ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಎಲ್ಲೆಡೆ ಯಾವುದಾದ್ರೂ ಒಂದು ವಿಷಯಕ್ಕೆ ಚರ್ಚೆಯಲ್ಲಿ ಇರ್ತಾರೆ. ಈಗ ಕನ್ನಡದಲ್ಲಿ ನಟಿಸೋದು ಕಮ್ಮಿಯಾಗಿದ್ರೂ, ಟಾಲಿವುಡ್ವುಡ್ ಹಾಗೂ ಬಾಲಿವುಡ್ ಸಿನಿಮಾಗಳಲ್ಲೇ ಹೆಚ್ಚು ಕಾಣಿಸಿಕೊಳ್ತಿದ್ದಾರೆ. ಅವ್ರ ಸಿನಿಮಾ ವಿಚಾರದಲ್ಲಿ ಎಷ್ಟೇ ಬೆಳೆದಿದ್ರೂ, ತಮ್ಮನ್ನು ಬೆಳೆಸಿದ ಸಮಾಜದ ಜನರಿಗೆ ಏನ್ ಮಾಡಿದ್ದಾರೆ? ಈ ಕಷ್ಟಕಾಲದಲ್ಲಿ ರಶ್ಮಿಕಾ ಸಹಾಯಹಸ್ತ ಚಾಚಿದ್ದಾರಾ? ಅನ್ನೋ ಪ್ರಶ್ನೆ ಕಾಡದೆ ಇರೋದಿಲ್ಲ. ಅದಕ್ಕೆ ಉತ್ತರ ಇಲ್ಲಿದೆ.
ಕೊರೊನಾದಂತಹ ಈ ಸಂಕಷ್ಟದಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ತೊಂದ್ರೆಯಲ್ಲಿರೋ ಜನರ ಸಹಾಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸ್ಪ್ರೆಡಿಂಗ್ ಹೋಪ್ ಎನ್ನುವ ನೂತನ ಕಾರ್ಯಕ್ರಮವನ್ನು ಇದೇ ಕಷ್ಟಕಾಲಕ್ಕಾಗಿ ಅವ್ರು ಲಾಂಚ್ ಮಾಡಿದ್ದಾರೆ.
‘‘ಕೊರೊನಾದಂತಹ ಸಂಕಷ್ಟ ಕಾಲದಲ್ಲಿ ನಮ್ಮ ಜೊತೆ ನಿಂತಿರೋ ಅದೆಷ್ಟೋ ಜನರಿದ್ದಾರೆ. ಅವರೆಲ್ಲಾ ಹೀಗೆ ಬೆಂಬಲಕ್ಕೆ ಬಾರದಿದ್ದರೆ ನಮ್ಮ ಬದುಕು ಅದೆಷ್ಟು ದುಸ್ಥರವಾಗುತ್ತಿತ್ತು ಅಲ್ವಾ? ಹೀಗೆ ಸದ್ದಿಲ್ಲದೇ ಸಹಾಯ ಮಾಡುತ್ತಿರುವವರನ್ನು ಕಂಡಾಗ ನನಗೆ ಆಶಾಭಾವನೆ ಮೂಡುತ್ತದೆ. ಈ ಜಗತ್ತಿನಲ್ಲಿ ಅದೆಷ್ಟು ಒಳಿತಿದೆಯಲ್ವಾ ಅಂತೆನಿಸುತ್ತದೆ. ಹಾಗಾಗಿ ಇಂಥಾ ಸಹೃದಯ ಜೀವಗಳನ್ನು ಜಗತ್ತಿಗೆ ಪರಿಚಯಿಸೋ ಕೆಲಸ ಆಗ್ಬೇಕು ಅನ್ನೋ ಕಾರಣಕ್ಕೆ ನೂತನ ಕಾರ್ಯಕ್ರಮ ಆರಂಭಿಸಿದ್ದೇನೆ’’ ಎಂದು ರಶ್ಮಿಕಾ ಹೇಳಿದ್ದಾರೆ.
ಸದ್ಯ ರಶ್ಮಿಕಾ ಮಂದಣ್ಣ ಈಗ ಹೈದ್ರಾಬಾದ್ನಲ್ಲಿದ್ದಾರೆ. ಬಾಲಿವುಡ್ ಸಿನಿಮಾಗಳಿಗಾಗಿ ಮುಂಬೈಗೆ ಶಿಫ್ಟ್ ಆಗಿದ್ದ ಮಂದಣ್ಣ ವಾಪಸ್ ಬಂದಿದ್ದಾರೆ. ಅಂದ್ಹಾಗೆ ಬಾಲಿವುಡ್ನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ‘ಮಿಶನ್ ಮಜ್ನು’ ಮತ್ತು ಅಮಿತಾಭ್ ಬಚ್ಚನ್ ಜೊತೆಗೆ ‘ಗುಡ್ ಬೈ’ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಾಮಾನ್ಯ ಜನರ ವಿಶಿಷ್ಟ ಕೆಲಸದ ಪರಿಚಯ ಮಾಡಿಕೊಡೋ ರಶ್ಮಿಕಾಳ ಹೊಸ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.