3 ರಾಜ್ಯ.. 1500 ಸ್ಕ್ರೀನ್ ಗಳು..3800 ಶೋ..ಎಲ್ಲಾ ಕಡೆ ಹೌಸ್ ಫುಲ್, ಹೌಸ್ ಫುಲ್, ಹೌಸ್ ಫುಲ್. ಇದು ರಾಬರ್ಟ್ ಫಸ್ಟ್ ಡೇ ರೆಕಾರ್ಡ್. ಸೋ ರಾಬರ್ಟ್ ಕಲೆಕ್ಷನ್ ಕೂಡ ಜಾಸ್ತೀನೆ ಆಗಿರಬೇಕು ಅಲ್ವಾ. ಬಾಕ್ಸಾಫೀಸ್ ಪಂಡಿತರು ಮಧ್ಯಾಹ್ನದಿಂದ ಕ್ಯಾಲಿಕೇಟರ್ ಹಿಡ್ಕೊಂಡು ಕೂಡಿ, ಕಳೆದು, ಗುಣಕಾರ ಮಾಡಿ ಫಸ್ಟ್ ಡೇ ಕಲೆಕ್ಷನ್ ಲೆಕ್ಕ ಹಾಕಿದ್ದಾರೆ. ಅವರ ಲೆಕ್ಕದ ಪ್ರಕಾರ ರಾಬರ್ಟ್ ಮೊದಲ ದಿನವೇ ಅಂದಾಜು 20 ಕೋಟಿ ಬಾಚಿದ್ದಾನೆ. 16ರಿಂದ 17 ಕೋಟಿ ಅಂತೂ ಪಕ್ಕಾ ಬರೆದಿಟ್ಕೊಳಿ ಅಂತ ಸವಾಲ್ ಹಾಕ್ತಿದ್ದಾರೆ.
ಪ್ರೀ ರಿಲೀಸ್ ಬ್ಯುಸಿನೆಸ್ ನಿಂದಲೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ರಾಬರ್ಟ್ ಈಗ ಥಿಯೇಟ್ರಿಕಲ್ ರಿಲೀಸ್ ಲೆಕ್ಕಾಚಾರದಲ್ಲೂ ದಾಖಲೆ ಬರೆಯೋ ಸುಳಿವು ಕೊಡ್ತಿದ್ದಾನೆ. ಕನ್ನಡ ಸಿನಿಮಾ ಫಸ್ಟ್ ಡೇ 16-17 ಕೋಟಿ ಕಲೆಕ್ಷನ್ ಮಾಡೋದು ಅಂದ್ರೆ, ತಮಾಷೆ ಅಲ್ಲಾ ಸ್ವಾಮಿ. ಮೂರು ದಿನ ರಾಬರ್ಟ್ ಅಬ್ಬರ ಹೀಗೆ ಇರುತ್ತೆ ಅನ್ನಲಾಗ್ತಿದೆ. ಹಂಗೇನಾದ್ರೂ ಆದ್ರೆ, ಒಂದೇ ಫಸ್ಟ್ ವೀಕೆಂಡ್ ನಲ್ಲೇ 100 ಕೋಟಿ ಕ್ಲಬ್ ಸೇರಿದ್ರು, ಅಚ್ಚರಿಪಡಬೇಕಿಲ್ಲ.
ಈಗಾಗ್ಲೇ ರಾಬರ್ಟ್ ಟೀಮ್ ಮಾರ್ಚ್ 12 ರ ಬೆಳಗ್ಗೆ ಫಸ್ಟ್ ಡೇ ಬಾಕ್ಸಾಫೀಸ್ ರಿಪೋರ್ಟ್ ರಿವೀಲ್ ಮಾಡ್ತಿವಿ ಅಂತ ಹೇಳಿದ್ದಾರೆ. ನೋಡೋಣ, ಪೊಗರು ಧ್ರುವ ರೀತಿ ದರ್ಶನ್ ಕೂಡ ಪಕ್ಕಾ ಕಲೆಕ್ಷನ್ ರಿಪೋರ್ಟ್ ಕೊಡ್ತಾರಾ ಅಂತ.