ಪೊಗರು ಸಿನಿಮಾ ಸಕ್ಸಸ್ ಬೆನ್ನಲ್ಲೇ ಧ್ರುವ ಸರ್ಜಾ ಅಭಿಮಾನಿಗಳಿಗೆ ಎಕ್ಸೈಟಿಂಗ್ ನ್ಯೂಸ್ ಕೊಟ್ಟಿದ್ದಾರೆ. ಇದು ಅಂತಿಥ ನ್ಯೂಸ್ ಅಲ್ಲವೇ ಅಲ್ಲ. ಡೈನಾಮಿಕ್ ಡೈರೆಕ್ಟರ್ ಪುರಿ ಜಗನ್ನಾಥ್ ಡೈರೆಕ್ಷನ್ನಲ್ಲಿ ಆ್ಯಕ್ಷನ್ ಪ್ರಿನ್ಸ್ ನಟಿಸ್ತಿದ್ದಾರೆ. ಪೊಗರು ಚಿತ್ರದಲ್ಲಿ ಧ್ರುವ ಆ್ಯಕ್ಟಿಂಗ್ ನೋಡಿ ಫಿದಾ ಆಗಿರೋ ಪೂರಿ ಜಗನ್ನಾಥ್ ಮುಂದಿನ ಚಿತ್ರಕ್ಕೆ ಧ್ರುವ ಜೊತೆ ಕೈ ಜೋಡಿಸಿದ್ದಾರೆ. ಈಗಾಗಲೇ ಕನ್ನಡದಲ್ಲಿ ಯುವರಾಜ, ಅಪ್ಪು, ರೋಗ್ ಅನ್ನೋ ಮೂರು ಸಿನಿಮಾಗಳಿಗೆ ಪೂರಿ ಜಗನ್ನಾಥ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದು ನಾಲ್ಕನೇ ಸಿನಿಮಾ. ಸದ್ಯ ಪೂರಿ “ಲೈಗರ್” ಅನ್ನೋ ಪ್ಯಾನ್ ಇಂಡಿಯಾ ಚಿತ್ರ ಕಟ್ಟಿಕೊಡ್ತಿದ್ದು, ಅದಾದ ನಂತ್ರ ಧ್ರುವಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ರೊಮ್ಯಾಂಟಿಕ್ ಆ್ಯಕ್ಷನ್ ಸಿನಿಮಾಗಳನ್ನ ಕಟ್ಟಿಕೊಡೋದ್ರಲ್ಲಿ ಪೂರಿ ಜಗನ್ನಾಥ್ ನಿಸ್ಸೀಮರು. ಅದ್ರಲ್ಲೂ ಧ್ರುವ ರೀತಿಯ ಮಾಸ್ ಹೀರೋ ಸಿಕ್ರೆ ಕೇಳ್ಬೇಕಾ..? ಅಂದ ಹಾಗೆ ಪುರಿ- ಧ್ರುವ ಸಿನಿಮಾ ಏಕಕಾಲಕ್ಕೆ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗಲಿದೆ.
ಪುರಿ ಜಗನ್ನಾಥ್ ಆ್ಯಕ್ಷನ್ ಕಟ್ ಹೇಳಿರೋ ಬಹುತೇಕ ಸಿನಿಮಾಗಳು ಹಿಟ್ ಆಗಿದೆ. ಕನ್ನಡದಲ್ಲಿ ಶಿವಣ್ಣನ ಜೊತೆ ಯುವರಾಜ ಸಿನಿಮಾ ಮಾಡಿ ಗೆದ್ರು. ಇನ್ನು ಪುನೀತ್ ರಾಜ್ಕುಮಾರ್ಗೆ “ಅಪ್ಪು” ಸಿನಿಮಾ ಮೂಲಕ ದೊಡ್ಡ ಬ್ರೇಕ್ ಕೊಟ್ಟವರು ಇವರೇ. ಈಗ ಧ್ರುವ ಸರ್ಜಾಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಒಟ್ನಲ್ಲಿ ಧ್ರುವ ಸರ್ಜಾ- ಪೂರಿ ಜಗನ್ನಾಥ್ ಸಿನಿಮಾ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡೋದು ಗ್ಯಾರೆಂಟಿ.