ರಾಮಾ ರಾಮಾ ರೇ ಚಿತ್ರದ ನಿರ್ದೇಶಕ ಸತ್ಯ ಪ್ರಕಾಶ್ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ಗಾಗಿ ಒಂದು ಸಿನಿಮಾ ಮಾಡ್ಬೇಕಿತ್ತು. ಆದ್ರೆ, ಕೊರೊನಾ, ಲಾಕ್ಡೌನ್ ಅಂತ ಈ ಸಿನಿಮಾ ಅಂದ್ಕೊಂಡಂತೆ ಶುರುವಾಗಿಲ್ಲ. ಈ ಮಧ್ಯೆ ಸತ್ಯಪ್ರಕಾಶ್ ಹೊಸಬರಿಗಾಗಿ ನಿರ್ಮಿಸಿದ್ದ ಕಥೆಯೊಂದನ್ನ ಪುನೀತ್ ರಾಜ್ಕುಮಾರ್ಗೆ ಹೇಳಿದ್ದರು. ಅಪ್ಪು ಈ ಕಥೆಯನ್ನು ಮೆಚ್ಚಿ ಅವರೇ ನಿರ್ಮಾಣಕ್ಕೂ ಕೈ ಹಾಕಿದ್ದರು. ಈ ವೇಳೆ ಪುನೀತ್ ಶೂಟಿಂಗ್ ಸ್ಪಾಟ್ಗೆ ಭೇಟಿ ನೀಡಿದ್ರು.
ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರದ ಎಳೆಯನ್ನು ಸತ್ಯಪ್ರಕಾಶ್ ಪುನೀತ್ ಅವರ ಬಳಿ ಹೇಳಿದ್ದರು. ಹೊಸ ಕಲಾವಿದರಿಗಾಗಿಯೇ ತಯಾರಿಸಿದ್ದ ಆ ಕಥೆಯ ವಸ್ತು ಹಾಗೂ ಚಿತ್ರಕಥೆಯಲ್ಲಿದ್ದ ಹೊಸತನ, ಪುನೀತ್ ಅವರಿಗೂ ಸಹ ಮೆಚ್ಚುಗೆಯಾಗಿ ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ ನೀಡಿದ್ರು. ಆಗ ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು.
ಪಿ ಆರ್ ಕೆ ಮತ್ತು ಸತ್ಯ & ಮಯೂರ ಪಿಕ್ಚರ್ಸ್ ಜಂಟಿಯಾಗಿ ಮ್ಯಾನ್ ಆಫ್ ದಿ ಮ್ಯಾಚ್ ಸಿನಿಮಾವನ್ನು ನಿರ್ಮಿಸುತ್ತಿದೆ. ಏಪ್ರಿಲ್ನಲ್ಲಿ ಶುರುವಾಗಿದ್ದ ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿದೆ. ಈಗ ಪೋಸ್ಟ್ಪ್ರೊಡಕ್ಷನ್ನಲ್ಲಿ ಬ್ಯುಸಿಯಾಗಿದೆ. ಎರಡು ದಿನಗಳ ಹಿಂದೆ ನಡೆದ ಅಂತಿಮ ಹಂತದ ಚಿತ್ರೀಕರಣದ ವೇಳೆ ಪುನೀತ್ ರಾಜ್ಕುಮಾರ್ ಭೇಟಿ ನೀಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ರು.