2020ಯಲ್ಲಿ ಜಾದು ಮಾಡಿದ ಎರಡು ಸಿನಿಮಾ ಲವ್ ಮಾಕ್ಟೇಲ್ ಹಾಗೂ ದಿಯಾ. ಈ ಎರಡೂ ಸಿನಿಮಾಗಳು ಪ್ರಮುಖ ಪಾತ್ರಗಳು ಒಂದೇ ಸಿನಿಮಾದಲ್ಲಿ ನಟಿಸುತ್ತಿದೆ. ಅದೇ ಫಾರ್ ರೆಜಿಸ್ಟ್ರೇಷನ್. ಈ ಸಿನಿಮಾದ ಹಾಡುಗಳನ್ನ ಮಂಗಳೂರು, ಉಡುಪಿ ಬಳಿಯ ಕಡಲ ಕಿನಾರೆಯಲ್ಲಿ ಚಿತ್ರೀಕರಿಸಲಾಗಿದೆ. ಈಗಾಗ್ಲೇ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು, ದ್ವಿತೀಯ ಹಂತದ ಚಿತ್ರೀಕರಣ ಮಾರ್ಚ್ ಕೊನೆಯಲ್ಲಿ ಶುರುವಾಗುತ್ತಿದೆ
ಫಾರ್ ರೆಜಿಸ್ಟ್ರೇಷನ್ ಸಿನಿಮಾದ ಚಿತ್ರೀಕರಣದ ಕೆಲವು ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ರಿಲೀಸ್ ಮಾಡಲಾಗಿದೆ. ಸ್ಯಾಂಡಲ್ವುಡ್ ನಿಧಿಮಾ ಎಂದೇ ಫೇಮಸ್ ಆಗಿರೋ ಮಿಲನಾ ನಾಗರಾಜ್ ಈ ಚಿತ್ರದ ನಾಯಕಿ. ದಿಯಾ ಸಿನಿಮಾದ ಹೀರೋ ಪೃಥ್ವಿ ಅಂಬರ್ ಚಿತ್ರದ ಹೀರೋ.
ಇನ್ನು ಸುಧಾರಾಣಿ, ಸುಂದರರಾಜ್, ಸಿಹಿಕಹಿ ಚಂದ್ರು, ಸುಧಾ ಬೆಳವಾಡಿ, ಬಾಬು ಹಿರಣಯ್ಯ, ತಬಲಾ ನಾಣಿ, ತ್ರಿವೇಣಿ ರಾವ್ , ತುಳು ನಟ ಅರವಿಂದ್ ಬೋಳಾರ್ ಸೇರಿದಂತೆ ಹಿರಿಯ ಕಲಾವಿದರ ಬಳಗವೇ ಈ ಚಿತ್ರದಲ್ಲಿದೆ.
ಫಾರ್ ರೆಜಿಸ್ಟ್ರೆಷನ್ ಸಿನಿಮಾವನ್ನ ನವೀನ್ ದ್ವಾರಕನಾಥ್ ನಿರ್ದೇಶಿಸುತ್ತಿದ್ದು, ಚಿತ್ರಕ್ಕೆ ನವೀನ್ ರಾವ್ ಬಂಡವಾಳ ಹೂಡಿದ್ದಾರೆ. ವಿವೇಕ್ ಎಸ್ ಕೆ ಅವರ ಛಾಯಾಗ್ರಹಣ, ನಾಗಾರ್ಜುನ ಶರ್ಮ ಅವರು ಬರೆದಿರುವ ಹಾಡುಗಳಿಗೆ ಹರೀಶ್ ಆರ್ ಕೆ ಸಂಗೀತ ನೀಡಿದ್ದಾರೆ.
For Regn Movie Still

