ಸ್ಯಾಂಡಲ್ ವುಡ್ ಸಾನ್ವಿ ರಶ್ಮಿಕಾ ಮಂದಣ್ಣ ಈಗ ಬಹುಭಾಷಾ ನಟಿ. ಕನ್ನಡಕ್ಕಿಂತ ಹೆಚ್ಚಾಗಿ ಬೇರೆ ಭಾಷೆಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ವಿಭಿನ್ನ ಪಾತ್ರಗಳನ್ನು ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ ಈ ನಟಿ. ಈಗ ಸುದ್ದಿಯಲ್ಲಿರೋದು ರಶ್ಮಿಕಾ ಗದ್ದೆ ಊಳುತ್ತಿರುವ ವಿಚಾರ.
ರಶ್ಮಿಕಾ ಪಕ್ಕಾ ಹಳ್ಳಿ ಹುಡುಗಿ ಗೆಟಪ್ ನಲ್ಲಿ ಟಿಲ್ಲರ್ ಹಿಡಿದು ಗದ್ದೆ ಊಳುತ್ತಿದ್ದಾರೆ. ಕೆಸರಿನ ನಡುವೆ ಕಮಲದ ರೀತಿಯಲ್ಲಿ ನಳನಳಿಸ್ತಿದ್ದಾರೆ ಅನ್ನೋದು ಅಭಿಮಾನಿಗಳ ಅನಿಸಿಕೆ. ಅಂದ್ಹಾಗೆ ರಶ್ಮಿಕಾ ಈ ರೂಪಕ್ಕೆ ಕಾರಣ ಒಂದು ಸಿನಿಮಾ. ತಮಿಳಿನಲ್ಲಿ ಕಾರ್ತಿ ಎದುರು ನಾಯಕಿಯಾಗಿ ನಟಿಸುತ್ತಿರುವ ರಶ್ಮಿಕಾ ಅ ಪಾತ್ರಕ್ಕಾಗಿ ಗದ್ದೆ ಉಳುವ ಕೆಲಸ ಮಾಡಿದ್ದಾರೆ.
ಈ ವಿಡಿಯೋ ಖುದ್ದು ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪಾತ್ರ ಮಾಡುವಾಗ ಅದನ್ನು ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದೀನಿ ಎಂದಿದ್ದಾರೆ ಕೂಡಾ. ಅಂದ್ಹಾಗೆ ಹಳ್ಳಿ ಹುಡುಗಿಯ ಈ ಪಾತ್ರ ತಮಿಳಿನ ಸುಲ್ತಾನ್ ಸಿನಿಮಾಕ್ಕಾಗಿ. ಈ ಚಿತ್ರ ಬಿಟ್ಟರೆ ಹಿಂದಿಯ ಮಿಷನ್ ಮಜ್ನು ಚಿತ್ರ ರಶ್ಮಿಕಾ ಕೈಯಲ್ಲಿದೆ. ಪೊಗರು ನಂತರ ರಶ್ಮಿಕಾ ಕನ್ನಡದ ಯಾವ ಚಿತ್ರವನ್ನೂ ಒಪ್ಪಿಕೊಂಡಿಲ್ಲ.