ಪವರ್ಸ್ಟಾರ್ ಫುನೀತ್ ರಾಜ್ಕುಮಾರ್ ಸಿನಿಮಾ ಯುವರತ್ನ ಎಲ್ಲೆಡೆ ಸೂಪರ್ ರೆಸ್ಪಾನ್ಸ್ ಸಿಗುತ್ತಿದೆ. ಕೌಟುಂಬಿಕ ಸಿನಿಮಾ ಅನ್ನೋ ಕಾರಣಕ್ಕೆ ಜನರು ಫ್ಯಾಮಿಲಿ ಸಮೇತ ಹೋಗಿ ಸಿನಿಮಾ ನೋಡುತ್ತಿದ್ದಾರೆ. ಹೀಗಾಗಿ ಯುವರತ್ನ ನೋಡಲು ಜನರು ಥಿಯೇಟರ್ ಕಡೆ ಮುಗಿಬಿದ್ದು ಬರ್ತಿದ್ದಾರೆ. ಈ ಗ್ಯಾಪ್ನಲ್ಲೇ ಸಿನಿಮಾಗೆ ನೂರೆಂಟು ಅಡೆ-ತಡೆಗಳು ಎದುರಾಗಿತ್ತು. ಆ ಎಲ್ಲಾ ಸಮಸ್ಯೆಯನ್ನೂ ಬಗೆ ಹರಿಸಿಕೊಂಡು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.
ಯುವರತ್ನ ಸಿನಿಮಾಗೆ ಮೊದಲ ಎರಡನೇ ದಿನಕ್ಕೆ ರಾಜ್ಯ ಸರ್ಕಾರ ಶೇ.50ರಷ್ಟು ಸೀಟು ಭರ್ತಿಗೆ ಆದೇಶ ನೀಡಿತ್ತು. ಪರಸ್ಪರ ಚರ್ಚೆಯ ಬಳಿಕ ಸಿಎಂ ಯಡಿಯೂರಪ್ಪ ವಿನಾಯಿತ ನೀಡಿದ್ರೂ, ಒಂದು ದಿನ ಜನರು ಗೊಂದಲದಲ್ಲೇ ಇದ್ರು. ಈಗ ಸಾರಿಗೆ ಮುಷ್ಕರದ ಬಿಸಿ ಯುವರತ್ನ ಸಿನಿಮಾ ಮೇಲೂ ತಟ್ಟುತ್ತೆ ಎಂದು ಅಂದಾಜಿಸಲಾಗಿದೆ. ಹೀಗಿದ್ರೂ, ಯುವರತ್ನ ಬಾಕ್ಸಾಫೀಸ್ ಕಲೆಕ್ಷನ್ ಭರ್ಜರಿಯಾಗಿದೆ ಎಂದು ವರದಿಯಾಗಿದೆ.
ಅಪ್ಪು ಸಿನಿಮಾ ಯುವರತ್ನ ಮೊದಲ ಐದು ದಿನೇ ದಿನ ಕರ್ನಾಟಕದಲ್ಲಿ ₹2 ಕೋಟಿಗೂ ಅಧಿಕ ಹಣ ಕಲೆ ಹಾಕಿದೆ ಎನ್ನಲಾಗಿದೆ. ಹೀಗಾಗಿ ಮೊದಲ ಐದು ದಿನಗಳಲ್ಲಿ ಚಿತ್ರದ ಗಳಿಕ ₹51 ಕೋಟಿ ಎಂದು ಸಾಕ್ಷಿ ಪೋಸ್ಟ್ ನ್ಯೂಸ್ ಪೋರ್ಟಲ್ ವರದಿ ಮಾಡಿದೆ.
ಯುವರತ್ನ ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲ. ವಿದೇಶದಲ್ಲೂ ರಿಲೀಸ್ ಆಗಿತ್ತು. ಅಮೆರಿಕದಲ್ಲಿ ಸುಮಾರ 40ಕ್ಕೂ ಚಿತ್ರಮಂದಿರಗಳಲ್ಲಿ ಶೋ ಹಾಕಲಾಗಿತ್ತು. ಆಸ್ಟ್ರೇಲಿಯಾ, ದುಬೈನಲ್ಲೂ ಯುವರತ್ನ ಬಿಡುಗಡೆಯಾಗಿತ್ತು. ವಿದೇಶಿ ಮಾರುಕಟ್ಟೆಯಿಂದ್ಲೇ ಯುವರತ್ನ 31 ಸಾವಿರ ಡಾಲರ್ ಕಲೆಕ್ಷನ್ ಮಾಡಿದೆ ಎಂದೂ ವರದಿ ಮಾಡಿದೆ. ಹೀಗಾಗಿ ಮೊದಲ ಐದು ದಿನಗಳಲ್ಲೇ ಯುವರತ್ನ 50 ಕೋಟಿ ಕ್ಲಬ್ ಸೇರಿದೆ ಅನ್ನೋ ಮಾತು ಕೇಳಿಬರ್ತಿದೆ.