ಪುನೀತ್ ರಾಜ್ಕುಮಾರ್ ಅಭಿನಯದ ಪವರ್ಫುಲ್ ಸಿನಿಮಾ ಯುವರತ್ನ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗ್ತಿರೋ ಈ ಸಿನಿಮಾ ಬಗ್ಗೆ ನಿರೀಕ್ಷೆಗಳು ಗಗನಕ್ಕೇರಿವೆ. ಕರ್ನಾಟಕದಲ್ಲಿ ಸುಮಾರು 400 ಚಿತ್ರಮಂದಿರಗಳಲ್ಲಿ ಯುವರತ್ನ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾನೆ. ತೆಲಂಗಾಣದಲ್ಲಿ ಸುಮಾರು 200 ಕ್ಕೂ ಅಧಿಕ ಥಿಯೇಟರ್ಗಳಲ್ಲಿ ಯುವರತ್ನ ಬಿಡುಗಡೆಯಾಗಲಿದೆ.
ಬೆಳಗ್ಗೆ 6 ಗಂಟೆಗೆ ಫ್ಯಾನ್ ಶೋ.. ಹುಚ್ಚೆದ್ದು ಕುಣಿದ ಅಭಿಮಾನಿಗಳು
ಯುವರತ್ನ ಬೆಂಗಳೂರಿನ ಸುಮಾರು 50ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬೆಳಗ್ಗೆ 6 ಗಂಟೆಯಿಂದ್ಲೇ ಶೋ ಪ್ರಾರಂಭ ಆಗಿದೆ. ಬಹುತೇಕ 50 ಚಿತ್ರಮಂದಿರಗಳೂ ಕೂಡ ಹೌಸ್ಫುಲ್ ಆಗಿದ್ದು, ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡಿದ್ದಾರೆ. ಬೆಂಗಳೂರಿನ ಶ್ರೀನಿವಾಸ ಚಿತ್ರಮಂದಿರ ಹಾಗೂ ಊರ್ವಶಿಯಲ್ಲಿ ಫ್ಯಾನ್ಸ್ ಭರ್ಜರಿ ಸೆಲೆಬ್ರೇಷನ್ ಮಾಡಿ ಸಂಭ್ರಮಿಸಿದ್ದಾರೆ.
ಈ ಹಿಂದೆ ‘ರಾಜಕುಮಾರ’ ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ್ದ ಸಂತೋಷ್ ಆನಂದ್ರಾಮ್ ಮತ್ತು ಪುನೀತ್ ಕಾಂಬಿನೇಷನ್ ಸಿನಿಮಾ ಇದ್ದಾಗಿದ್ದು, ‘ಯುವರತ್ನ’ ಅದ್ಯಾವ ಮೋಡಿ ಮಾಡುತ್ತೋ ಅನ್ನೋ ನಿರೀಕ್ಷೆಯಿದೆ. ಈಗಾಗ್ಲೇ ಯುವರತ್ನ ಬಾಕ್ಸಾಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತೆ ಅನ್ನೋ ನಿರೀಕ್ಷೆಯಿದೆ.
ಹೊಂಬಾಳೆ ಫಿಲಂಸ್ನ ವಿಜಯ ಕಿರಗಂದೂರು ಯುವರತ್ನ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಪುನೀತ್ ಸಯೇಶಾ ಸೆಹಗಲ್ ಕೆಮಿಸ್ಟ್ರಿ ನೋಡಲು ಫ್ಯಾನ್ಸ್ ಕಾತುರರಾಗಿದ್ದಾರೆ. ಇವ್ರೊಂದಿಗೆ ಪ್ರಕಾಶ್ ರಾಜ್, ಅವಿನಾಶ್, ದಿಗಂತ್, ಧನಂಜಯ್, ಸೋನುಗೌಡ ಸೇರಿದಂತೆ ಬಹುದೊಡ್ಡ ಸ್ಟಾರ್ ಕಾಸ್ಟ್ ಈ ಸಿನಿಮಾದಲ್ಲಿದೆ.
ರಿಲೀಸ್ ಆಗ್ತಿದ್ದಂತೆ ಯುವರತ್ನ ಟ್ರೆಂಡ್:
ಯುವರತ್ನ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಯುವರತ್ನ ಟ್ವಿಟರ್ನಲ್ಲಿ ಟ್ರೆಂಡ್ ಆಗಿದೆ. ಬೆಳಗ್ಗೆ ಆರು ಗಂಟೆ ಶೋ ಆರಂಭ ಆಗುತ್ತಿದ್ದಂತೆ ಅಪ್ಪು ಫ್ಯಾನ್ಸ್ ಯುವರತ್ನ ಸಿನಿಮಾವನ್ನ ಟ್ರೆಂಡ್ ಮಾಡುತ್ತಿದ್ದಾರೆ.
ಥಿಯೇಟರ್ ಮುಂದೆ ಅಭಿಮಾನಿಗಳ ಸಂಭ್ರಮ
ಯುವರತ್ನ ಕಳೆದ ವರ್ಷವೇ ಸಿನಿಮಾ ರಿಲೀಸ್ ಆಗ್ಬೇಕಿತ್ತು. ಆದ್ರೆ, ಕೊರೊನಾ ಲಾಕ್ಡೌನ್ ಅಂತ ಸಿನಿಮಾ ಬಿಡುಗಡೆಯಾಗಿರ್ಲಿಲ್ಲ. ಹೀಗಾಗಿ ಏಪ್ರಿಲ್ 1 ರಂದು ಗ್ರ್ಯಾಂಡ್ ಎಂಟ್ರಿ ಕೊಟ್ಟಿರೋ ಯುವರತ್ನ ಸಿನಿಮಾವನ್ನ ಕಣ್ತುಂಬಿಕೊಂಡು ಅಪ್ಪು ಫ್ಯಾನ್ಸ್ ಕುಣಿಸು ಕುಪ್ಪಳಿಸುತ್ತಿದ್ದಾರೆ.