ರಾಬರ್ಟ್ ಬಾಕ್ಸಾಫೀಸ್ನಲ್ಲಿ ಅಬ್ಬರಿಸ್ತಿರೋದನ್ನ ನೋಡಿದ್ರೆ, ನಾಲ್ಕೇ ದಿನಗಳಲ್ಲಿ ಆರಾಮಾಗಿ 50 ಕೋಟಿ ಲೂಟಿ ಮಾಡುತ್ತೆ ಎಂದು ಅಂದಾಜಿಸಲಾಗಿತ್ತು. ಎಲ್ಲರ ಊಹೆ ಈಗ ನಿಜವಾಗಿದೆ. ರಾಬರ್ಟ್ ಅಂದ್ಕೊಂಡಂತೆ ₹50 ಕೋಟಿ ಕ್ಲಬ್ ಸೇರಿದೆ. ಕೇವಲ ಕರ್ನಾಟಕದಲ್ಲೇ ಬರೋಬ್ಬರಿ 59.8 ಕೋಟಿ ಕಲೆಹಾಕಿದೆ.
ಮಾರ್ಚ್ 11ಶಿವರಾತ್ರಿಯಂದು ರಿಲೀಸ್ ಆಗಿದ್ದ ಸಿನಿಮಾ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿತ್ತು. ಗುರುವಾರದಿಂದ ಶುರುವಾಗಿದ್ದ ರಾಬರ್ಟ್ ಜಾತ್ರೆ ಭಾನುವಾರದವರೆಗೂ ಗಳಿಕೆಯಲ್ಲಿ ದಾಖಲೆ ಬರೆಯುತ್ತಲೇ ಇದೆ. ಅದ್ರಲ್ಲೂ ನಾಲ್ಕನೇ ದಿನದ ಗಳಿಕೆ ₹15 ಕೋಟಿ ದಾಟಿದೆ.
Roberrt Boxoffice Collection (4 Days)
1 ಡೇ ₹17.24 ಕೋಟಿ
2 ಡೇ ₹12.78 ಕೋಟಿ
3 ಡೇ ₹14.10 ಕೋಟಿ
4 ಡೇ ₹15.80 ಕೋಟಿ
Total ₹59.80 ಕೋಟಿ
ಆಂಧ್ರ-ತೆಲಂಗಾಣ ₹6.19 ಕೋಟಿ (4days)
Total ₹65.99 ಕೋಟಿ
ರಾಬರ್ಟ್ ಫಸ್ಟ್ ಡೇ ಕಲೆಕ್ಷನ್ ₹17.24 ಕೋಟಿ ಆಗಿದ್ರೆ, ಎರಡನೇ ದಿನ ₹12.78 ಕೋಟಿ. ಅದೇ ಮೂರನೇ ದಿನ 14.10 ಕೋಟಿಗ ಏರಿಕೆಯಾಗಿತ್ತು. ನಾಲ್ಕನೇ ದಿನ ಭಾನುವಾರ ಕೂಡ ಕಲೆಕ್ಷನ್ನಲ್ಲಿ ಏರಿಕೆಯಾಗಿದ್ದು, ₹15.80 ಕೋಟಿ ಗಳಿಸಿದೆ. ಈ ಮೂಲಕ ರಾಬರ್ಟ್ ಕಲೆಕ್ಷನ್ ಕರ್ನಾಟಕದಲ್ಲಿ ₹59.80 ಕೋಟಿಯಾಗಿದೆ.
ರಾಬರ್ಟ್ ಆಂದ್ರದಲ್ಲೂ ತಕ್ಕಮಟ್ಟಿಗೆ ಉತ್ತಮ ಬ್ಯುಸಿನೆಸ್ ಮಾಡಿದೆ. ಕಳೆದ ನಾಲ್ಕು ದಿನಗಳಲ್ಲಿ ಆಂಧ್ರ ಹಾಗೂ ತೆಲಂಗಾಣದಲ್ಲಿ ಬರೋಬ್ಬರಿ 6.19 ಕೋಟಿ ಗಳಿಸಿದೆ. ಡಬ್ಬಿಂಗ್ ಸಿನಿಮಾವೊಂದು ಇಷ್ಟೊಂದು ಗಳಿಕೆ ಕಾಣ್ತಿರೋದು ಉತ್ತಮ ಬೆಳವಣಿಗೆ ಅಂತ ಸಿನಿಮಾ ಮಂದಿ ಭವಿಷ್ಯ ನುಡಿದಿದ್ದಾರೆ.