ಈದ್ ಹಬ್ಬಕ್ಕೂ ಸಲ್ಮಾನ್ ಖಾನ್ ಸಿನಿಮಾಗಳಿಗೂ ಅವಿನಾಭಾವ ಸಂಬಂಧ. ಈದ್ ಸಂದರ್ಭದಲ್ಲಿ ಬಿಡುಗಡೆಯಾದ ಸಲ್ಮಾನ್ ಅಭಿನಯದ ಬಹುತೇಕ ಎಲ್ಲಾ ಚಿತ್ರಗಳೂ ಬ್ಲಾಕ್ ಬಸ್ಟರ್ ಗಳಾಗಿವೆ. ಹಾಗಾಗಿ ಈ ವರ್ಷದ ಈದ್ ಮೇಲೂ ಸಲ್ಲೂ ಭಾಯ್ ತಮ್ಮ ಅಧಿಕಾರ ಸ್ಥಾಪಿಸ್ತಿದ್ದಾರೆ. ಮೇ 13ರಂದು ಈ ಬಾರಿ ಈದ್ ಮಿಲಾದ್ ಹಬ್ಬವಿದೆ. ಅಂದೇ ಬಹುನಿರೀಕ್ಷಿತ ರಾಧೆ ಚಿತ್ರ ಬಿಡುಗಡೆಯಾಗಲಿದೆ. ಈ ವಿಚಾರವನ್ನು ಖುದ್ದು ಸಲ್ಮಾನ್ ಖಾನ್ ಹಂಚಿಕೊಂಡಿದ್ದಾರೆ.


ವಾಂಟೆಡ್, ದಬಂಗ್, ಬಾಡಿಗಾರ್ಡ್, ಏಕ್ ಥಾ ಟೈಗರ್, ಕಿಕ್, ಭಜರಂಗಿ ಭಾಯಿಜಾನ್, ಸುಲ್ತಾನ್, ಟ್ಯೂಬ್ ಲೈಟ್, ರೇಸ್ 3 ಮತ್ತು ಭಾರತ್…ಈ ಎಲ್ಲಾ ಚಿತ್ರಗಳೂ ಈದ್ ದಿನವೇ ಬಿಡುಗಡೆಯಾದಂಥವು. ಇದರಲ್ಲಿ ಟ್ಯೂಬ್ ಲೈಟ್ ಒಂದನ್ನು ಹೊರತುಪಡಿಸಿದ್ರೆ ಉಳಿದೆಲ್ಲವೂ ಬಾಕ್ಸಾಫೀಸ್ ನ್ನು ಪೀಸ್ ಪೀಸ್ ಮಾಡಿದ ಚಿತ್ರಗಳು. ರಾಧೆ ಕೂಡಾ ಇದೇ ಸಾಲಿಗೆ ಸೇರಲಿ ಎಂದು ಈದ್ ರಿಲೀಸ್ ಮಾಡಲು ನಿರ್ಧರಿಸಿದ್ದಾರಂತೆ ಸಲ್ಲೂ ಮಿಯಾ.
ಪ್ರಭುದೇವ ರಾಧೆಯ ನಿರ್ದೇಶನ ಮಾಡಿದ್ದಾರೆ. ಕೊಟ್ಟ ಮಾತು ತಪ್ಪೋದಿಲ್ಲ ಎನ್ನುತ್ತಲೇ ರಾಧೆಯ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ ಸಲ್ಮಾನ್ ಖಾನ್. ದಿಶಾ ಪಾಟ್ನಿ ಈ ಚಿತ್ರದ ನಾಯಕಿ. ಜಾಕಿ ಶ್ರಾಫ್, ರಣದೀಪ್ ಹೂಡಾ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಾಧೆ ಒಟಿಟಿಯಲ್ಲಿ ಬಿಡುಗಡೆಯಾಗೋದು ಅಂತ ಮೊದಲು ನಿರ್ಧರಿಸಲಾಗಿತ್ತು. ಆದ್ರೆ ಥಿಯೇಟರ್ ಮಾಲೀಕರು ಗಲಾಟೆ ಮಾಡಿದ್ರಿಂದ ಚಿತ್ರಮಂದಿರಗಳಲ್ಲೇ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಆದ್ರೆ ಟಿಕೆಟ್ ಗಳ ದರ ಕಡಿಮೆ ಮಾಡಿ ಎಂದು ಸಲ್ಮಾನ್ ಥಿಯೇಟರ್ ಮಾಲೀಕರಲ್ಲಿ ಮನವಿ ಮಾಡಿಕೊಂಡಿದ್ದಾರಂತೆ. ಒಟ್ನಲ್ಲಿ ಈದ್ ನ ಲಾಂಗ್ ವೀಕೆಂಡ್ ರಾಧೆಯ ಅದೃಷ್ಟ ನಿರ್ಧರಸಿಓಕೆ ಸಜ್ಜಾಗ್ತಿದೆ.