂತೆ. ಸಿನಿಮಾದಲ್ಲಿ ಸೆಂಟಿಮೆಂಟ್ ತನಗೆ ಬಳ ಇಷ್ಟ ಆಯ್ತು ಅಂತ ನಿರ್ದೇಶಕ ತರುಣ್ ಸುಧೀರ್ ಗೆ ಹೇಳಿದ್ರಂತೆ. ಅದೇ ರೀತಿ ಪವನ್ ಒಡೆಯರ್, ರಿಷಭ್ ಶೆಟ್ಟಿ, ಜೋಗಿ ಪ್ರೇಮ್ ಹೀಗೆ ಅನೇಕರು ಚಿತ್ರಮಂದಿರದಲ್ಲಿ ರಾಬರ್ಟ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಂದೊಳ್ಳೆ ಸಿನಿಮಾಗೆ ಇಷ್ಟೊಂದು ಮೆಚ್ಚುಗೆ ವ್ಯಕ್ತವಾಗ್ತಿರೋದು ಚಿತ್ರತಂಡಕ್ಕೂ ಖುಷಿ ಕೊಟ್ಟಿದೆ.