ಕಳೆದೊಂದು ವಾರದಿಂದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತು ಆ್ಯಂಕರ್ ಅರಿಯಾನಾ ಗ್ಲೋರಿ ಜಿಮ್ ವರ್ಕೌಟ್ ಫೋಟೋಸ್ ಸಿಕ್ಕಾಪಟ್ಟೆ ವೈರಲ್ಲಾಗಿತ್ತು. ಇದೀಗ ಆರ್ ಜಿವಿ ಏಕಾಏಕಿ ವೀಡಿಯೋ ರಿಲೀಸ್ ಮಾಡಿದ್ದಾರೆ. ಯೂಟ್ಯೂಬ್ ಆ್ಯಂಕರ್ ಅರಿಯಾನಾ ಗ್ಲೋರಿ ಯಾರು ಅನ್ನೋದನ್ನ ಹೊಸದಾಗಿ ಬಿಡಿಸಿ ಹೇಳೊದು ಬೇಕಾಗಿಲ್ಲ. ಆದರೆ ಈ ಬಾರಿ ವರ್ಮಾ ಜೊತೆ ಸೇರಿ ಅರಿಯಾನಾ ಜಿಮ್ ನಲ್ಲಿ ಏನ್ ಮಾಡ್ತಿದ್ದಾರೆ ಅನ್ನೋದನ್ನ ಮುಂದೆ ಓದಿ.
ಕೆಲ ತಿಂಗಳ ಹಿಂದೆ ಸಂದರ್ಶನದಲ್ಲಿ ಆ್ಯಂಕರ್ ಅರಿಯಾನಾ ಗ್ಲೋರಿ ಕೇಳಿದ ಪ್ರಶ್ನೆಗೆ ರಾಮ್ ಗೋಪಾಲ್ ವರ್ಮಾ ಕೊಟ್ಟ ಉತ್ತರ ಆಕೆಗೂ ಶಾಕ್ ತಂದಿತ್ತು. ಸಂದರ್ಶನ ಮಾಡ್ತಿದ್ದ ಅರಿಯಾನ ಅವರನ್ನ ನೋಡಿ ನಿಮ್ಮನ್ನ ಬಿಕಿನಿಯಲ್ಲಿ ನೋಡು ಆಸೆ ಅಂದುಬಿಟ್ಟಿದ್ರು. ಇಂತಾದೊಂದು ಉತ್ತರ ನಿರೀಕ್ಷೆ ಮಾಡಿರದ ಆಕೆ ರಿಯಾಕ್ಷನ್ ವಿಭಿನ್ನವಾಗಿತ್ತು. ಈ ವೀಡಿಯೋ ವೈರಲ್ ಆಗಿ ಆಕೆ ಬಿಕಿನಿ ಆ್ಯಂಕರ್, ಆರ್ ಜಿವಿ ಗರ್ಲ್ ಅಂತೆಲ್ಲಾ ಫೇಮಸ್ ಆಗಿಬಿಟ್ಟರು. ಅರಿಯಾನಾ ಇದೇ ಮೈಲೇಜ್ ನಿಂದ ತೆಲುಗು ಬಿಗ್ ಬಾಸ್ ಮನೆ ಪ್ರವೇಶಿಸಿ, 100 ದಿನ ಇದ್ದು ಸದ್ದು ಮಾಡಿದ್ದರು.
ಇದೀಗ ರಾಮ್ ಗೋಪಾಲ್ ವರ್ಮಾ ಮತ್ತು ಆ್ಯಂಕರ್ ಅರಿಯಾನ ಜಿಮ್ ನಲ್ಲಿ ಫುಲ್ ವರ್ಕೌಟ್ ಮಾಡ್ತಿದ್ದಾರೆ. ಇಬ್ಬರು ಸೇರಿ ಸಿನಿಮಾ ಮಾಡ್ತಿದ್ದಾರೆ. ಅದಕ್ಕೆ ವರ್ಕೌಟ್ ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಇದು ಬರೀ ಸಂದರ್ಶನ ಅಷ್ಟೆ. ಸುಮ್ನೆ ಇಬ್ದರೂ ಚೇರ್ ನಲ್ಲಿ ಕೂತು ಮಾತನಾಡಿದ್ರೆ ಏನ್ ಮಜಾ ಇರತ್ತೆ ಅಂತ ಹೇಳಿ ಇಬ್ಬರೂ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಾ ಮಾತನಾಡಿದ್ದಾರೆ. ವರ್ಮಾ ತಮ್ಮದೇ ಸ್ಟೈಲ್ ನಲ್ಲಿ ಯಾವ್ದಾವ್ದೋ ಆ್ಯಂಗಲ್ ನಲ್ಲಿ ಕ್ಯಾಮರಾ ಇಟ್ಟು ಸಂದರ್ಶನ ಶೂಟ್ ಮಾಡಿಸಿದ್ದಾರೆ. ಇದೀಗ ಪ್ರೋಮೋ ಕೂಡ ಬಂದಿದ್ದು, ಶೀಘ್ರದಲ್ಲೇ ಸಂಪೂರ್ಣ ಸಂದರ್ಶನ ಯೂಟ್ಯೂಬ್‌ಗೆ ಅಪ್ ಲೋಡ್ ಆಗಲಿದೆ.
ರಾಮ್ ಗೋಪಾಲ್ ವರ್ಮಾ ಏನ್ ಮಾಡಿದ್ರೂ ಡಿಫ್ರೆಂಟ್ ಆಗಿ ಮಾಡ್ತಾರೆ ಅನ್ನೋದು ಮತ್ತೊಮ್ಮೆ ಪ್ರೂವ್ ಆಗ್ಬಿಟ್ಟಿದೆ. ಅದ್ರಲ್ಲೂ ಫೀಮೇಲ್ ಆ್ಯಂಕರ್ ಸಿಗ್ಬಿಟ್ರಂತೂ ವರ್ಮಾ ಯುವಕನಾಗ್ಬಿಡ್ತಾರೆ ಅನ್ನೋದು ಮತ್ತೊಮ್ಮೆ ಈ ವೀಡಿಯೋ ಸಾಭೀತು ಪಡಿಸಿದೆ.