ನ್ಯಾಷನಲ್ ಕ್ರಶ್ ಆಗಿದ್ದೇ ಆಗಿದ್ದು ಎಲ್ಲಿ ನೋಡಿದ್ರೂ ರಶ್ಮಿಕಾ ಮಂದಣ್ಣ ಬಗ್ಗೆನೇ ಚರ್ಚೆ. ರಶ್ಮಿಕಾ ಎಲ್ಲೇ ಕಂಡರೂ ಫೋಟೋ ಸೆಲ್ಫಿ ಕಾಮನ್. ಕನ್ನಡದ ಕಿರಿಕ್ ಪಾರ್ಟಿ ನಟನೆ ಶುರುಮಾಡಿದ್ದ ರಶ್ಮಿಕಾ ತೆಲುಗು, ತಮಿಳು ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಯಶಸ್ಸಿನ ತುತ್ತ ತುದಿಯಲ್ಲಿರೋ ಕಿರಿಕ್ ಬೆಡಗಿ ತಮಿಳು ಮನೆಯ ಸೊಸೆಯಾಗ್ಬೇಕು ಅಂತ ಸಂದರ್ಶನವೊಂದ್ರಲ್ಲಿ ಹೇಳಿದ್ದು ಭಾರೀ ಚರ್ಚೆಯಾಗುತ್ತಿದೆ.
ರಶ್ಮಿಕಾ ಮಂದಣ್ಣ ಆಗಾಗ ಮದ್ವೆ ವಿಚಾರಕ್ಕೆ ಚರ್ಚೆಯಾಗ್ತಾನೇ ಇರ್ತಾರೆ. ಯಾವುದೇ ಭಾಷೆಯಲ್ಲೂ ಸಂದರ್ಶನ ನೀಡಿದ್ರೂ, ಮದುವೆ ಬಗ್ಗೆ ಒಂದಾದ್ರೂ ಪ್ರಶ್ನೆ ಕೇಳ್ತಾನೇ ಇರ್ತಾರೆ. ಈ ಬಾರಿ ಕೂಡ ವಿವಾಹದ ಬಗ್ಗೆ ಪ್ರಶ್ನೆ ಕೇಳಿದಾಗ, ತಮಿಳು ಮನೆಯ ಸೊಸೆಯಾಗ್ಬೇಕು ಅಂತ ಹೇಳಿದ್ದಾರೆ. ಅಷ್ಟಕ್ಕೂ ರಶ್ಮಿಕಾ ಯಾಕೆ ಹೀಗೆಂದ್ರು? ಕನ್ನಡ, ತೆಲುಗು ಹುಡುಗರನ್ಯಾಕೆ ಮದ್ವೆ ಆಗಲ್ಲ? ಈ ಪ್ರಶ್ನೆಗಳು ರಶ್ಮಿಕಾ ಅಭಿಮಾನಿಗಳನ್ನ ಕಾಡುತ್ತಿವೆ.
ರಶ್ಮಿಕಾ ಮಂದಣ್ಣ ತಮಿಳಿನಲ್ಲಿ ನಟಿಸಿದ್ದು ಒಂದೇ ಸಿನಿಮಾ. ಕಾರ್ತಿ ನಟನೆಯ ಸುಲ್ತಾನ್ ಸಿನಿಮಾ ರಿಲೀಸ್ ಆಗಿದೆ ಯಶಸ್ಸು ಕಂಡಿದೆ. ಒಂದೇ ಸಿನಿಮಾಗೇ ತಮಿಳು ಮನೆಯ ಸೊಸೆಯಾಗ್ಬೇಕು ಅಂತಿರೋದ್ಯಾಕೆ ಅನ್ನೋದನ್ನ ಸ್ಪಷ್ಟಪಡಿಸಿದ್ದಾರೆ. ತಮಿಳು ಮನೆಯ ಊಟ ಇಷ್ಟ ಪಟ್ಟಿದ್ದಾರೆ. ಅವರ ಸಂಸ್ಕೃತಿ ಇಷ್ಟ ಆಗಿದ್ಯಂತೆ. ಹೀಗಾಗಿ ತಮಿಳು ಮನೆಗೆ ಸೊಸೆಯಾಗ್ಬೇಕು ಎಂದು ಹೇಳಿದ್ದಾರೆ.
ಸಂದರ್ಶನವೊಂದ್ರಲ್ಲಿ ರಶ್ಮಿಕಾ ಹೇಳಿದ ಈ ವಿಷಯವನ್ನು ಟಿವಿ9, ಈನಾಡು ಹಾಗೂ ತೆಲುಗಿನ ಕೆಲವು ವೆಬ್ಸೈಟ್ಗಳು ವರದಿ ಮಾಡಿವೆ. ಸದ್ಯ ರಶ್ಮಿಕಾ ಬಾಲಿವುಡ್ನ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಮಿತಾಬ್ ಬಚ್ಚನ್ ಜೊತೆ ಗುಡ್ಬೈ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಜೊತೆ ಮಿಷನ್ ಮಜ್ನು ಸಿನಿಮಾದಲ್ಲಿ ನಟಿಸಿದ್ದಾರೆ.