ಸೂಪರ್ಸ್ಟಾರ್ ರಜನಿಕಾಂತ್ಗೆ ಕೇಂದ್ರ ಸರ್ಕಾರ ಭಾರತೀಯ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯನ್ನ ಘೋಷಿಸಿದೆ. ಇನ್ನುಂದೆ ತಲೈವಾನನ್ನ ದಾದಾ ಸಾಹೇಬ್ ರಜನಿ ಅಂತ್ಲೇ ಕರೀಬೇಕು. ಅಷ್ಟಕ್ಕೂ ರಜನಿಕಾಂತ್ ದಾದಾ ಸಾಹೇಬ್ ಪ್ರಶಸ್ತಿಗೆ ಭಾಜನರಾಗಿದ್ದು ಯಾಕೆ? ಕೇವಲ ನಾಲ್ಕೂವರೆ ದಶಕ ಸಿನಿಮಾದಲ್ಲಿ ನಟಿಸಿದ್ದಕ್ಕೆ ಈ ಪ್ರಶಸ್ತಿ ಒಲಿದು ಬಂತಾ? ಈ ಪ್ರತಿಷ್ಟಿತ ಪ್ರಶಸ್ತಿಗೆ ನಿಜಕ್ಕೂ ರಜನಿ ಯೋಗ್ಯರೇ.. ಇಂತಹದ್ದೊಂದು ಪ್ರಶ್ನೆಯೀಗ ಎದ್ದಿದೆ.
ರಜನಿಕಾಂತ್ ಮೊದ್ಲು ಕೂಲಿ.. ನಂತ್ರ ಕಾರ್ಪೆಂಟರ್.. ಬಳಿಕ ಬಸ್ ಕಂಡಕ್ಟರ್.. ಈಗ ಸೂಪರ್ಸ್ಟಾರ್.. ಇಷ್ಟುದ್ದದ ರಜನಿ ನಡೆದ ಈ ಹಾದಿಯ ಒಂದೊಂದು ಘಳಿಗೆಯನ್ನೂ ಈ ಮೆಲುಕು ಹಾಕುತ್ತಿರಬಹುದೇನೋ.. ಆದ್ರೆ, ಕೆಲವರು ಮಾತ್ರ ಇದೆಲ್ಲಾ ಚುನಾವಣೆ ಗಿಮಿಕ್ಕು.. ತಮಿಳುನಾಡಿನ ಓಟಿನ ಮೇಲೆ ಕಣ್ಣಿಟ್ಟಿರೋ ಬಿಜೆಪಿ ದಾದಾ ಸಾಹೇಬ್ ಪ್ರಶಸ್ತಿಯನ್ನ ಘೋಷಿಸಿದೆ ಅಂತ ವಾದಾ ಮಾಡುತ್ತಿದ್ದಾರೆ. ಹಾಗಿದ್ರೆ, ಈ ಪ್ರಶಸ್ತಿ ಪಡೆಯಲು ರಜನಿಗೆ ಯೋಗ್ಯತೆನೇ ಇಲ್ಲವೇ..
ರಜನಿಕಾಂತ್ ಸಿನಿಮಾದಲ್ಲಿ ಹೀರೋ ಆಗಿ ಈ ಮಟ್ಟಕ್ಕೆ ಬೆಳೆದಿರೋದೇ ಒಂದು ಸಾಧನೆ. ಒಬ್ಬ ನಾಯಕ ಅಂದ್ರೆ, ಹೈಟ್ ಇರಬೇಕು. ಬೆಳ್ಳಗಿರಬೇಕು.. ತೆಳ್ಳಗಿರಬೇಕು.. ಎಲ್ಲಕ್ಕಿಂತ ಹೆಚ್ಚಾಗಿ ಗಾಢ್ ಫಾದರ್ ಇರ್ಬೇಕು. ಆದ್ರೆ, ಈ ಎಲ್ಲಾ ಫಾರ್ಮೂಲಗಳ ಒದ್ದು ಆಚೆ ಹಾಕಿ ಹೀರೋ ಆಗಿದ್ದು ರಜನಿಕಾಂತ್. ಚಿಕ್ಕಪುಟ್ಟ ಪಾತ್ರಗಳನ್ನ ಮಾಡುತ್ತಾ ಖಳನಾಯಕನಾಗಿ, ಬಳಿಕ ಹೀರೋ ಪಟ್ಟಕ್ಕೆ ಏರಿದ ರಜನಿ ಸಾಧನೆಯೇನು ಕಮ್ಮಿಯಲ್ಲ. ಅದ್ರಲ್ಲೂ ಹೀರೋ ಸೂಪರ್ಸ್ಟಾರ್ ಪಟ್ಟ ಅಲಂಕರಿಸಿದ್ದಂತೂ ಸುಲಭದ ಮಾತಲ್ಲ.
