ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಫಿಟ್ನೆಸ್ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುತ್ತಾರೆ ಅನ್ನೋದು ಎಲ್ಲರಿಗೂ ತಿಳಿದಿದೆ. ಅಂಥಾದ್ರಲ್ಲಿ ಅಪ್ಪು ಬಸ್ ಸ್ಟ್ಯಾಂಡ್ ನಲ್ಲಿ ಪುಶ್ ಅಪ್ ಮಾಡ್ತಿದ್ದಾರೆ ಅಂದ್ರೆ ಅಭಿಮಾನಿಗಳು ಸುಮ್ಮನಿರ್ತಾರಾ? ಫ್ಯಾನ್ಸ್ ಗೆ ಸಿಕ್ಕಾಪಟ್ಟೆ ಇಷ್ಟ ಆಗಿರೋ ಈ ಕಸರತ್ತು ಅಪ್ಪು ಹೊಸಾ ಚಿತ್ರ ‘ಯುವರತ್ನ’ ಪ್ರೊಮೋಶನ್ ಸ್ಟ್ರಾಟಜಿ.
ಅಂದ್ಹಾಗೆ ಇದೊಂದು ತ್ರಿ-ಡಿ ಪೋಸ್ಟರ್. ವಿಭಿನ್ನ ರೀತಿಯಲ್ಲಿ ಸಿನಿಮಾ ಪ್ರೊಮೋಶನ್ ಮಾಡ್ತಿದೆ ಯುವರತ್ನ ಟೀಂ. ಈಗಾಗಲೇ ರಾಜ್ಯದೆಲ್ಲೆಡೆ ಭರ್ಜರಿ ಪ್ರಚಾರ ಮಾಡುತ್ತಿರುವ ಚಿತ್ರತಂಡ ಸಖತ್ ಹವಾ ಕ್ರಿಯೇಟ್ ಮಾಡ್ತಿದೆ. ಲಾಕ್ ಡೌನ್ ನಂತರ ಚಿತ್ರರಂಗ ಉತ್ತಮವಾಗಿ ಚಿಗುರಿಕೊಂಡಿದೆ.
ಇತ್ತೀಚೆಗಷ್ಟೇ ಬಿಡುಗಡೆಯಾಗಿ ಬಾಕ್ಸಾಫೀಸ್ ಲೂಟಿ ಹೊಡೆದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸ್ಯಾಂಡಲ್ ವುಡ್ ಗೆ ಹೊಸಾ ಜೀವ ಕೊಟ್ಟಂತಾಗಿದೆ. ಈಗ ಮತ್ತೊಂದು ಮೆಗಾ ಬಜೆಟ್ ಚಿತ್ರ ಯುವರತ್ನ ರಿಲೀಸ್ ಗೆ ರೆಡಿಯಾಗಿರೋದು ಸಿನಿಮಾ ಅಭಿಮಾನಿಗಳಿಗೆ ಮಾತ್ರ ಹಬ್ಬದಂತೆಯೇ ಆಗಿದೆ.