ಕಿಚ್ಚ ಸುದೀಪ್ ಅಂದ್ರೆ, ಡೆಡಿಕೇಷನ್. ಒಮ್ಮೆ ಹಿಡಿದ ಕೆಲಸವನ್ನು ಅಷ್ಟು ಸುಲಭವಾಗಿ ಬಿಡುವ ಜಾಯಮಾನ ಅವ್ರದ್ದಲ್ಲ. ಯಾವತ್ತೂ ಜಿಮ್ ಕಡೆ ಮುಖ ಹಾಕಿ ಮಲಗದವರು, ಪೈಲ್ವಾನ್ ಚಿತ್ರಕ್ಕಾಗಿ ಬಹಳ ಕಷ್ಟಪಟ್ಟಿದ್ದರು. ತಿಂಗಳುಗಟ್ಟಲೆ ಜಿಮ್ನಲ್ಲಿ ಬೆವರಿಳಿಸಿ, ಸಿಕ್ಸ್ ಪ್ಯಾಕ್ ಮಾಡಿ ನಿಜಕ್ಕೂ ಪೈಲ್ವಾನ್ ಅನ್ನಿಸಿಕೊಂಡರು. ಪೈಲ್ವಾನ್ ಸಿನಿಮಾ ಮುಗಿದ ಮೇಲೂ ವರ್ಕೌಟ್ ನಿಲ್ಲಿಸಿರಲಿಲ್ಲ. ಆದರೆ ಕೊರೊನಾ ತಗುಲಿದ ಮೇಲೆ ಅನಿವಾರ್ಯವಾಗಿ ಜಿಮ್ಗೆ ಹೋಗೋದನ್ನು ನಿಲ್ಲಿಸಿದ್ದರು. ಇದೀಗ ಮತ್ತೆ ಜಿಮ್ನಲ್ಲಿ ವ್ಯಾಯಾಮ ಶುರು ಮಾಡಿದ್ದಾರೆ. ಕಟ್ಟುಮಸ್ತು ದೇಹ ತೋರಿಸುತ್ತಾ ಫೋಟೋ ಹಂಚಿಕೊಂಡಿದ್ದಾರೆ.
‘ಕೊರೊನಾ ಸೋಂಕಿನಿಂದ ಗುಣಮುಖರಾದ ನಂತರವೂ ತಿಂಗಳುಗಟ್ಟಲೆ ಅದರ ಪ್ರಭಾವ ಇದ್ದೇ ಇರುತ್ತದೆ. ವರ್ಕೌಟ್ ಮಾಡೋದನ್ನ ನಾನು ಬಹಳ ಎಂಜಾಯ್ ಮಾಡ್ತೀನಿ. ಹಾಗಾಗಿ ಮರಳಿ ಜಿಮ್ಗೆ ಬರಬೇಕು ಎಂದು ಪ್ರಯತ್ನಿಸುತ್ತಲೇ ಇದ್ದೆ. ಜಿಮ್ಗೆ ಬಂದು ನನ್ನ ಹಳೇ ದಿನಚರಿಗೆ ಒಗ್ಗಿಕೊಳ್ಳಲು ಖುಷಿ ಎನಿಸುತ್ತಿದೆ. ಅತಿ ಅವಶ್ಯಕತೆ ಇದ್ದಾಗ ನನಗೆ ಬೆಂಬಲ ನೀಡಿದ ವೈದ್ಯರು, ಕುಟುಂಬದವರು, ಸ್ನೇಹಿತರು ಮತ್ತು ಟ್ರೇನರ್ಗಳಿಗೆ ಧನ್ಯವಾದಗಳು’ ಎಂದು ಸುದೀಪ್ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಸುದೀಪ್ ಬಾಡಿ ನೋಡಿದ ಅಭಿಮಾನಿಗಳು ವಾಹ್ ಅಂತ ಉದ್ಘಾರ ತೆಗೆದಿದ್ದಾರೆ.
ಸುದೀಪ್ ಇನ್ ಸ್ಟಾ ಪೋಸ್ಟ್ಗೆ ಮೋಹಕ ತಾರೆ ರಮ್ಯಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಹುರಿಗಟ್ಟಿದ ಸುದೀಪ್ ದೇಹ ಕಂಡು Atta boy ಅಂತ ಕಾಮೆಂಟ್ ಮಾಡಿದ್ದಾರೆ. ಮುಸ್ಸಂಜೆ ಮಾತು, ಜಸ್ಟ್ ಮಾತ್ ಮಾತಲ್ಲಿ, ಕಿಚ್ಚ ಹುಚ್ಚ ಸಿನಿಮಾಗಳಲ್ಲಿ ಸುದೀಪ್, ರಮ್ಯಾ ಒಟ್ಟಿಗೆ ನಟಿಸಿದ್ದರು. ಆದರೆ ಇನ್ಮುಂದೆ ಸಿನಿಮಾಗಳಲ್ಲಿ ನಟಿಸೋದಿಲ್ಲ ಅಂತ ಹೇಳಿ ಅಭಿಮಾನಿಗಳಿಗೆ ರಮ್ಯಾ ನಿರಾಸೆ ಮೂಡಿಸಿದ್ದಾರೆ.