ಇಷ್ಟು ದಿನ ದರ್ಶನ್ ಅಭಿಮಾನಿಗಳ ಹಬ್ಬ.. ಈಗ ಪವರ್ ಸ್ಟಾರ್ ಪುನೀತ್ ಅಭಿಮಾನಿಗಳ ಹಬ್ಬ ಶುರುವಾಗಿದೆ. ಅದಕ್ಕೆ ಎರಡೆರಡು ಕಾರಣ. ಒಂದು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಬರ್ತ್ಡೇ ಆಗಿದ್ರೆ, ಇನ್ನೊಂದು ಯುವರತ್ನ ಸಿನಿಮಾ ಬಿಡುಗಡೆ ಸಮಾರಂಭ. ಒಟ್ನಲ್ಲಿ ಅಪ್ಪು ಫ್ಯಾನ್ಸ್ಗೆ ಈ ಬಾರಿ ಡಬಲ್ ಧಮಾಕಾ ಅಂತ್ಲೇ ಹೇಳ್ಬಹುದು.
ಪುನೀತ್ ರಾಜ್ಕುಮಾರ್ ಇದೇ ಮಾರ್ಚ್ 17ರಂದು 46ನೇ ವಸಂತಕ್ಕೆ ಕಾಲಿಡಲಿದ್ದಾರೆ. ಕಳೆದ ವರ್ಷ ಕೂಡ ಕೊರೊನಾದಿಂದಾಗಿ ಹುಟ್ಟುಹಬ್ಬವನ್ನ ಆಚರಿಸಿಕೊಂಡಿರಲಿಲ್ಲ. 2020ಯಲ್ಲಿ ಅಭಿಮಾನಿಗಳ ಹಬ್ಬದಿಂದ ದೂರಾನೇ ಉಳಿದಿದ್ದ ಅಪ್ಪು ಈ ಬಾರಿ ಹುಟ್ಟುಹಬ್ಬದ ಆಚರಿಸಿಕೊಳ್ಳುವ ಸಾಧ್ಯತೆಯಿದೆ. ಆದ್ರೆ ಇದೂವರೆಗೂ ಪುನೀತ್ ಹುಟ್ಟುಹಬ್ಬ ಹೇಗೆ ಆಚರಿಸಿಕೊಳ್ತಾರೆ ಅಂತ ಹೇಳಿಲ್ಲ. ಆದ್ರಿಂದ ಅಭಿಮಾನಿಗಳು ನಾಲ್ಕು ದಿನ ಮುನ್ನವೇ ಕಾಮನ್ ಡಿಪಿ ಮೂಲಕ ಬರ್ತ್ ಡೇ ಸೆಲೆಬ್ರೆಷನ್ ಶುರು ಮಾಡಿದ್ದಾರೆ.
ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ಕಾಮನ್ ಡಿಪಿಯನ್ನ ಸ್ಯಾಂಡಲ್ವುಡ್ ಡಾಲಿ ಧನಂಜಯ್ ಟ್ವಿಟ್ಟರ್ನಲ್ಲಿ ಶೇರ್ ಮಾಡಿದ್ದಾರೆ. ಜೊತೆ ಲವ್ಲೀ ಕಾಮನ್ ಡಿಪಿ ಅಂತಾನೂ ಬರೆದುಕೊಂಡಿದ್ದಾರೆ. ಡಾಲಿ ಧನಂಜಯ್ ಪುನೀತ್ ನಟನೆಯ ಯುವರತ್ನ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದ್ರಲ್ಲಿ ನಟಿಸಿದ್ದಾರೆ.
ಪುನೀತ್ ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಯುವರತ್ನ ರಿಲೀಸ್ಗೆ ರೆಡಿಯಾಗಿದ್ದರೆ, ಇನ್ನೊಂದ್ಕಡೆ ಬಹದ್ದೂರ್ ಚೇತನ್ ನಿರ್ದೇಶಿಸ್ತಿರೋ ಜೇಮ್ಸ್ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಜೊತೆಗೆ ದಿನಕರ್ ತೂಗುದೀಪ ನಿರ್ದೇಶನದ ಸಿನಿಮಾ ಜೊತೆಗೆ ಇನ್ನೂ ಕೆಲವು ಸಿನಿಮಾಗಳ ಮಾತುಕತೆ ನಡೆಯುತ್ತಿದೆ. ಹೀಗಾಗಿ ಈ ವರ್ಷ ಅಪ್ಪು ಫುಲ್ ಬ್ಯುಸಿ ಅಭಿಮಾನಿಗಳಿಗೆ ಫುಲ್ ಖುಷಿ.