ರಶ್ಮಿಕಾ ಮಂದಣ್ಣ ಈಗ ಬ್ಯುಸಿ ನಟಿ. ಕೈ ತುಂಬಾ ಸಿನಿಮಾಗಳಿವೆ. ಬಾಲಿವುಡ್, ಟಾಲಿವುಡ್ ಅಂತ ಓಡಾಡಿಕೊಂಡಿದ್ದಾರೆ. ಆದ್ರೆ, ಸಿನಿಮಾಗಳು ಹೇಗೆ ರಶ್ಮಿಕಾರನ್ನು ಹಿಂಬಾಲಿಸುತ್ತಿದೆಯೋ ಹಾಗೇ ಟ್ರೋಲಿಗರಿಗೆ ಈ ನಟಿಯನ್ನು ಬೆಂಬಿಡದೆ ಹಿಂಬಾಲಿಸುತ್ತಲೇ ಇರುತ್ತಾರೆ. ಫೋಟೋವನ್ನೋ, ಸಿನಿಮಾ ದೃಶ್ಯವನ್ನೋ ಇಟ್ಕೊಂಡು ಟ್ರೋಲ್ ಮಾಡುತ್ತಲೇ ಇರುತ್ತಾರೆ. ಅಂತಹವ್ರಿಗೆ ರಶ್ಮಿಕಾ ಮಂದಣ್ಣ ತಿರುಗೇಟು ನೀಡಿದ್ದಾರೆ.
ಸಂದರ್ಶನವೊಂದ್ರಲ್ಲಿ ರಶ್ಮಿಕಾ ಮಂದಣ್ಣ ಟ್ರೋಲ್ ಹಾಗೂ ಟ್ರೋಲಿಗರ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ‘‘ಮೊದ ಮೊದಲು ಟ್ರೋಲ್ಗಳನ್ನು ಸಹಿಸಿಕೊಳ್ಳೋದು ಕಷ್ಟವಾಗುತ್ತಿತ್ತು. ನಮ್ಮದು ಸಿನಿಮಾ ಕುಟುಂಬ ಅಲ್ಲದೆ ಇರೋದ್ರಿಂದ ತುಂಬಾ ಹಿಂಸೆ ಆಗುತ್ತಿತ್ತು. ನನ್ನ ಬಗ್ಗೆ ಟ್ರೋಲ್ ಮಾಡಿದಾಗ, ಹಿಂಸೆ ಅಂತೆನಿಸಿ ಉಸಿರು ಕಟ್ಟಿದಂತಾಗುತ್ತಿತ್ತು’’ ಎಂದು ಹೇಳಿದ್ದಾರೆ.
‘‘ನಮ್ಮ ದೇಹ, ನಮ್ಮ ಬಣ್ಣ, ನಮ್ಮ ಸಂಬಂಧಗಳ ಬಗ್ಗೆ ಟ್ರೋಲ್ ಮಾಡುತ್ತಾರೆ. ನನಗೆ ಅದು ಸಹಿಸಿಕೊಳ್ಳು ಸಾಧ್ಯವಿರಲಿಲ್ಲ. ಹೀಗಾಗಿ ಅವುಗಳ ಬಗ್ಗೆ ಮಾತಾಡಲೇಬೇಕಾದ ಅನಿವಾರ್ಯತೆ ಎದುರಾಗಿತ್ತು. ನನ್ನ ಕೆಲಸದ ಬಗ್ಗೆ ಟ್ರೋಲ್ ಮಾಡಿದ್ರೆ ತೊಂದರೆಯಿಲ್ಲ. ಆದ್ರೆ, ನನ್ನ ಬಾಲ್ಯ ಹಾಗೂ ಕುಟುಂಬದ ಬಗ್ಗೆ ಕಮೆಂಟ್ ಮಾಡುವುದು ಸರಿಯಲ್ಲ. ಆದರೆ, ನಾನೀಗ ಕಲ್ಲಾಗಿದ್ದೇನೆ. ತುಂಬಾ ಹಗುರವಾಗಿ ತೆಗೆದುಕೊಳ್ಳುತ್ತೇನೆ.’’ ಎಂದಿದ್ದಾರೆ.
ರಶ್ಮಿಕಾ ಮಂದಣ್ಣ ಸಿನಿಮಾ ವಿಚಾರಕ್ಕೆ ಬರೋದಾದ್ರೆ, ಬಾಲಿವುಡ್ನಲ್ಲಿ ಮಿಷನ್ ಮಜ್ನು, ಗುಡ್ಬೈ ಸಿನಿಮಾಗಳಲ್ಲಿ ನಟಿಸುತ್ತಾರೆ. ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪಾ ಡಿಸೆಂಬರ್ 25ರಂದು ಬಿಡುಗಡೆಗೆ ಸಿದ್ಧವಾಗಿದೆ.