ಪವರ್ ಸ್ಟಾರ್ ಪುನೀತ್ ಯುವರತ್ನ ಸಿನಿಮಾ ರಿಲೀಸ್ ಆಗಿ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮೊದಲ ವಾರವೇ ಸಿನಿಮಾಗೆ ಸರ್ಕಾರ ಶಾಕ್ ಕೊಟ್ರೂ, ಜನರು ಮಾತ್ರ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡೋದನ್ನ ಕಡಿಮೆ ಮಾಡಿಲ್ಲ. ಹೀಗಾಗಿ ಯುವರತ್ನ ಕಲೆಕ್ಷನ್ ಮೇಲೆ ಸರ್ಕಾರದ ರೂಲ್ಸ್ ಅಷ್ಟಾಗಿ ಪರಿಣಾಮ ಬೀರಿಲ್ಲ. ಹಾಗಿದ್ರೆ, ಮೊದಲ ನಾಲ್ಕು ದಿನದ ಗಳಿಕೆ ಎಷ್ಟು? ಅನ್ನೋ ಕುತೂಲಹಕ್ಕೆ ಇಲ್ಲಿದೆ ಉತ್ತರ.
ಯುವರತ್ನ ಹೊಂಬಾಳೆ ಫಿಲಂಸ್ ನಿರ್ಮಿಸಿರೋ ಬಿಗ್ ಬಜೆಟ್ ಸಿನಿಮಾ. ಸಂತೋಷ್ ಆನಂದ್ರಾಮ್ ಹಾಗೂ ಪುನೀತ್ ಕಾಂಬಿನೇಷನ್ನ ಎರಡನೇ ಚಿತ್ರ, ರಾಜಕುಮಾರ ಬಳಿಕ ರಿಲೀಸ್ ಆಗ್ತಿರೋ ಈ ಜೋಡಿಯ ಸಿನಿಮಾ ಭರಪೂರ ಸರ್ಪೋರ್ಟ್ ಸಿಕ್ಕಿದೆ. ಹೀಗಾಗಿ ಮೊದಲ ದಿನವೇ ಯುವರತ್ನ ಗಳಿಕೆ ₹8 ಕೋಟಿ ಎಂದು ಅಂದಾಜಿಸಲಾಗಿದೆ.
ಇನ್ನು ಎರಡು ದಿನ ಕೂಡ ಡಿಸೆಂಟ್ ಅಮೌಂಟ್ ಅನ್ನ ಕಲೆಹಾಕಿದ್ದು, ₹5 ಕೋಟಿಯಷ್ಟು ಗಳಿಕೆ ಕಂಡಿದೆ ಅನ್ನೋದನ್ನ ವಿತರಕರ ವಲಯ ಹೇಳುತ್ತಿದೆ.ಯುವರತ್ನಗೆ ಸಂಕಷ್ಟ ಎದುರಾಗಿದ್ದು ಮೂರನೇ ದಿನ. ಸರ್ಕಾರ ಶೇ.50ರಷ್ಟು ಸೀಟಿಂಗ್ ವ್ಯವಸ್ಥೆ ಆದೇಶ ಹೊರತರುತ್ತಿದ್ದಂತೆ ಪ್ರೇಕ್ಷಕರು ಗೊಂದಲಕ್ಕೆ ಬಿದ್ದಿದ್ದರು. ಬಳಿಕ ಪುನೀತ್ ಅಖಾಡಕ್ಕಿಳಿದು ಪರಿಸ್ಥಿತಿಯನ್ನ ಸಿಎಂ ಯಡಿಯೂರಪ್ಪ ಗೆ ಮನವರಿಗೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಏಪ್ರಿಲ್ 3 ಮತ್ತು ಏಪ್ರಿಲ್ 4 ಈ ಎರಡು ದಿನಗಳ ಗಳಿಕೆ 10 ಕೋಟಿಯಷ್ಟಾಗಿದೆ ಅನ್ನೋ ಮಾತು ಕೇಳೀಬರ್ತಿದೆ.
ಅಲ್ಲಿದೆ ಮೊದಲ ನಾಲ್ಕು ದಿನಗಳ ಗಳಿಕೆ 23 ರಿಂದ 25 ಕೋಟಿ ಕಲೆ ಹಾಕಿದೆ ಅನ್ನೋದನ್ನ ವಿತರಕರ ವಲಯದಲ್ಲಿ ಚರ್ಚೆಯಾಗ್ತಿದೆ. ಇನ್ನು ಸಿನಿಮಾ ಬಗ್ಗೆ ಮೌತ್ ಟಾಕ್ ಚೆನ್ನಾಗಿರೋದ್ರಿಂದ ಸೀಟಿಂಗ್ ವ್ಯವಸ್ಥೆ 50 ಪರ್ಸೆಂಟ್ ಆಗೋಕೂ ಮುನ್ನ ಸಿನಿಮಾ ಹಾಕಿದ ಬಂಡವಾಳನ್ನ ರಿಕವರಿ ಮಾಡುತ್ತೆ ಅಂತ ಭವಿಷ್ಯ ನುಡಿದಿದ್ದಾರೆ. ಆದ್ರೆ, ಯುವರತ್ನ ಕಲೆಕ್ಷನ್ ಬಗ್ಗೆ ಹೊಂಬಾಳೆ ಫಿಲಂಸ್ ಆಗ್ಲಿ, ಅಥವಾ ಯುವರತ್ನ ತಂಡವಾಗ್ಲಿ ಇದೂವರೆಗೂ ಅಧಿಕೃತ ಮಾಹಿತಿಯನ್ನ ಹೊರ ಹಾಕಿಲ್ಲ.