ಪ್ರಿಯಾಂಕಾ ಚೋಪ್ರಾ ಸೋದರ ಸಂಬಂಧಿ ಮನ್ನಾರಾ ಚೋಪ್ರಾ ದಕ್ಷಿಣ ಭಾರತದ ಚಿತ್ರರಂಗಕ್ಕೆ ಪರಿಚಿತ. ತೆಲುಗು, ತಮಿಳು, ಹಿಂದಿ ಸೇರಿದಂತೆ ಕನ್ನಡದ ಸಿನಿಮಾದಲ್ಲೂ ನಟಿಸಿದ್ದಾರೆ. ಹೀಗಾಗಿ ಬಾಲಿವುಡ್ಗಿಂತ ಹೆಚ್ಚಾಗಿ ಸೌತ್ ಫಿಲ್ಮ್ ಇಂಡಸ್ಟ್ರಿಯಲ್ಲೇ ಮನ್ನಾರಾ ಚಿರಪರಿಚಿತ. ಈಕೆ ಈಗ ಹಾಲೇ ದಿಲ್ ಅನ್ನೋ ವೆಬ್ ಫಿಲ್ಮ್ನಲ್ಲಿ ನಟಿಸಿದ್ದಾಳೆ.
ಅಂದ್ಹಾಗೆ ಮನ್ನಾರಾ ಚೋಪ್ರಾ, ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾಳ ತಂದೆಯ ತಂಗಿ ಮಗಳು. ಸುಮಾರು 40ಕ್ಕೂ ಅಧಿಕ ಜಾಹೀರಾತುಗಳಲ್ಲಿ ನಟಿಸಿದ್ದಾಳೆ. ಎಲ್ಲಕ್ಕಿಂತ ಹೆಚ್ಚಾಗಿ ಈಕೆ ಕನ್ನಡ ಸಿನಿಮಾದಲ್ಲೂ ನಟಿಸಿದ್ದಾಳೆ. ಪುರಿ ಜಗನ್ನಾಥ್ ನಿರ್ದೇಶಿಸಿದ ರೋಗ್ ಚಿತ್ರದಲ್ಲಿ ಇಶಾನ್ ಜೊತೆ ಮನ್ನಾರಾ ರೊಮ್ಯಾನ್ಸ್ ಮಾಡಿದ್ದಳು.
ಮನ್ನಾರಾ ಚೋಪ್ರಾ, 2014ರಲ್ಲಿ ಜಿದ್ ಚಿತ್ರದ ಮೂಲಕ ಬಾಲಿವುಡ್ಗೆ ಪ್ರವೇಶ ಮಾಡಿದ್ದಳು. ಈಗ ಹಾಲೇ ದಿಲ್ ಅನ್ನೋ ವೆಬ್ ಫಿಲ್ಮ್ನಲ್ಲಿ ನಟಿಸಿದ್ದಾಳೆ. ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಅವರ ಬಾಲಿಫೇಮ್ ಒಟಿಟಿ ವೇದಿಕೆಯಲ್ಲಿ ಮನ್ನಾರಾ ಚೋಪ್ರಾ ನಟಿಸಿದ ಹಾಲೇ ದಿಲ್ ಬಿಡುಗಡೆಯಾಗಲಿದೆ.
ಗ್ಲಾಮರಸ್ ಆಗಿ ಕಾಣಿಸಿಕೊಂಡಿರೊ ಮನ್ನಾರಾ ಚೋಪ್ರಾ ಹಾಲೇ ದಿಲ್ ಅನ್ನೋ ವೆಬ್ ಫಿಲ್ಮ್ ಮೂಲಕ ಬಾಲಿವುಡ್ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಮೇ 1 ರಂದು ಬಾಲಿಫೇಮ್ನಲ್ಲಿ ಹಾಲೇ ಬಿಡುಗಡೆಯಾಗಲಿದ್ದು, ಯಶಸ್ಸು ಕಾಣುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ.