ಯೂಟ್ಯೂಬ್ ಸಂದರ್ಶನವೊಂದರಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾಡಿದ ಬಿಕಿನಿ ಕಾಮೆಂಟ್ ನಿಂದ ಫೇಮಸ್ ಆದ ಆ್ಯಂಕರ್ ಅರಿಯಾನಾ ಗ್ಲೋರಿ. ಆ ಸಂದರ್ಶನದ ನಂತರ RGV ಗರ್ಲ್, ಬಿಕಿನಿ ಆ್ಯಂಕರ್ ಅಂತ್ಲೇ ಆಕೆ ಜನಪ್ರಿಯತೆ ಗಳಿಸಿದ್ಲು. ಅದೇ ಕಾರಣಕ್ಕೆ ತೆಲುಗು ಬಿಗ್ ಬಾಸ್ ಗೆ ಹೋಗುವ ಅವಕಾಶ ಕೂಡ ಸಿಕ್ಕಿತ್ತು. ಇದೀಗ ವರ್ಮಾ ಮತ್ತು ಬೋಲ್ಡ್ ಆ್ಯಂಕರ್ ಅರಿಯಾನ ಮತ್ತೊಂದು ಸಂದರ್ಶನ ಮಾಡಿದ್ದಾರೆ. ಜಿಮ್ ನಲ್ಲಿ ವರ್ಕ್ ಔಟ್ ಮಾಡುತ್ತಾ ಒಬ್ಬರನ್ನೊಬ್ಬರು ಮಾತನಾಡಿಸಿದ್ದಾರೆ. ಸ್ವತಃ ವರ್ಮಾ ಇದು ಹಾಟ್ ಇಂಟರ್ ವ್ಯೂ ಅಂತ ಬರೆದುಕೊಂಡಿದ್ದಾರೆ. ಬರೀ ಹಸಿ ಬಿಸಿ ಪ್ರಶ್ನೆಗಳು. ಅದಕ್ಕೆ RGV ಹಸಿ ಹಸಿ ಉತ್ತರ. ಅದು ಯಾವ ಮಟ್ಟಿಗೆ ಅಂದ್ರೆ ಆ್ಯಂಕರ್ ಅರಿಯಾನಾಳನ್ನ ನೋಡಿ ವರ್ಮಾ ನಿನ್ನ ಪುಷ್ಠ ಅಂದರೆ ನನಗೆ ತುಂಬಾ ಇಷ್ಟ ಅನ್ನುವ ಮಟ್ಟಿಗೆ.
ಕಳೆದೊಂದು ವಾರದಿಂದ ಇಂಥಾದೊಂದು ಹಾಟ್ ಇಂಟರ್ ವ್ಯೂ ಬಗ್ಗೆ ವರ್ಮಾ ಸುಳಿವು ಕೊಡ್ತಾ ಬಂದಿದ್ದರು. ಜಿಮ್ ನಲ್ಲಿ ಅರಿಯಾನ ಜೊತೆಗೆ ವರ್ಕೌಟ್ ಮಾಡ್ತಿರೋ ಫೋಟೋಗಳನ್ನ ಹಾಕಿ ಕುತೂಹಲ ಹುಟ್ಟಿಸಿದ್ದರು. ಇದೀಗ ಕೊನೆಗೂ ಕಂಪ್ಲೀಟ್ ಇಂಟರ್ ವ್ಯೂ ವೀಡಿಯೋ ರಿಲೀಸ್ ಮಾಡಿದ್ದಾರೆ. ಒಬ್ಬರು ಬೋಲ್ಡ್ ಆ್ಯಂಕರ್, ಇನ್ನೊಬ್ಬರು ಬೋಲ್ಡ್ ಫಿಲ್ಮ್ ಮೇಕರ್ ಇಬ್ಬರು ಸೇರಿ ಮಾಡಿದ ಇಂಟರ್ ವ್ಯೂ ಈ ತರ ಇದೆ ನೋಡಿ. ಸ್ವತಃ ರಾಮ್ ಗೋಪಾಲ್ ವರ್ಮಾ ಇದನ್ನ ಡಿಸೈನ್ ಮಾಡಿದ್ದಾರೆ. ಯಾವ್ಯಾವುದೋ ಆ್ಯಂಗಲ್‌ನಲ್ಲಿ ಕ್ಯಾಮರಾ ಇಟ್ಟು ಇಂಟರ್ ವ್ಯೂ ಶೂಟ್ ಮಾಡಿಸಿದ್ದಾರೆ. ಅರಿಯಾನಾ ಕೂಡ ಹೊಕ್ಕಳು ಕಾಣಿಸುವಂತೆ ಟೈಟ್ ಜಿಮ್ ಕಾಸ್ಟ್ಯೂಮ್ಸ್ ನಲ್ಲಿ ಮಾತಿನ ಜೊತೆಗೆ ಗ್ಲಾಮರ್ ಬೆರೆಸಿದ್ದಾರೆ. ಅವರಿಬ್ಬರ ಮಾತುಕತೆಯ ಸಣ್ಣ ಝಲಕ್ ಹಿಂಗಿದೆ.
ಅರಿಯಾನಾ: ಸರ್ ನೀವು ಕೊನೆಯದಾಗಿ ಯಾವಾಗ ಸೆಕ್ಸ್ ಮಾಡಿದ್ದು ?
ವರ್ಮಾ: ನೀನು ಬರೋಕೆ ಒಂದು ಗಂಟೆ ಮುಂಚೆ. ನಿಜ ಹೇಳಬೇಕು ಅಂದರೆ ಈಗಲೂ ನಿನ್ನ ಜೊತೆ ಸೆಕ್ಸ್ ಮಾಡುತ್ತಿದ್ದೇನೆ, ಅಂದರೆ ಸೆಕ್ಸ್ ಅನ್ನೋದು ನಮ್ಮ ಮನಸ್ಸಿನಲ್ಲಿ ಇರೋದು. ನಿನ್ನ ಈಗ ನೋಡುತ್ತಿದ್ದರೆ ಮನಸ್ಸಿನಲ್ಲಿ ಏನೇನೋ ಆಲೋಚನೆ ಬರ್ತಿದೆ ಅದು ಸೆಕ್ಸ್ ಅಲ್ವಾ.?
ವರ್ಮಾ: ನಿನ್ನ ದೇಹದಲ್ಲಿ ನಿನ್ನ ಬಾಯ್ ಫ್ರೆಂಡ್ ಗೆ ಇಷ್ಟವಾದ ಅಂಗ ಯಾವುದು ?
ಅರಿಯಾನಾ : ನನಗೆ ಬಾಯ್ ಫ್ರೆಂಡ್ ಇಲ್ಲ.
ವರ್ಮಾ: ನನಗೆ ನಿನ್ನ ದೇಹದಲ್ಲಿ ಇಷ್ಟವಾದ ಅಂಗ ಯಾವುದು ಗೊತ್ತಾ ? ನಿನ್ನ ಪುಷ್ಠ.
ಹೀಗೆ ಬೋಲ್ಡ್ ಆ್ಯಂಕರ್ ಮತ್ತು ಬೋಲ್ಡ್ ಫಿಲ್ಮ್ ಮೇಕರ್ ನಡುವಿನ ಸಂದರ್ಶನ ನಡೆದಿದೆ. ಕೆಲವರು ವರ್ಮಾ ಸತ್ಯ ಹೇಳಿದ್ದಾರೆ ಅಂತ ಕಾಮೆಂಟ್ ಮಾಡಿದ್ರೆ, ಮತ್ತೆ ಕೆಲವರು ಸುಮ್ಮನೆ ಗಮನ ಸೆಳೆಯೋಕೆ ಇಂಥಾದೊಂದು ಹಸಿಬಿಸಿ ಸಂದರ್ಶನದ ನಾಟಕ ಮಾಡಿದ್ದಾರೆ ಅಂತ ವ್ಯಂಗ್ಯವಾಡಿದ್ದಾರೆ. ಆದ್ರೂ ಇಂತಹದ್ದೊಂದು ಸಂದರ್ಶನ ಬೇಕಿತ್ತಾ? ವಯಸ್ಸಿಗೆ ತಕ್ಕಂತ ಸಂದರ್ಶನ ಮಾಡಬಾರದಾ ಅಂತ ಪ್ರಶ್ನೆ ಮಾಡುತ್ತಿದ್ದಾರೆ.