ಕೊರೊನಾ ಕಷ್ಟ ಕಾಲದಲ್ಲೂ ಒಂದಿಷ್ಟು ಮನರಂಜನೆ ನೀಡುತ್ತಿದ್ದ ರಿಯಾಲಿಟಿ ಶೋ ಬಿಗ್ ಬಾಸ್ ಅರ್ಧಕ್ಕೆ ಮೊಟುಕುಗೊಳಿಸಬೇಕಾಗಿತ್ತು. ಸ್ಪರ್ಧಿಗಳು ಮನೆಯಿಂದ ಹೊರಬಂದ್ಮೇಲೆ ಇನ್ನು ಈ ಶೋ ನಡೆಯೋದೇ ಅನುಮಾನ ಎಂದು ಭಾವಿಸಲಾಗಿತ್ತು. ಆದ್ರೀಗ ಮತ್ತೆ ಬಿಗ್ ಬಾಸ್ ರಿಯಾಲಿಟಿ ಶೋ ಆರಂಭ ಆಗಲಿದೆ. ಈಗಾಗ್ಲೇ ಸ್ಪರ್ಧಿಗಳು ಕ್ವಾರಂಟೈನ್ನಲ್ಲಿದ್ದು, ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಲು ಕಾತುರರಾಗಿದ್ದಾರೆ. ಈ ಮಧ್ಯೆ ಎಲಿಮಿನೇಟ್ ಆಗಿದ್ದ ನಟ ಮತ್ತೆ ಬಿಗ್ಬಾಸ್ ಮನೆಯೊಳಗೆ ಎಂಟ್ರಿ ಕೊಡಲಿದ್ದಾನೆ ಅನ್ನೋ ಮಾತು ಕೇಳಿಬರುತ್ತಿದೆ.
ಬಿಗ್ ಬಾಸ್ ಸೀಸನ್ 8 ಜೂನ್ 21ರಿಂದ ಆರಂಭ ಆಗಲಿದೆ. ಕಿಚ್ಚ ಸುದೀಪ್ ವೇದಿಕೆ ಮೇಲೆ ಮತ್ತೆ ನಿರೂಪಣೆ ಮಾಡಲಿದ್ದು, ಉಳಿದುಕೊಂಡು 12 ಸ್ಪರ್ಧಿಗಳು ಮನೆಯೊಳಗೆ ಮತ್ತೆ ಹೊಸದಾಗಿ ಎಂಟ್ರಿ ಕೊಡಲಿದ್ದಾರೆ. ಈ ಎಂಟ್ರಿ ಹೇಗಿರುತ್ತೆ ಅನ್ನೋ ಕುತೂಹಲ ಕಿರುತೆರೆ ವೀಕ್ಷಕರಲ್ಲಿ ಮನೆ ಮಾಡಿದೆ. ಈ ನಡುವೆ ಎಲಿಮಿನೇಟ್ ಆದ ಸ್ಪರ್ಧಿ ಮತ್ತೆ ಬಿಗ್ ಬಾಸ್ ಮನೆಯೊಳಗೆ ಹೋಗ್ತಾರೆ ಅನ್ನೋ ಮಾತು ಕೇಳಿಬರ್ತಿದೆ.
ಬಿಗ್ಬಾಸ್ ಮನೆಯಿಂದ ಹೊರಬಂದಿದ್ದ ರಾಜೀವ್ ಈಗ ಮತ್ತೆ ಗ್ರ್ಯಾಂಡ್ ಎಂಟ್ರಿಕೊಡಲಿದ್ದಾರಂತೆ. ಗ್ರೀನ್ ಕಾರ್ಟ್ ಎಂಟ್ರಿ ಕೊಟ್ಟು 12 ಮಂದಿ ಸ್ಪರ್ಧಿಗಳ ಜೊತೆ ಸೇರಿಕೊಳ್ಳಲಿದ್ದಾರಂತೆ. ಇಂತಹದ್ದೊಂದು ಸುದ್ದಿ ಓಡಾಡುತ್ತಿದೆ. ಆದ್ರೆ, ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಮುಖ್ಯಸ್ಥ ಹಾಗೂ ರಾಜೀವ ಇಬ್ಬರೂ ಪ್ರತಿಕ್ರಿಯೆ ನೀಡಲ್ಲ.