ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಟಾಲಿವುಡ್ನ ಹಾಟ್ ಜೋಡಿಗಳಲ್ಲೊಂದು. ಇಬ್ಬರೂ ಜೊತೆಯಾಗಿ ಸಿನಿಮಾ ಮಾಡಿದ್ದಾರೆ ಅಂದ್ರೆ, ಅದು ಬಾಕ್ಸಾಫೀಸ್ನಲ್ಲಿ ಚಿಂದಿ ಉಡಾಯಿಸೋದು ಗ್ಯಾರಂಟಿ . ಇದಕ್ಕೆ ಗೀತಾ ಗೋವಿಂದಂ ಹಾಗೂ ಡ್ರಿಯರ್ ಕಾಮ್ರೇಡ್ ಅಂತಹ ಸಿನಿಮಾಗಳೇ ಸಾಕ್ಷಿ. ತೆರೆಮೇಲೆ ಇಬ್ಬರ ಕೆಮಿಸ್ಟ್ರಿ ನೋಡಿ ರಶ್ಮಿಕಾ ಹಾಗೂ ವಿಜಯ್ ಸದ್ದಿಲ್ಲದೆ ಪ್ರೀತಿ ಮಾಡ್ತಿದ್ದಾರೆ ಅನ್ನೋ ಸುದ್ದಿಗಳು ಓಡಾಡಿದ್ದವು. ಮತ್ತೆ ಕೆಲವ್ರು ರಿಯಲ್ ಲೈಫ್ನಲ್ಲೂ ಜೊತೆಯಾಗಲಿ ಎಂದು ಬಯಸಿದ್ದರು. ಇದೇ ಜೋಡಿ ಈಗ ಬಾಲಿವುಡ್ಗೆ ಹಾರಿದೆ. ಅಲ್ಲೂ ಸದ್ದಿಲ್ಲದೆ ಉತ್ತರ ಭಾರತದ ಜನರ ಪ್ರೀತಿ ಗೆಲ್ಲುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಬಾಲಿವುಡ್ ಸಿನಿಮಾಗಳಲ್ಲಂತೂ ನಟಿಸುತ್ತಿರೋದು ಗೊತ್ತಿರೋ ವಿಷಯವೇ. ಇನ್ನೂ ಆ ಸಿನಿಮಾಗಳು ಬಿಡುಗಡೆಯಾಗಿಲ್ಲ. ಅಷ್ಟರಲ್ಲೇ ಇಬ್ಬರನ್ನೂ ಹಿಂದಿ ಸಿನಿಮಾ ವೀಕ್ಷಿಸೋ ಪ್ರೇಕ್ಷಕರು ಎಷ್ಟು ಇಷ್ಟ ಪಟ್ಟಿದ್ದಾರೆ ಅನ್ನೋದನ್ನು ಡಿಯರ್ ಕ್ರಾಮೇಡ್ ಸಾಬೀತು ಮಾಡಿದೆ. ಡಿಯರ್ ಕ್ರಾಮೇಡ್ ಸಿನಿಮಾವನ್ನು ಹಿಂದಿಗೆ ಡಬ್ ಮಾಡಿ ಯುಟ್ಯೂಬ್ನಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಸಿನಿಮಾವನ್ನು ಬರೋಬ್ಬರಿ 25 ಕೋಟಿ ಮಂದಿ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ.
ಡಿಯರ್ ಕಾಮೇಡ್ ಸಿನಿಮಾವನ್ನು ಬಾಲಿವುಡ್ನ ಸ್ಟಾರ್ ನಿರ್ದೇಶಕ ಕರಣ್ ಜೋಹರ್ ಕೂಡ ಇಷ್ಟ ಪಟ್ಟಿದ್ದರು. ಇದೇ ಕಾರಣಕ್ಕೆ ವಿಜಯ್ ದೇವರಕೊಂಡವನನ್ನು ಬಾಲಿವುಡ್ಗೆ ಪರಿಚಯಿಸೋಕೆ ಮುಂದಾಗಿದ್ದಾರೆ. ಈ ಮಧ್ಯೆ ಡಿಯರ್ ಕಾಮ್ರೇಡ್ ವಿಜಯ್ ಹಾಗೂ ರಶ್ಮಿಕಾ ಭವಿಷ್ಯವನ್ನು ಈಗಲೇ ಹೇಳಿಬಿಟ್ಟಿದೆ. ಈ ಸಿನಿಮಾ ಕನ್ನಡ, ಹಿಂದಿ, ತಮಿಳು, ತೆಲುಗು ಭಾಷೆಗೆ ಡಬ್ ಆಗಿ ಬಿಡುಗಡೆಯಾಗಿತ್ತು. ಆದ್ರೆ, ಚಿತ್ರಮಂದಿರದಲ್ಲಿ ಯಶಸ್ಸು ಸಿಗಲಿಲ್ಲ.
ಡಿಯರ್ ಕಾಮ್ರೇಡ್ ಸಿನಿಮಾ ಸೋಲಿನ ಬಳಿಕ ಇಬ್ಬರೂ ಸ್ಪಲ್ಪ ಬ್ರೇಕ್ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಹೀಗಾಗಿ ಈ ಜೋಡಿ ತಮ್ಮದೇ ಹಾದಿಯಲ್ಲಿ ಸಾಗುತ್ತಿದೆ. ಪುರಿ ಜಗನ್ನಾಥ್ ಸಿನಿಮಾ ಲೈಗರ್ನಲ್ಲಿ ವಿಜಯ್ ನಟಿಸುತ್ತಿದ್ದರೆ, ಅತ್ತ ರಶ್ಮಿಕಾ ಮಿಷನ್ ಮಜ್ನು ಹಾಗೂ ಅಮಿತಾಬ್ ಬಚ್ಚನ್ ಮಗಳಾಗಿ ಗುಡ್ಬೈ ಚಿತ್ರದಲ್ಲಿ ನಟಿಸುತ್ತಿದ್ದಾರೆ.