ರಜನಿ ಅದೆಷ್ಟು ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟಿಲ್ಲ ಹೇಳಿ. ಮೂಂಡ್ರು ಮೊಗಮ್ ರಜನಿ ತ್ರಿಪಾತ್ರದಲ್ಲಿ ನಟಿಸಿದ ಸಿನಿಮಾ. ಈ ಚಿತ್ರದ ಅಭಿನಯಕ್ಕೆ ತಮಿಳುನಾಡು ಸರ್ಕಾರದಿಂದ ಸ್ಟೇಟ್ ಅವಾರ್ಡ್ ಸಿಕ್ಕಿತ್ತು. ಇನ್ನು ಇಂದಿನ ಹಾಗೂ ಹಿಂದಿನ ತಲೆಮಾರಿನ ಮೆಚ್ಚಿನ ಸಿನಿಮಾ ಶಿವಾಜಿ, ಚಂದ್ರಮುಖಿ, ಎಂದಿರನ್ ಬಾಕ್ಸಾಫೀಸ್ ಅನ್ನ ಚಿಂದಿ ಮಾಡಿದ್ದು ಗೊತ್ತೇ ಇದೆ. ಹಾಗಂತ ಕೆಲ ಸಿನಿಮಾಗಳು ಮಕಾಡೆನೂ ಮಲಗಿವೆ. ಆದ್ರೆ, ರಜನಿ ಸಿನಿಮಾಗಳು ಸದ್ದು ಮಾಡಿದಷ್ಟು ಮತ್ಯಾರದ್ದೇ ಸಿನಿಮಾ ಮಾಡಿಲ್ಲ ಅಂತ ನಿಸ್ಸಂದೇಹವಾಗಿ ಹೇಳ್ಬಹುದು.
ರಜನಿಕಾಂತ್ ಸಿನಿಮಾ ಕೇವಲ ಭಾರತೀಯರಿಗಷ್ಟೇ ಅಲ್ಲ. ಜಪಾನ್, ಮಲೇಷಿಯಾದ ಜನರಿಗೂ ಇಷ್ಟ. ಚಂದ್ರಮುಖಿ ಸಿನಿಮಾ ತುರ್ಕಿ ಹಾಗೂ ಜರ್ಮನಿ ಭಾಷೆಗಳಿಗೂ ಡಬ್ ಆಗಿದೆ. ಅಂದ್ಮೇಲೆ ರಜನಿ ಸಾಧನೆ ಕಮ್ಮಿ ಎನ್ನಲು ಹೇಗೆ ಸಾಧ್ಯವೇ.. ಅಮಿತಾಬ್, ಶಾರೂಖ್, ಆಮೀರ್, ಸಲ್ಮಾನ್, ಹೃತಿಕ್ ಅಂತ ಸೂಪರ್ಸ್ಟಾರ್ಗಳಿ ಪೈಪೋಟಿ ಕೊಡ್ತಿರ್ಬೇಕಾದ್ರೆ, ರಜನಿ ತಾಕತ್ತು ಎಷ್ಟಿರ್ಬೇಡಾ.? ಕೇಂದ್ರ ಸರ್ಕಾರ ಈ ಅವಾರ್ಡ್ ಅನ್ನ ಯಾವ ಉದ್ದೇಶ ಇಟ್ಕೊಂಡು ಕೊಡುತ್ತಿದೆಯೋ ಬೇರೆ ಮಾತು. ಆದ್ರೆ, ರಜನಿ ದಾದಾ ಸಾಹೇಬ್ ಪ್ರಶಸ್ತಿ ಪಡೆಯಲು ಯೋಗ್ಯರು ಅನ್ನೋದಂತೂ ಸತ್ಯದ ಮಾತು.