ಇವರ್ಗ್ ಕೊಟ್ಟಿರೋ ಸ್ಟಾರ್, ಡ್ಯೂಟಿಲಿ ಇರೋವರ್ಗು.. ಇವ್ರು ನಮಗ್ ಕೊಟ್ಟಿರೋ ಸ್ಟಾರ್ ನಾವ್ ಇರೋವರ್ಗು.. ಫಸ್ಟ್ ಬೆಂಚ್ ಅಲ್ಲಿ ಕೂತ್ಕೊಂಡ್ರೆ ಬೋರ್ಡ್ ಕಾಣುತ್ತೆ. ಲಾಸ್ಟ್ ಬೆಂಚ್ ಅಲ್ಲಿ ಕೂತ್ಕೊಂಡ್ರೆ ವರ್ಲ್ಡ್ ಕಾಣುತ್ತೆ… ಓಂ ಪಿಕ್ಚರ್ ನೋಡಿದ್ದೀಯಾ, ನಾವೇ ಪ್ರೊಡ್ಯೂಸ್ ಮಾಡಿದ್ದು.. ಜನಕ್ ದುಡ್ಡ್ ಕೊಟ್ ಓಟ್ ಹಾಕ್ಸ್ಕೊಂಡು ಗೆಲ್ಲೋ ನಿಂಗು ನಿಮ್ ಅಪ್ಪಂಗೂ ಇಷ್ಟ್ ಇರಬೇಕಾದ್ರೆ, ಜನ ನಮ್ಗೆ ದುಡ್ಡು ಕೊಟ್ಟು ಓಟ್ ಹಾಕಿ ಗೆಲ್ಸಿದ್ದಾರೆ, ನಮಗ್ ಎಷ್ಟ್ ಇರಬೇಕು.. ಅಬ್ಬಬ್ಬಾ “ಯುವರತ್ನ” ಟ್ರೈಲರ್ ನಲ್ಲಿ ಹೀಗೆ ಡೈಲಾಗ್ ಗಳ ಸುರಿಮಳೆಯಾಗಿದೆ. ಪುನೀತ್ ರಾಜ್ಕುಮಾರ್ ಅಭಿಮಾನಿಗಳಿಗಂತೂ ಸಿಕ್ಕಾಪಟ್ಟೆ ಕಿಕ್ ಕೊಡ್ತಿದೆ. ಟ್ರೈಲರ್ ನೋಡ್ತಿದ್ರೆ, ಸಂತೋಷ್ ಆನಂದ್ ರಾಮ್ ಟೇಕಿಂಗ್, ಅಪ್ಪು ಖದರ್ರು, ಹೈ ಟೆಕ್ನಿಕಲ್ ವ್ಯಾಲ್ಯೂಸ್ ಜೊತೆಗೆ ಮೂಡಿಬರ್ತಿರೋ ಸಿನಿಮಾ sure shot hit ಅನ್ನಿಸ್ತಿದೆ..
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಎರಡು ಶೇಡ್ ಗಳಿರೋ ರೋಲ್ ನಲ್ಲಿ ಧೂಳೆಬ್ಬಿಸೋಕೆ ಬರ್ತಿದ್ದಾರೆ. ಪುನೀತ್ ಚಿತ್ರದಲ್ಲಿ ಕಾಲೇಜ್ ಸ್ಟೂಡೆಂಟ್ ಆಗಿ ಮಾತ್ರವಲ್ಲದೇ ಪೊಲೀಸ್ ಆಫೀಸರ್ ಆಗಿ ಚಾರ್ಜ್ ತಗೊಂಡಿದ್ದಾರೆ. ಅಪ್ಪು ಓವರಾಲ್ ಪರ್ಫಾರ್ಮೆನ್ಸ್ ಯುವರತ್ನ ಚಿತ್ರದ ಮೇನ್ ಅಟ್ರಾಕ್ಷನ್. ಇನ್ನು ಕಾಲೇಜ್ ಪ್ರಿನ್ಸಿಪಲ್ ರೋಲ್ ನಲ್ಲಿ ಪ್ರಕಾಶ್ ರೈ ಇಷ್ಟವಾದ್ರೆ, ನೆಗಟಿವ್ ಶೇಡ್ ರೋಲ್ ನಲ್ಲಿ ಡಾಲಿ ಧನಂಜಯ ಅಬ್ಬರಿಸಿದ್ದಾರೆ. ಶಿಕ್ಷಣ ಸಂಸ್ಥೆಗಳ ಖಾಸಗೀಕರಣ, ವಿದ್ಯಾ ದೇಗುಲದಲ್ಲಿ ನಡೆಯುವ ಡ್ರಗ್ಸ್ ದಂಧೆ ಸುತ್ತಾ ಯುವರತ್ನ ಕಥೆ ಸುತ್ತುತ್ತೆ ಅನ್ನೋದು ಟ್ರೈಲರ್ ನೋಡಿದ್ರೆ, ಗೊತ್ತಾಗ್ತಿದೆ.
ಯುವರತ್ನ ಚಿತ್ರದಲ್ಲಿ ಅಪ್ಪು ಕಾಲೇಜ್ ಸ್ಟೂಡೆಂಟ್ ರೋಲ್ ಮಾಡ್ತಿದ್ದಾರೆ ಅಂತ್ಲೇ ಇಷ್ಟು ದಿನ ಎಲ್ಲರೂ ಅಂದುಕೊಂಡಿದ್ರು, ಬಟ್ ಟ್ರೈಲರ್ ನೋಡಿದ್ಮೇಲೆ “ಯುವರತ್ನ” ನ ಖಾಕಿ ಖದರ್ ಕೂಡ ಚಿತ್ರದಲ್ಲಿದೆ ಅನ್ನೋದು ರಿವೀಲ್ ಆಗಿದೆ. ನಿಜಕ್ಕೂ ಇದು ಅಭಿಮಾನಿಗಳಿಗೆ ಬಿಗ್ ಸರ್ಪೈಸ್. ಪವರ್ ಪ್ಯಾಕ್ಡ್ ಟ್ರೈಲರ್ ಸಿಕ್ಕಾಪಟ್ಟೆ ಮಜಾ ಕೊಡ್ತಿದೆ. ಆದ್ರೆ, ಚಿತ್ರದ ರೊಮ್ಯಾಂಟಿಕ್ ಟ್ರ್ಯಾಕ್ ಯಾಕೋ ಅಷ್ಟು ಇಂಪ್ರೆಸ್ಸಿವ್ ಆಗಿಲ್ಲ. ಒಟ್ನಲ್ಲಿ ಏಪ್ರಿಲ್ 1ಕ್ಕೆ ದೊಡ್ಮನೆ ಅಭಿಮಾನಿಗಳಿಗೆ ಹಬ್ಬದೂಟ ಗ್ಯಾರೆಂಟಿ.