ಶಿವಾಜಿ ಸುರತ್ಕಲ್ ರಮೇಶ್ ಅರವಿಂದ್ ವೃತ್ತಿ ಬದುಕಿನ ಅತ್ಯದ್ಬುತ ಚಿತ್ರ. ಕಳೆದ ವರ್ಷ ತೆರೆಕಂಡಿದ್ದ ಈ ಸಿನಿಮಾ ಬಿಡುಗಡೆಗೊಂಡಾಗ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತ್ತು. ಗಳಿಕೆಯಲ್ಲೂ ಸಿನಿಮಾ ಗೆದ್ದು ಬೀಗಿತ್ತು. ಬಹಳ ದಿನಗಳ ನಂತ್ರ ಪತ್ತೇದಾರಿ ಸಿನಿಮಾ ನೋಡಿ ಖುಷಿಯಾಗಿದ್ದ ಸಿನಿಮಾ ಪ್ರೇಮಿಗಳು ಎರಡನೇ ಚಾಪ್ಟರ್ ನೋಡೋಕೆ ಕಾತುರರಾಗಿದ್ರು. ಅದಕ್ಕೀಗ ಸಿಹಿ ಸುದ್ದಿ ಸಿಕ್ಕಿದೆ. ರಮೇಶ್ ಅರವಿಂದ್ ಹುಟ್ಟುಹಬ್ಬದಂತೆ ಶಿವಾಜಿ ಸುರತ್ಕಲ್ 2 ಸಿನಿಮಾ ಆರಂಭ ಆಗಿದೆ.
ಶಿವಾಜಿ ಸುರತ್ಕಲ್ ಸಿನಿಮಾವನ್ನು ಆಕಾಶ್ ಶ್ರೀವತ್ಸ ಅವರೇ ನಿರ್ದೇಶನ ಮಾಡ್ತಿದ್ದಾರೆ. ರೇಖಾ ಕೆ. ಎನ್ ಹಾಗೂ ಅನುಪ್ ಭಾಗ-2 ನಿರ್ಮಾಣ ಮಾಡ್ತಿದ್ದಾರೆ. ಈಗಾಗಲೇ ಸಿನಿಮಾದ ಕಥೆ ಹಾಗೂ ಚಿತ್ರಕಥೆ ಸಂಪೂರ್ಣ ಮುಗಿದಿದೆ. ಅಕ್ಟೋಬರ್ನಲ್ಲಿ ಈ ಚಿತ್ರದ ಶೂಟಿಂಗ್ ಆರಂಭ ಆಗಲಿದೆ.
ರಮೇಶ್ ಅರವಿಂದ್ ಶಿವಾಜಿಯಾಗಿ ಕಾಣಿಸಿಕೊಂಡ್ರೆ, ರಾಧಿಕಾ ನಾರಾಯಣ್, ರಘು ರಾಮನಕೊಪ್ಪ ಹಾಗೂ ವಿದ್ಯಾಮೂರ್ತಿ ಶಿವಾಜಿ ಸುರತ್ಕಲ್ 2 ನಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಹೊಸಬರನ್ನು ಆಯ್ಕೆ ಮಾಡಲು ಚಿತ್ರತಂಡ ಮುಂದಾಗಿದೆ.
ಶಿವಾಜಿ ಸುರತ್ಕಲ್ ಕೊಲೆಗಾರನ ಹುಡುಕಾಟದಲ್ಲಿ ಸಾಗುವ ಕಥೆಯಾಗಿದ್ದು, ನಾನಾ ಆಯಾಮಗಳನ್ನು ಹೊತ್ತು ಸಿನಿಮಾ ಸಾಗಲಿದೆ. ಈ ಸಿನಿಮಾದ ಮೊದಲ ಭಾಗ ಎರಡು ಕಾಲಘಟ್ಟದಲ್ಲಿ ಸಾಗುವ ಕಥೆಯಾಗಿತ್ತು. ಹೀಗಾಗಿ ಪತ್ತೇದಾರಿ ಶಿವಾಜಿಯ ಎರಡನೇ ಭಾಗ ಕೂಡ ಇಂಟ್ರೆಸ್ಟಿಂಗ್ ಆಗಿರುತ್ತೆ.