ರಶ್ಮಿಕಾ ಮಂದಣ್ಣ ಸದ್ಯ ಸದಾ ಸುದ್ದಿಯಲ್ಲಿರೋ ನಟಿ. ಬಾಲಿವುಡ್ ಸಿನಿಮಾ, ಸೌತ್ ಸಿನಿಮಾ ಅಂತ ಬ್ಯುಸಿಯಾಗಿದ್ದಾರೆ. ಅದ್ರಲ್ಲೂ ನ್ಯಾಷನಲ್ ಕ್ರಶ್ ಅಮಿತಾಬ್ ಬಚ್ಚನ್ ಸಿನಿಮಾ ಆರಂಭ ಮಾಡಿದ್ಮೇಲಂತೂ ರೇಂಜ್ ಮತ್ತಷ್ಟು ಹೆಚ್ಚಾಗಿದೆ. ಈ ಗ್ಯಾಪ್ನಲ್ಲಿ ವಿಶ್ವ ಅತೀ ದೊಡ್ಡ ಫುಡ್ ಸಂಸ್ಥೆಗೆ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.
ರಶ್ಮಿಕಾ ಮಂದಣ್ಣ ಮೆಕ್ಡೊನಾಲ್ಡ್ ಸಂಸ್ಥೆಯ ರಾಯಭಾರಿಯಾಗಿದ್ದಾರೆ. ಮೆಕ್ಡೊನಾಲ್ಡ್ ನ ದಕ್ಷಿಣ ಭಾರತದ ರಾಯಭಾರಿಯಾಗಿ ಆಯ್ಕೆಯಾಗಿದ್ದು, ರಶ್ಮಿಕಾ ಮೂಲಕ ಮತ್ತಷ್ಟು ಗ್ರಾಹಕರನ್ನ ತಲುಪಲು ಈ ಪಾಶ್ವಿಮಾತ್ಯ ಸಂಸ್ಥೆ ಮುಂದಾಗಿದೆ. ಮೆಕ್ಡೊನಾಲ್ಡ್ ರಾಯಭಾರಿಯಾಗಿದ್ದಕ್ಕೆ ರಶ್ಮಿಕಾ ಕೂಡ ಫುಲ್ ಖುಷಿಯಾಗಿದ್ದು, ಟ್ವಿಟ್ಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ರಶ್ಮಿಕಾ ದಕ್ಷಿಣ ಭಾರತದ ಮೂರು ಭಾಷೆಯ ಸಿನಿಮಾಗಳಲ್ಲೂ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು ಭಾಷಿಗರಿಗೆ ಈಗಾಗ್ಲೇ ಚಿರಪರಿಚಿತರಿದ್ದಾರೆ. ಇದ್ರೊಂದಿಗೆ ಬಾಲಿವುಡ್ ಸಿನಿಮಾಗಳಲ್ಲೂ ನಟಿಸ್ತಿರೋದ್ರಿಂದ ರಶ್ಮಿಕಾ ಮಂದಣ್ಣ ತಮ್ಮ ಬ್ರ್ಯಾಂಡ್ಗೆ ಸೂಕ್ತ ಆಯ್ಕೆ ಕಂಪನಿ ತೀರ್ಮಾನಿಸಿದೆ.
ಬಾಲಿವುಡ್ ಸಿನಿಮಾಗಾಗಿ ಮುಂಬೈನಲ್ಲಿ ಬೀಡು ಬಿಟ್ಟಿದ್ದ ರಶ್ಮಿಕಾ ಮಂದಣ್ಣ ಹೈದ್ರಾಬಾದ್ಗೆ ಹಿಂತಿರುಗಿದ್ದಾರೆ. ಕೊರೊನಾ ಕೇಸ್ ಹೆಚ್ಚಾಗಿದ್ದರಿಂದ ರಶ್ಮಿಕಾ ಹಿಂತಿರುಗಿದ್ದು, ಹೈದ್ರಾಬಾದ್ನಲ್ಲೇ ಉಳಿಯಲಿದ್ದಾರೆ ಎನ್ನಲಾಗಿದೆ. ರಶ್ಮಿಕಾ ಎರಡು ಬಾಲಿವುಡ್ ಸಿನಿಮಾ ಮಿಷನ್ ಮಜ್ನು ಹಾಗೂ ಗುಡ್ಬೈ ಸಿನಿಮಾಗಳ ಬಿಡುಗಡೆಗಾಗಿ ಫ್ಯಾನ್ಸ್ ಎದುರುನೋಡ್ತಿದ್ದಾರೆ. ಇನ್ನೊಂದ್ಕಡೆ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಷದಲ್ಲೂ ಇದೇ ಆಗಸ್ಟ್ 13ಕ್ಕೆ ಬಿಡುಗಡೆಗೆ ಸಜ್ಜಾಗಿದೆ.