1980 ಸಿನಿಮಾದ ಟೀಸರ್ ಬಿಡುಗಡೆ ಎಲ್ಲೆಡೆ ಬೇಜಾನ್ ಸದ್ದು ಮಾಡುತ್ತಿದೆ. ಪ್ರಿಯಾಂಕಾ ಉಪೇಂದ್ರ ನಟಿಸಿರೋ ಈ ಸಿನಿಮಾ ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿದ್ದು, ಇನ್ನೇನು ಚಿತ್ರಮಂದಿರಕ್ಕೂ ಎಂಟ್ರಿ ಕೊಡೋಕೆ ಸಿಕ್ಕಾಪಟ್ಟೆ ತಯಾರಿ ನಡೆಸಿದೆ. ಟೀಸರ್ ಲಾಂಚ್ ಮಾಡಿದ ಬಳಿಕ ಚಿತ್ರತಂಡ 1980 ಸಿನಿಮಾದ ಹಿನ್ನೆಲೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದೆ
ಅಂದ್ಹಾಗೇ ಪ್ರಿಯಾಂಕಾ ಉಪೇಂದ್ರಗೆ ಇದು ಲಾಕ್ಡೌನ್ ಬಳಿಕ ಸಿಕ್ಕ ಸಿನಿಮಾ. ಕಥೆ ಕೇಳಿದ ತಕ್ಷಣವೇ ಥ್ರಿಲ್ ಆಗಿದ್ದ ಪ್ರಿಯಾಂಕಾ ಉಪೇಂದ್ರ ಹಿಂದೆ ಮುಂದೆ ನೋಡದೆ ಸಿನಿಮಾ ಒಪ್ಪಿಕೊಂಡಿದ್ದರಂತೆ. ಮೊದ ಮೊದಲು ಶೂಟಿಂಗ್ ಹೇಗಿರುತ್ತೋ ಅನ್ನೋ ಎಂದು ಟೆನ್ಷನ್ ಇತ್ತಂತೆ. ಆದ್ರೆ, ಯಾವ ಸಮಸ್ಯೆನೂ ಇಲ್ಲದೆನೇ ಶನಿವಾರಸಂತೆಯಲ್ಲಿ ಅಷ್ಟೇ ನೀಟಾಗಿ ಶೂಟಿಂಗ್ ಮುಗಿಸಿದ್ದಾರೆ ನಿರ್ದೇಶಕರು ಎಂದು ಪ್ರಿಯಾಂಕಾ ಹರ್ಷ ವ್ಯಕ್ತಪಡಿಸಿದ್ದಾರೆ.
1980 ಸಿನಿಮಾದ ನಿರ್ದೇಶಕ ರಾಜ್ಕಿರಣ್ಗಿದು ಮೊದಲ ಸಿನಿಮಾ. ಶೀರ್ಷಿಕೆಗೆ ತಕ್ಕಂತೆ ಇದು 1980 ಕಾಲಘಟ್ಟದಲ್ಲಿ ನಡೆಯುವ ಕಥೆ. ಸೈಕಲಾಜಿಕಲ್ ಥ್ರಿಲ್ಲರ್. ಪ್ರಿಯಾಂಕಾ ಉಪೇಂದ್ರರಂತೆ ಈ ಚಿತ್ರದಲ್ಲಿ ಮತ್ತೊಂದು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿರುವ ಮಾಡೆಲ್ ಕಂ ನಟಿ ಶರಣ್ಯ ಶೆಟ್ಟಿ. 1980 ಇವರಿಗೂ ಮೊದಲ ಸಿನಿಮಾವೇ.
1980ಯಲ್ಲಿ ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಶ್ರೀಧರ್, ಅರವಿಂದ್ ರಾವ್, ರಮೇಶ್ ಪಂಡಿತ್, ಶಂಕರ್ ಅಶ್ವತ್ಥ್, ಕಿಶೋರ್ ಕುಮಾರ್, ವಿಶಾಲ್ ಧೀರಜ್, ಧನುಷ್ ಗೌಡ, ಮಾಸ್ಟರ್ ಕೃತಿಕಾ, ಭಾನು ಪ್ರಿಯಾ ಇದ್ದಾರೆ. ಜೀವ ಆಂಟೋನಿ ಛಾಯಾಗ್ರಹಣ, ಚಿಂತನ್ ವಿಕಾಸ್ ಅವರ ಸಂಗೀತ, ಸಂಕಲನ ಲೋಕೇಶ್ ಪುಟ್ಟೇಗೌಡ, ನರೇಂದ್ರ ಬಾಬು ಸಂಭಾಷಣೆ ಬರೆದಿದ್ದಾರೆ.