ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ನಟಿಯರು ಬಂದಿದ್ದಾರೆ. ನಂಬರ್ ಒನ್ ಪಟ್ಟಕ್ಕೇರಿದ್ದಾರೆ. ಮದುವೆ ಬಳಿಕ ಕಣ್ಮರೆಯಾಗಿದ್ದಾರೆ. ರಮ್ಯಾ ಕೂಡ ಕನ್ನಡದ ನಂಬರ್ ಒನ್ ನಟಿಯಾಗಿದ್ರು. ತಮಿಳು, ತೆಲುಗು ಸಿನಿಮಾಗಳಲ್ಲೂ ನಟಿಸಿದ್ರು. ಆದ್ರೆ, ರಾಜಕೀಯ ಅಂತ ಬಂದಾಗ ಮೋಹಕತಾರೆ ನಿಜಕ್ಕೂ ಲಕ್ಕಿ ಗರ್ಲ್. ಆದ್ರೀಗ ಎಲ್ಲವನ್ನೂ ಬಿಟ್ಟು ಆಧ್ಯಾತ್ಮದ ಕಡೆ ಒಲವು ತೋರಿದ್ದಾರೆ. ಇವೆಲ್ಲದರ ನಡುವೆ ರಮ್ಯಾ ಮುಂದೆ ಅಭಿಮಾನಿಯೊಬ್ಬ ತನ್ನ ಬಯಕೆಯನ್ನ ಮುಂದಿಟ್ಟಿದ್ದಾನೆ. ‘‘ರಮ್ಯಾ ನೀವು ರಕ್ಷಿತ್ ಶೆಟ್ಟಿಯನ್ನ ಮದುವೆ ಆಗಿ’’ ಅಂತ ಹೇಳಿದ್ದಾನೆ.
ಅಷ್ಟಕ್ಕೂ ರಮ್ಯಾ, ರಕ್ಷಿತ್ ಶೆಟ್ಟಿಯನ್ನೇ ಯಾಕೆ ಮದುವೆ ಆಗ್ಬೇಕು? ಅಭಿಮಾನಿ ದಿಢೀರನೇ ಹೀಗ್ಯಾಕೆ ಅಂದ್ರು? ಈ ಪ್ರಶ್ನೆಯೀಗ ಎಲ್ಲರ ತಲೆಯಲ್ಲೂ ಹುಳ ಬಿಟ್ಟಂತಾಗಿದೆ. ಅದಕ್ಕೆ ಎರಡು ಕಾರಣವಿರಬಹುದು. ಮೊದಲನೆಯದು, ಸಂದರ್ಶನವೊಂದ್ರಲ್ಲಿ ರಕ್ಷಿತ್ ಶೆಟ್ಟಿ ರಮ್ಯಾ ತನ್ನ ಮೊದಲನೇ ಹಾಗೂ ಕೊನೆಯ ಕ್ರಶ್ ಎಂದಿದ್ರು. ಎರಡನೆಯದು, ಅವನೇ ಶ್ರೀಮನ್ನಾರಾಯಣ ಚಿತ್ರದ ಟ್ರೈಲರ್ ನೋಡಿ ರಮ್ಯಾ ಶುಭ ಕೋರಿದ್ದರು. ಈ ಎರಡು ಕಾರಣಕ್ಕೆ ರಕ್ಷಿತ್ ಶೆಟ್ಟಿಯನ್ನ ಮದ್ವೆ ಆಗಿ ಅಂತ ಹೇಳಿರಲು ಸಾಧ್ಯವಿದೆ.
ಸರಿ, ಅಭಿಮಾನಿ ಕೇಳಿದ ಪ್ರಶ್ನೆಗೆ ರಮ್ಯಾ ಹೇಳಿದ್ದೇನು? ಅನ್ನೋದು ಮತ್ತೊಂದು ಪ್ರಶ್ನೆ. ಬಾಣದಂತೆ ಬಂದ ಪ್ರಶ್ನೆಗೆ ರಮ್ಯಾ ಕೂಲ್ ಆಗಿ ನಕ್ಕು, ರಕ್ಷಿತ್ ಶೆಟ್ಟಿಯನ್ನ ಟ್ಯಾಗ್ ಮಾಡಿದ್ದಾರೆ. ಈಗ ರಕ್ಷಿತ್, ಶೆಟ್ಟಿ ಅಭಿಮಾನಿಗೆ ಏನ್ ಉತ್ತರ ಕೊಡ್ತಾರೋ ಅನ್ನೋ ಕುತೂಹಲವಿದೆ.
ರಮ್ಯಾಗೆ ಅದ್ಯಾಕೆ ಈ ಪ್ರಶ್ನೆ ಕೇಳಿ ಅಂದ್ನೋ ಅನ್ನುವಷ್ಟು ಪ್ರಶ್ನೆಗಳು ಕೇವಲ ಮದುವೆ ಬಗ್ಗೆನೇ ಬಂದಿತ್ತು. ಯಾವಾಗ ಮದ್ವೆ ಆಗ್ತೀರಾ, ಯಾರನ್ನಾದ್ರೂ ಡೇಟ್ ಮಾಡ್ತಿದ್ದೀರಾ? ಅನ್ನೋದು ಕಾಮನ್ ಆಗಿತ್ತು. ಆದ್ರೆ, ‘‘ಮದುವೆ.. ಮದುವೆ.. ಮದುವೆ.. ಮಾಡೋದಕ್ಕೆ ಇದೊಂದೇ ಕೆಲಸ ಇರೋದಾ ಹಾಗಾದ್ರೆ? ಮದುವೆ ಬಳಿಕ ಖುಷಿಯಿಂದ ಇರೋದಕ್ಕೆ ಆಗಲ್ಲ ಗೊತ್ತಾ?” ಎಂದು ಹೇಳಿ ವಿವಾಹಕ್ಕೂ ಫುಲ್ಸ್ಟಾಪ್ ಇಟ್ಟಿದ್ದಾರೆ.