ಕೆ. ಮಂಜು ಪುತ್ರ ಶ್ರೇಯಸ್ ನಟಿಸಿದ ಮತ್ತೊಂದು ಸಿನಿಮಾದ ಚಿತ್ರೀಕರಣ ಮುಗಿದಿದೆ. ಇದೇ ಖುಷಿಯಲ್ಲಿ ಸಿನಿಪ್ರಿಯರಿಗೆ ನಿರ್ದೇಶಕ ನಂದ ಕಿಶೋರ್ ಟೀಸರ್ ನೀಡಿದ್ದಾರೆ. ಸದಾ ಹೊಸಬರ ಚಿತ್ರಗಳನ್ನು ಪ್ರೋತ್ಸಾಹಿಸೋ ಉಪೇಂದ್ರ ಶ್ರೇಯಸ್ ಹೊಸ ಸಿನಿಮಾ ‘ರಾಣಾ’ದ ಟೀಸರ್ ರಿಲೀಸ್ ಮಾಡಿದ್ದಾರೆ. ಈ ವೇಳೆ ಉಪ್ಪಿ ಯುವ ಪ್ರತಿಭೆ ಶ್ರೇಯಸ್ ಬಗ್ಗೆ ಏನ್ ಹೇಳಿದ್ದಾರೆ ನೋಡಿ.
‘ಶ್ರೇಯಸ್ ಹೆಸರಲ್ಲೇ ಶ್ರೇಯಸ್ಸು ಇದೆ. ಈತನ ಮಾತು ಕೇಳಿ ಸಂತೋಷವಾಯಿತು. ತಂದೆಯನ್ನು ಮೀರಿಸಿದ ಮಗ ಶ್ರೇಯಸ್. ಮಂಜು ಪುತ್ರ ಹಾಗೂ ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ಉಪೇಂದ್ರ ಮನಸಾರೆ ಹರಸಿದ್ದಾರೆ. ಇದೇ ವೇಳೆ ಶ್ರೇಯಸ್ ಕೂಡ ತಾನು ಉಪ್ಪಿ ಅಭಿಮಾನಿ ಎಂದಿದ್ದಾರೆ.
‘ನಾನು ಚಿಕ್ಕಂದಿನಿಂದ್ಲೂ ಉಪೇಂದ್ರ ಅವರ ಹುಚ್ಚು ಅಭಿಮಾನಿ. ಉಪೇಂದ್ರ ಅವರಿಂದ ಕಲಿತಿರೋದು ಬಹಳಷ್ಟಿದೆ. ಚಿತ್ರರಂಗಕ್ಕೆ ಹೊಸದಾಗಿ ಬರೋ ಯುವ ಪ್ರತಿಭೆಗಳಿಗೆ ಅವರು ನೀಡುವ ಪ್ರೋತ್ಸಾಹಕ್ಕೆ ಚಿರಋಣಿ. ಶಿವರಾಜಕುಮಾರ್ ಅವರು ಸಹ ನನಗೆ ಈ ಚಿತ್ರದಲ್ಲಿ ಲಾಂಗ್ ಹಿಡಿಯುವುದನ್ನು ಹೇಳಿಕೊಟ್ಟಿದ್ದಾರೆ. ಇನ್ನು ನಾನು ಉತ್ತಮವಾಗಿ ನಟಿಸಿದ್ದೇನೆಂದರೆ ಅದಕ್ಕೆ ಕಾರಣ ನಿರ್ದೇಶಕ ನಂದಕಿಶೋರ್ ಹಾಗೂ ಛಾಯಾಗ್ರಾಹಕ ಶೇಖರ್ ಚಂದ್ರ.’ ಇದು ಕೆ.ಮಂಜು ಪುತ್ರ ಶ್ರೇಯಸ್ ಹೇಳಿದ ಮಾತು.
ರಾಣಾ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ನಂದಕಿಶೋರ್ ಸಿನಿಮಾ ನಿರ್ದೇಶಿಸಿದ್ದಾರೆ. ಚಂದನ್ ಶೆಟ್ಟಿ ಸಂಗೀತವಿದ್ದು, ಶೇಖರ್ ಚಂದ್ರ ಅವ್ರ ಛಾಯಾಗ್ರಹಣವಿದೆ. ಈಗಾಗ್ಲೇ ಸಿನಿಮಾ ಬಹುತೇಕ ಮುಗಿದಿದ್ದು, ಶೀಘ್ರದಲ್ಲೇ ಬಿಡುಗಡೆ ಸಜ್ಜಾಗಲಿದೆ ಚಿತ್ರತಂಡ.