ನಟಿ ಪ್ರಿಯಾಂಕಾ ಛೋಪ್ರಾ ಸದ್ಯ ತನ್ನ ಗಂಡ ನಿಕ್ ಜೋನಸ್ ಮತ್ತು ಆತನ ತಂದೆ ತಾಯಿ ಜೊತೆ ಲಂಡನ್ನಿನಲ್ಲಿ ವಾಸಿಸುತ್ತಿದ್ದಾರೆ. ಬಣ್ಣಗಳ ಹಬ್ಬ ಹೋಳಿಯನ್ನು ಕುಟುಂಬದ ಜೊತೆಗೆ ಸಂತಸದಿಂದ ಆಚರಿಸಿದ್ದಾರೆ ಈ ನಟಿ. ಇದರ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಕೂಡಾ. ಬಣ್ಣಗಳ ಹಬ್ಬ ಹೋಳಿ ತನ್ನ ಅತ್ಯಂತ ನೆಚ್ಚಿನ ಹಬ್ಬ. ಈ ಸಂದರ್ಭದಲ್ಲಿ ಎಲ್ಲರೂ ಖುಷಿಯಾಗಿ ಹಬ್ಬ ಆಚರಿಸೋಣ, ಆದ್ರೆ ನಮ್ಮ ಮನೆಗಳೊಳಗೇ ಆಚರಿಸೋಣ ಎಂದಿದ್ದಾರೆ ಪ್ರಿಯಾಂಕಾ.


ಪ್ರಿಯಾಂಕಾಗೆ ಹಬ್ಬಗಳನ್ನು ಅದ್ಧೂರಿಯಾಗಿ ಆಚರಿಸೋದು ಅಂದ್ರೆ ಬಹಳ ಇಷ್ಟ. ದೀಪಾವಳಿ, ಹ್ಯಾಲೋವೀನ್, ಕ್ರಿಸ್ಮಸ್ ಯಾವ ಹಬ್ಬವೇ ಆಗಿರ್ಲಿ ಅದನ್ನ ಕುಟುಂಬ, ಸ್ನೇಹಿತರು ಎಲ್ಲರ ಜೊತೆಗೆ ಅದ್ಧೂರಿಯಾಗಿ ಆಚರಿಸೋದು ಅವರಿಗೆ ಬಹಳ ಖುಷಿ ಕೊಡುತ್ತದೆ. ಆದ್ರೆ ಸದ್ಯ ಎಲ್ಲೆಡೆ ಕೊರೊನಾ ಎರಡನೇ ಅಲೆಯ ಹಾವಳಿ ಹೆಚ್ಚಾಗಿರೋದ್ರಿಂದ ಅದ್ಧೂರಿಯ ಆಚರಣೆಗಳಿಗೆ ಬ್ರೇಕ್ ಬಿದ್ದಿದೆ. ಹಾಗಾಗಿ ಸರಳವಾಗಿ ಬಣ್ಣಗಳನ್ನು ಎರಚಿ ಹೋಳಿ ಹಬ್ಬ ಆಚರಿಸಿದೆ ಪ್ರಿಯಾಂಕಾ ಕುಟುಂಬ.
ಪ್ರಿಯಾಂಕಾರ ಹೋಳಿ ಚಿತ್ರಗಳನ್ನು ನೋಡಿ ಆಕೆಯ ಸಹನಟಿ ಮೈಂಡಿ ಕೇಲಿಂಗ್ ಕಳೆದ ವರ್ಷ ಪ್ರಿಯಾಂಕಾ ಪ್ಲಾನ್ ಮಾಡಿದ್ದ ಗ್ರ್ಯಾಂಡ್ ಹೋಲಿ ಪಾರ್ಟಿಯನ್ನು ನೆನಪಿಸಿಕೊಂಡಿದ್ದಾರೆ. 2020ರಲ್ಲಿ ಅದೆಷ್ಟು ದೊಡ್ಡ ಹೋಲಿ ಪಾರ್ಟಿ ಪ್ಲಾನ್ ಮಾಡಿದ್ದೆ. ಆದ್ರೆ ಅದೇ ಬಹುಶಃ ಕೊನೆಯ ಸೆಲಬ್ರೇಶನ್ ಎನಿಸುತ್ತೆ. ಅದರ ನಂತರ ಎಲ್ಲಾ ಕಡೆ ಲಾಕ್ ಡೌನ್ ಆಗಿಹೋಯ್ತು. ಮುಂದಿನ ವರ್ಷ ಅಂದ್ರೆ 2022ರ ಹೋಲಿ ಹಬ್ಬಕ್ಕಾಗಿ ನಾನು ಕಾಯುವೆ ಎಂದಿದ್ದಾರೆ ಈ ಹಾಸ್ಯನಟಿ. ಒಟ್ನಲ್ಲಿ ಹಾಲಿವುಡ್ ಮಂದಿಗೂ ಭಾರತದ ಹಬ್ಬಗಳ ಪರಿಚಯ ಮಾಡಿಕೊಡ್ತಿದ್ದಾರೆ ಪ್ರಿಯಾಂಕಾ.