ರಾಜಮೌಳಿ ಕಲ್ಪನಾ ಲೋಕವೇ ಬೇರೆ. ಈ ನಿರ್ದೇಶಕ ಯೋಚನೆ ಮಾಡೋ ರೀತಿ ಬೇರೆಯಾರೂ ಮಾಡೋಕೆ ಸಾಧ್ಯವೇ ಇಲ್ಲ. ಇಲ್ಲಿ ಹೀರೋ ವಿಲನ್ ಆಗ್ತಾನೆ.. ವಿಲನ್ ಹೀರೋ ಆಗ್ತಾನೆ. ಅದೇ ಕೆಲವೊಮ್ಮೆ ಹೀರೋಗಿಂತ ವಿಲನ್ ಜೋರು ಅನಿಸುತ್ತೆ. ಕೆಲವೊಮ್ಮೆ ವಿಲನ್ ಮಟ್ಟ ಹಾಕೋಕೆ ಇದೇ ಹೀರೋ ಬೇಕು ಅಂತ ಅನಿಸುತ್ತೆ. ರಾಜಮೌಳಿ ಸಿನಿಮಾ ಅಂದ್ರೆ ಹಾಗಿರುತ್ತೆ. ಅದಕ್ಕೆ RRR ಇಂಟ್ರುಡಕ್ಷನ್ ಸೀನ್ ಹೇಗಿರುತ್ತೋ? ಅದನ್ಯಾವಾಗ ನೋಡ್ತಿವೋ ಅಂತ ಕಾದು ಕೂತಿದ್ದಾರೆ. ಅದಕ್ಕೆ ಸರಿಯಾಗಿ ರಾಮ್ ಚರಣ್ ಹಾಗೂ ಜೂ.ಎನ್ಟಿಆರ್ ಎಂಟ್ರಿ ಹೇಗಿರುತ್ತೆ ಅನ್ನೋ ಸಂಗತಿ ಹೊರಬಿದ್ದಿದೆ.
ತೆಲುಗಿನ ಟಾಲಿವುಡ್.ನೆಟ್ ಪ್ರಕಾರ, ರಾಜಮೌಳಿಯ RRRನಲ್ಲಿ ಇಂಟ್ರುಡಕ್ಷನ್ ಸೀನ್ ಯಾರೂ ಊಹಿಸದಷ್ಟು ದೃಶ್ಯ ವೈಭವವಿರುತ್ತೆ. ಅಲ್ಲೂರಿ ಸೀತಾರಾಮ ರಾಜು ಅವತಾರದಲ್ಲಿ ರಾಮ್ ಚರಣ್.. ಕೋಮರಂ ಭೀಮ್ ಗೆಟಪ್ನಲ್ಲಿ ಜೂ.ಎನ್ಟಿಆರ್. ಇಬ್ಬರೂ ಮೊದಲೇ ಮುಖಾಮುಖಿಯಾಗೋ ದೃಶ್ಯವೇ ಅದ್ಭುತ ಎಂದಿದೆ.
ಅಷ್ಟಕ್ಕೂ ರಾಮ್ ಚರಣ್ ಹಾಗೂ ಜೂ.ಎನ್ಟಿಆರ್ ಇಬ್ಬರ ಮುಖಾಮುಖಿ ಹೇಗಾಗುತ್ತೆ ಅನ್ನೋದನ್ನ ಕೇಳೋಕೆ ಥ್ರಿಲ್ಲಿಂಗ್ ಆಗಿರುತ್ತೆ. ಪೊಲೀಸರ್ ಅಧಿಕಾರಿಯಾಗಿರೋ ರಾಮ್ಚರಣ್, ಕೋಮರಂ ಭೀಮ್ರನ್ನ ಬಂಧಿಸಲು ತನ್ನ ಅತೀ ದೊಡ್ಡ ತುಕಡಿಯೊಂದಿಗೆ ಆಗಮಿಸುತ್ತಾರೆ. ಆಗ ಕೋಮರಂ ಭೀಮ್ ಬೆಂಬಲಕ್ಕೆ ಅಷ್ಟೇ ದೊಡ್ಡ ಮಟ್ಟದಲ್ಲಿ ಗ್ರಾಮದ ಜನತೆ ನಿಲ್ಲುತ್ತಾರೆ. ಮುಂದೇನಾಗುತ್ತೆ ಅನ್ನೋದು ರೋಚಕವೆಂದು ಟಾಲಿವುಡ್.ನೆಟ್ ನಲ್ಲಿ ಹೇಳಲಾಗಿದೆ.
ಈ ಇಂಟ್ರುಡಕ್ಷನ್ ಸೀನ್ಗಾಗೇ ಸಾಹಸ ನಿರ್ದೇಶಕರು ಹಾಲಿವುಡ್ನಿಂದ ಬಂದಿದ್ದಾರೆ. ಅಲ್ಲದೇ ಅತೀ ಹೆಚ್ಚು ಗ್ರಾಫಿಕ್ಸ್, ಸ್ಪೆಷಲ್ ಎಫೆಕ್ಟ್ಗಳು ಇರೋದ್ರಿಂದ ಪ್ರೇಕ್ಷಕರಿಗೆ ಮಜಾ ಕೊಡುತ್ತೆ ಎನ್ನಲಾಗಿದೆ. RRR ಐದು ಭಾಷೆಗಳೊಂದಿಗೆ ವಿದೇಶಿ ಭಾಷೆಯಲ್ಲೂ ಬಿಡುಗಡೆಯಾಗಲಿದೆ. ಆಲಿಯಾ ಭಟ್, ಅಜಯ್ ದೇವಗನ್, ರೇ ಸ್ಟೀವನ್ಸನ್, ಒಲಿವಿಯಾ ಮೊರೀಸ್ ಈ ಸಿನಿಮಾದಲ್ಲಿ ನಟಿಸಿದ್ದಾರೆ.