ಎಲ್ಲಿಯ ಕನ್ನಡ ಸಿನಿಮಾ? ಎಲ್ಲಿಯ ಬಾಲಿವುಡ್.. ರಶ್ಮಿಕಾ ಮಂದಣ್ಣ ಬೆಳೆದು ಬಂದ ಹಾದಿಯೇ ಬಲು ರೋಚಕ. ಕಿರಿಕ್ ಪಾರ್ಟಿಯ ಸಾನ್ವಿಯಿಂದ ಹಿಡಿದು ನ್ಯಾಷನಲ್ ಕ್ರಶ್ ಆಗೋವರೆಗೂ ರಶ್ಮಿಕಾ ಮಂದಣ್ಣ ಬೆಳೆದು ನಿಂತ ರೀತಿ ಮೆಚ್ಚುವಂತಹದ್ದೇ. ಇತ್ತೀಚೆಗೆ ಕನ್ನಡದಲ್ಲಿ ಈಕೆಯ ಪೊಗರು ರಿಲೀಸ್ ಆಗಿ, ಯಶಸ್ಸು ಕಂಡಿದೆ. ಸದ್ಯ ಬಾಲಿವುಡ್ ಹಾಗೂ ಹೈದ್ರಾಬಾದ್ ಅಂತ ಬ್ಯುಸಿಯಾಗಿದ್ದಾರೆ. ಸಿದ್ಧಾರ್ಥ ಮಲ್ಹೋತ್ರಾ ಜೊತೆ ‘ಮಿಶನ್ ಮಜ್ನು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ರಶ್ಮಿಕಾ. ಈ ಸಿನಿಮಾಗಾಗಿ ರಶ್ಮಿಕಾ ಪದೇ ಪದೇ ಹೈದರಾಬಾದ್ ನಿಂದ ಮುಂಬೈಗೆ ಪ್ರಯಾಣ ಬೆಳೆಸುತ್ತಿದ್ದಾರೆ.
ಮಿಷನ್ ಮಜ್ನು ಸಿನಿಮಾಗಾಗಿ ಮುಂಬೈಗೆ ಹೋದಾಗ್ಲೆಲ್ಲಾ ಮುಂಬೈನ ಹೋಟೆಲಿನಲ್ಲಿ ಉಳಿದುಕೊಳ್ಬೇಕಿತ್ತಂತೆ. ಇದು ರಶ್ಮಿಕಾಗೆ ಕಿರಿಕಿರಿ ಆಗಿತ್ತು. ಹೀಗಾಗಿ ರಶ್ಮಿಕಾ ಮಂದಣ್ಣ ಮುಂಬೈನಲ್ಲೇ ಒಂದು ಅಪಾರ್ಟ್ಮೆಂಟ್ ಅನ್ನ ಖರೀದಿ ಮಾಡಿದ್ದಾರೆ. ಇದ್ರಿಂದ ಮುಂಬೈಗೆ ಹೋಗೋದು ಬರೋದು ಸುಲಭ ಆಗುತ್ತೆ. ಅಷ್ಟೇ ಅಲ್ಲ, ಮುಂಬೈ ವಾಸವೂ ಅಹ್ಲಾದಕರವಾಗಿರ್ಬೇಕು ಅನ್ನೋ ನಿರ್ಧಾರಕ್ಕೆ ಬಂದು ಹೀಗೆ ಮಾಡಿದ್ದಾರಂತೆ.
ಇಷ್ಟೇ ಅಲ್ಲ, ಹೈದ್ರಾಬಾದ್ ಮನೆಯೊಂದ ಕೆಲವು ನೆಚ್ಚಿನ ವಸ್ತುಗಳು ಮುಂಬೈಗೆ ಶಿಫ್ಟ್ ಆಗಿವೆ. ಬಾಲಿವುಡ್ ನಲ್ಲಿ ಹೆಚ್ಚು ಅವಕಾಶಗಳು ಬರುವ ಸಾಧ್ಯತೆಯಿದೆ. ಈ ಕಾರಣಕ್ಕಾಗೇ ಮುಂಬೈನಲ್ಲಿ ಮನೆ ಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು ರಶ್ಮಿಕಾ ಸಿನಿಮಾ ವಿಷಯಕ್ಕೆ ಬಂದ್ರೆ, ಮಿಶನ್ ಮಜ್ನು ನೈಜ ಘಟನೆ ಆಧಾರಿತ ಸಿನಿಮಾ. 1970ರಲ್ಲಿ ನಡೆದ ಈ ಮಿಷನ್ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧವನ್ನು ಶಾಶ್ವತವಾಗಿ ಬದಲಾಯಿಸಿಬಿಟ್ಟಿತ್ತು. ಭಾರತದ ಅತ್ಯಂತ ಪ್ರತಿಷ್ಟಿತ ಮಿಷನ್ ಅನ್ನ ಶಾಂತನು ಬಾಗ್ಚಿ ತೆರೆಮೇಲೆ ತರುತ್ತಿದ್ದಾರೆ.