ಸ್ಯಾಂಡಲ್ ವುಡ್ ನ ಪದ್ಮಾವತಿ ರಮ್ಯಾ ಚಿತ್ರರಂಗದಿಂದ ದೂರ ಉಳಿದು ಸಾಕಷ್ಟು ಸಮಯವಾಗಿದೆ. ರಾಜಕೀಯಕ್ಕೋಸ್ಕರ ಸಿನಿಮಾ ತ್ಯಜಿಸಿದ್ದ ಈ ತಾರೆ ರಾಜಕಾರಣದಲ್ಲೂ ಅಷ್ಟೊಂದು ಸಕ್ರಿಯವಾಗಿಲ್ಲ. ಕಳೆದ ಲೋಕಸಭಾ ಚುನಾವಣೆಯ ನಂತರ ರಮ್ಯಾ ಹಠಾತ್ತನೆ ಕಣ್ಮರೆಯಾಗಿಬಿಟ್ಟಿದ್ರು. ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಗಳನ್ನೆಲ್ಲಾ ಡಿಲೀಟ್ ಮಾಡಿಬಿಟ್ಟಿದ್ರು. ಆದ್ರೆ ಕೆಲ ತಿಂಗಳ ಮುಂಚೆ ಮತ್ತೆ ಅವರ ಸಾಮಾಜಿಕ ಜಾಲತಾಣಗಳು ಆ್ಯಕ್ಟಿವ್ ಆದವು.
ಮೊದಲಿನಂತೆ ಸೋಶಿಯಲ್ ಮೀಡಿಯಾದಲ್ಲಿ ರಮ್ಯಾ ಆ್ಯಕ್ಟಿವ್ ಆಗಿಲ್ಲ. ಆದ್ರೆ ಆಗಾಗ ಪ್ರಾಣಿಗಳ ವಿಡಿಯೋ ಶೇರ್ ಮಾಡೋದು, ತಾನು ವೆಜಿಟೇರಿಯನ್ ಆಗಿದ್ದರ ಬಗ್ಗೆ ಬರೆಯೋದು, ಸರ್ಕಾರವನ್ನು ಟೀಕಿಸೋದು ಎಲ್ಲಾ ಮಾಡ್ತಿದ್ರು. ಕಂಗನಾ ರಾನೌತ್ ಗೂ ಟಾಂಗ್ ಕೊಟ್ಟಿದ್ರು ರಮ್ಯಾ. 2016 ರಲ್ಲಿ ಕನ್ನಡದ ನಾಗರಹಾವು ಚಿತ್ರದಲ್ಲಿ ನಟಿಸಿದ್ದೇ ಕೊನೆ, ರಮ್ಯಾ ಆನಂತರ ತೆರೆ ಮೇಲೂ ಕಾಣಿಸಿಲ್ಲ.
ಆದ್ರೆ ಈಗ ಧಿಡೀರಂತ ಮತ್ತೆ ತಮ್ಮ ಎಲ್ಲಾ ಸೋಶಿಯಲ್ ಮೀಡಿಯಾ ಅಕೌಂಟ್ ಗೂ ಗುಡ್ ಬೈ ಹೇಳಿದ್ದಾರೆ ರಮ್ಯಾ. ಟ್ವಿಟರ್, ಇನ್ಸ್ಟಾಗ್ರಾಂ ಅಕೌಂಟ್ ಗಳನ್ನು ಧಿಡೀರನೆ ಡಿಲೀಟ್ ಮಾಡಿ ಅಜ್ಞಾತವಾಗ್ಬಿಟ್ಟಿದ್ದಾರೆ ಸ್ಯಾಂಡಲ್ವುಡ್ ಗೌರಮ್ಮ. ಈಗ ಮತ್ತೆ ಹೀಗೆ ರಮ್ಯಾ ಮರೆಯಾಗಿದ್ದೇಕೆ ಅನ್ನೋ ಪ್ರಶ್ನೆಗೆ ಮಾತ್ರ ಉತ್ತರ ಸಿಕ್ಕಿಲ್ಲ.