ಸ್ಯಾಂಡಲ್ವುಡ್ನ ಡಿಂಪಲ್ ಕ್ವೀನ್ ರಚಿತಾ ರಾಮ್, ಡಾರ್ಲಿಂಗ್ ಕೃಷ್ಣ ಇವ್ರಿಬ್ಬರ ಕಾಂಬಿನೇಷನ್ ಹೇಗಿರ್ಬಹುದು ಅನ್ನೋ ಕುತೂಹಲವಂತೂ ಇದ್ದೇ ಇದೆ. ಇಬ್ಬರು ಜೊತೆಯಾಗಿ ನಟಿಸ್ತಿರೋ ಮೊದಲ ಸಿನಿಮಾ. ಹೀಗಾಗಿ ಪ್ರೇಕ್ಷಕರ ಕುತೂಹಲವಂತೂ ಗಗನಕ್ಕೇರಿದೆ ಅಂತ್ಲೇ ಹೇಳ್ಬಹುದು. ಈಗಾಗ್ಲೇ ಇಬ್ಬರ ಸಿನಿಮಾ ಟೈಟಲ್ ಹೊರಬಿದ್ದಿದ್ದು, ಅಣ್ಣಾವ್ರು ನಟಿಸಿದ ಶಂಕರ್ ಗುರು ಚಿತ್ರದ ಲವ್ ಮಿ ಔರ್ ಹೇಟ್ ಮಿ ಹಾಡಿನ ಸಾಲನ್ನೇ ಇಟ್ಟಿದ್ದಾರೆ, ಇದ್ಯಾಕ್ಕೆ ಅನ್ನೋದನ್ನು ನಿಮ್ಮ ಮುಂದೆ ಇಡ್ತೀವಿ.
ರಚಿತಾ ಹಾಗೂ ಡಾರ್ಲಿಂಗ್ ಕೃಷ್ಣ ಸಿನಿಮಾದ ಕಥೆ ತೆರೆದುಕೊಳ್ಳೋದು 1995ರಲ್ಲಿ.. ಪ್ರಸ್ತುತ ಹಾಗೂ ಫ್ಲ್ಯಾಶ್ ಬ್ಯಾಕ್ ಎರಡನ್ನೂ ಒಂದೇ ಸಿನಿಮಾದಲ್ಲಿ ಹೇಳುವ ಕಥೆ ಇದಾಗಿರೋದ್ರಿಂದ ಡಾ.ರಾಜ್ಕುಮಾರ್ ಅಭಿನಯದ ಶಂಕರ್ಗುರು ಚಿತ್ರದ ಹಾಡಿನ ಮೊದಲ ಸಾಲೇ ಟೈಟಲ್ ಮಾಡಿದ್ರೆ ಸೂಕ್ತ ಅಂತ ನಿರ್ದೇಶಕ ದೀಪಕ್ ಗಂಗಾಧರ್ಗೆ ಅನಿಸಿದೆ. ಆದ್ರಿಂದ, ಡಿಂಪಲ್ ಕ್ವೀನ್ ಹಾಗೂ ಡಾರ್ಲಿಂಗ್ ಕೃಷ್ಣ ಇಬ್ಬರ ಕಾಂಬಿನೇಷನ್ಗೆ ಈ ಟೈಟಲ್ ಫಿಕ್ಸ್ ಆಗಿದೆ.
ಲವ್ ಮಿ ಔರ್ ಹೇಟ್ ಮಿ ಯಾರು ಯಾರಿಗೆ ಅಂತಾರೆ ಅನ್ನೋದನ್ನ ಸದ್ಯಕ್ಕೆ ಚಿತ್ರತಂಡ ಬಿಟ್ಕೊಟ್ಟಿಲ್ಲ. ಆದ್ರೆ, ಸಿನಿಮಾದಲ್ಲೂ ಟ್ವಿಸ್ಟ್ ಇದೆ. ಅದ್ಹೇಗೆ ಅಂದ್ರೆ, ಈ ಚಿತ್ರದಲ್ಲಿ ರಚಿತಾ ರಾಮ್ ಬಿಟ್ಟು ಮತ್ತೊಬ್ಬ ನಾಯಕಿನೂ ಇದ್ದಾರೆ. ಆಕೆಗಾಗಿ ಚಿತ್ರತಂಡ ಬಲೆ ಬೀಸುತ್ತಿದೆ. ಆದ್ರೆ, ತೆರೆ ಮೇಲೆ ಆ ನಟಿ ಎಷ್ಟೊತ್ತು ಇರ್ತಾಳೆ ಅನ್ನೋದು ಗೊತ್ತಿಲ್ಲ. ಹೀಗಾಗಿ ಮೂವರಲ್ಲಿ ಲವ್ ಮಿ ಔರ್ ಹೇಟ್ ಮಿ ಅಂತ ಹೇಳೋದ್ಯಾರು ಅನ್ನೋದು ಸದ್ಯಕ್ಕಂತೂ ಸೀಕ್ರೆಟ್.
ರಚಿತಾ ರಾಮ್, ಡಾರ್ಲಿಂಗ್ ಕೃಷ್ಣ ಸಿನಿಮಾಗೆ ಅಣ್ಣಾವ್ರ ಶಂಕರ್ ಗುರು ಸಿನಿಮಾದ ಹಾಡು ಲವ್ ಮಿ ಔರ್ ಹೇಟ್ ಮೀ ಸಾಲೇ ಯಾಕ್ ಬೇಕಿತ್ತು?ಸಾಧುಕೋಕಿಲಾ, ಚಿಕ್ಕಣ್ಣ ಹಾಸ್ಯ ಪಾತ್ರಗಳಲ್ಲಿ ನಟಿಸ್ಬಹುದು. ಇನ್ನು ತಂತ್ರಜ್ಞರು, ಉಳಿದ ಪಾತ್ರಗಳನ್ನೂ ಚಿತ್ರತಂಡ ಶೀಘ್ರದಲ್ಲೇ ಫಿಕ್ಸ್ ಮಾಡಲಿದೆ. ಇನ್ನು ಟೈಟಲ್ ಮೂಲಕನೇ ಕಿಕ್ ಕೊಟ್ಟಿರೋ ನಿರ್ದೇಶಕ ದೀಪಕ್ ಗಂಗಾಧರ್ ತೂಗುದೀಪ ಪ್ರೋಡಕ್ಷನ್ನಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಜೊತೆ ಸಿನಿಮಾ ವಿತರಣೆಯನ್ನೂ ಮಾಡಿದ ಅನುಭವವಿದೆ. ಹೀಗಾಗಿ ಸಿನಿಮಾ ಮೇಕಿಂಗ್ ಹಾಗೂ ರಿಲೀಸ್ ಎರಡಕ್ಕೂ ಅಷ್ಟೇನು ಅಡೆತಡೆಯಾಗೋದಿಲ್ಲ.