ರಾಬರ್ಟ್ ಎಲ್ಲಡೆ ಹೌಸ್ ಫುಲ್ ಆಗಿದೆ. ಎರಡನೇ ದಿನವೂ ತುಂಬಿದ ಪ್ರದರ್ಶನ ಕಾಣುತ್ತಿದೆ. ಸುಮಾರು 1500 ಚಿತ್ರಮಂದಿರಗಳಲ್ಲಿ ಶೇ. 70 ರಷ್ಟು ಹೌಸ್ಫುಲ್ ಶೋಗಳು ಓಡುತ್ತಿವೆ. ಇದೇ ವೇಳೆ ರಾಬರ್ಟ್ ಮೊದಲ ದಿನ ಕಲೆಕ್ಷನ್ ಬಗ್ಗೆ ಸಾಕಷ್ಟು ಸಾಕಷ್ಟು ಚರ್ಚೆಯಾಗುತ್ತಿದೆ. ಯಾಕಂದ್ರೆ, ರಾಬರ್ಟ್ ಟೀಮ್ ಈಗಾಗ್ಲೇ ₹20.36 ಕೋಟಿ ಗಳಿಸಿದೆ ಎಂದು ಅಧಿಕೃತ ಹೇಳಿಕೆ ನೀಡಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತದ ಕಲೆಕ್ಷನ್ ಹೇಗಾಯ್ತು? ಎಲ್ಲೆಲ್ಲಿ ಎಷ್ಟು ಅನ್ನೋದನ್ನ ನೋಡೋಣ.
ರಾಬರ್ಟ್ ಕಲೆಕ್ಷನ್ (ಏರಿಯಾದಲ್ಲಿ)
ಬೆಂಗಳೂರು, ಕೋಲಾರ, ತುಮಕೂರು(BKT) ₹7 ಕೋಟಿ
ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ₹2ಕೋಟಿ
ಚಿತ್ರದುರ್ಗ ಹಾಗೂ ದಾವಣಗೆರೆ ₹2.24 ಕೋಟಿ
ಶಿವಮೊಗ್ಗ ₹1 ಕೋಟಿ
ಹೈದ್ರಾಬಾದ್ ಕರ್ನಾಟಕ ₹3 ಕೋಟಿ
ಬಾಂಬೆ ಕರ್ನಾಟಕ ₹2 ಕೋಟಿ
ಒಟ್ಟು ₹17.24 ಕೋಟಿ
ಆಂಧ್ರ, ತೆಲಂಗಾಣ ₹3.12 ಕೋಟಿ
ಒಟ್ಟು ₹20.36 ಕೋಟಿ
ಮೊದಲ ದಿನದ ಬಾಕ್ಸಾಫೀಸ್ ಕಲೆಕ್ಷನ್ನಲ್ಲಿ ಇಡೀ ತಂಡ ಗೆದ್ದಿದೆ. ಅದ್ರಲ್ಲೂ ₹17.24 ಕೋಟಿ ಗಳಿಕೆ ಕಂಡು ಕೆಜಿಎಫ್ ದಾಖಲೆಯನ್ನೂ ಅಳಿಸಿ ಹಾಕಿದೆ ಎನ್ನಲಾಗಿದೆ. ಇನ್ನೊಂದ್ಕಡೆ ಆಂಧ್ರ ಹಾಗೂ ತೆಲಂಗಾಣದಲ್ಲಿ 3.12 ಕೋಟಿ ಗಳಿಸಿದ್ದೂ ದಾಖಲೆ ಅಂತಾನೇ ಸಿನಿಮಾ ಮಂದಿಹ ಹೇಳುತ್ತಿದ್ದಾರೆ. ಇನ್ನು ಎರಡನೇ ದಿನದ ಕಲೆಕ್ಷನ್ ಎಷ್ಟು ಅನ್ನೋದನ್ನ ಕುತೂಹಲದಿಂದ ನೋಡುತ್ತಿದ್ದಾರೆ.