ರಶ್ಮಿಕಾ ಮಂದಣ್ಣ ತೆಲುಗು ಅಷ್ಟೇ ಅಲ್ಲ, ತಮಿಳು, ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿರೋದು ಗೊತ್ತೇ ಇದೆ. ಅದ್ರಲ್ಲೂ ತೆಲುಗಿನಲ್ಲಿ ರಶ್ಮಿಕಾ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದಾಗಿದೆ. ಈಗ ತಮಿಳು ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅದ್ರಲ್ಲಿ ಈಗಾಗ್ಲೇ ತಮಿಳಿನಲ್ಲಿ ಕಾರ್ತಿ ಜೊತೆ ನಟಿಸಿದ ಸುಲ್ತಾನ್ ಸಿನಿಮಾ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿದೆ. ಆದ್ರೆ, ಒಂದೇ ತಿಂಗಳಲ್ಲಿ ಅನಿವಾರ್ಯವಾಗಿ ಒಟಿಟಿಯಲ್ಲಿ ರಿಲೀಸ್ ಮಾಡ್ಬೇಕಾದ ಅನಿವಾರ್ಯತೆ ಎದುರಾಗಿದೆ.
ತಮಿಳಿನ ಸ್ಟಾರ್ ನಟ ಕಾರ್ತಿ ಸುಲ್ತಾನ್ ಏಪ್ರಿಲ್ 2 ರಂದು ರಿಲೀಸ್ ಆಗಿತ್ತು. ಸಿನಿಮಾ ರಿಲೀಸ್ ಕೆಲವೇ ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿತ್ತು. ಅಲ್ಲಿಂದ ಜನರು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡೋದನ್ನ ಕಡಿಮೆ ಮಾಡಿದ್ದರು. ಇನ್ನೊಂದ್ಕಡೆ ಬೇರೆ ಬೇರೆ ರಾಜ್ಯಗಳಲ್ಲಿ 50 ಪರ್ಸೆಂಟ್ ಸೀಟು ಅನ್ನೋ ಆದೇಶ ಹೊರಡಿಸಿದ್ದರಿಂದ ಸಿನಿಮಾಗೆ ಕೊಂಚ ಹಿನ್ನೆಡೆಯಾಗಿತ್ತು. ಹೀಗಾಗಿ ಈ ಒಂದು ತಿಂಗಳ ಬಳಿಕ ಹಾಟ್ಸ್ಟಾರ್ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದೆ.
ರಶ್ಮಿಕಾ ಮಂದಣ್ಣ ಮೊದಲ ತಮಿಳು ಸಿನಿಮಾ ಸುಲ್ತಾನ್ ಕೂಡ ಬಾಕ್ಸಾಫೀಸ್ನಲ್ಲಿ ಚಿಂದಿ ಉಡಾಯಿಸೋಕೆ ಸಜ್ಜಾಗಿತ್ತು. ಯಾಕಂದ್ರೆ, ಇವ್ರ ಮೊದಲ ಕನ್ನಡ ಸಿನಿಮಾ ಕಿರಿಕ್ ಪಾರ್ಟಿ ಬ್ಲಾಕ್ ಬಸ್ಟರ್ ಲಿಸ್ಟ್ ಸೇರಿದ್ರೆ, ತೆಲುಗಿನ ಮೊದಲ ಸಿನಿಮಾ ಚಲೋ ಕೂಡ 100 ದಿನ ಪೂರೈಸಿತ್ತು.
ಸದ್ಯ ಬಾಲಿವುಡ್ನಲ್ಲೀಗ ರಶ್ಮಿಕಾ ಮಂದಣ್ಣ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ ನಟನೆಯ ಮಿಷನ್ ಮಜ್ನು ಹಾಗೂ ಅಮಿತಾಬ್ಗೆ ಮಗಳಾಗಿ ನಟಿಸುತ್ತಿರೋ ಗುಡ್ಬೈ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ
.